ವೇಶ್ಯೆಯ ಸಾವಿನ ಸುತ್ತ ಸಾಗುವ ‘ಕೇರಳ ಕ್ರೈಮ್ ಫೈಲ್ಸ್’; ಸೂಪರ್ ಹಿಟ್ ಆದ ಈ ವೆಬ್​ ಸೀರಿಸ್​ನಲ್ಲಿ ಏನೆಲ್ಲ ಇದೆ?

|

Updated on: Jun 28, 2023 | 6:30 AM

ಲಾಡ್ಜ್ ಒಂದರಲ್ಲಿ ವೇಶ್ಯೆ ಒಬ್ಬಳ ಕೊಲೆ ಆಗುತ್ತದೆ. ಬಾತ್​ರೂಂನಲ್ಲಿ ಆಕೆಯ ಹೆಣ ಸಿಗುತ್ತದೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಈ ಕೊಲೆಯ ಹಿಂದಿನ ಕಾರಣ ಏನು? ಎಂಬುದನ್ನು ವೆಬ್​ ಸೀರಿಸ್​ನಲ್ಲಿ ನೋಡಬೇಕು.

ವೇಶ್ಯೆಯ ಸಾವಿನ ಸುತ್ತ ಸಾಗುವ ‘ಕೇರಳ ಕ್ರೈಮ್ ಫೈಲ್ಸ್’; ಸೂಪರ್ ಹಿಟ್ ಆದ ಈ ವೆಬ್​ ಸೀರಿಸ್​ನಲ್ಲಿ ಏನೆಲ್ಲ ಇದೆ?
ಕೇರಳ ಫೈಲ್ಸ್
Follow us on

‘ದಿ ಕೇರಳ ಸ್ಟೋರಿ’ ಹೆಸರಿನ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ಇದಾದ ಬೆನ್ನಲ್ಲೇ ‘ಕೇರಳ ಕ್ರೈಮ್ ಫೈಲ್ಸ್​’ (Kerala Crime Files) ಹೆಸರಿನ ವೆಬ್ ಸೀರಿಸ್​ ತೆರೆಗೆ ಬಂದಿದೆ. ಇದು ಮೂಲ ಮಲಯಾಳಂ ಭಾಷೆಯ ವೆಬ್ ಸೀರಿಸ್ ಆಗಿದ್ದು, ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲೂ ಲಭ್ಯವಿದೆ. ಈ ಸೀರಿಸ್ ಜೂನ್​ 23ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಉಳಿದ ಭಾಷೆಗಳಿಗೆ ಹೋಲಿಕೆ ಮಾಡಿದರೆ ಮಲಯಾಳಂನಲ್ಲಿ (Malayalam Cinema Indystry) ವೆಬ್ ಸೀರಿಸ್​​ಗಳು ಕಡಿಮೆಯೇ. ಈ ಕಾರಣದಿಂದಲೂ ಅಪರೂಪದ ಪ್ರಯತ್ನ ಮಾಡಿ ಗಮನ ಸೆಳೆದಿದೆ ತಂಡ.

ಲಾಡ್ಜ್ ಒಂದರಲ್ಲಿ ವೇಶ್ಯೆ ಒಬ್ಬಳ ಕೊಲೆ ಆಗುತ್ತದೆ. ಬಾತ್​ರೂಂನಲ್ಲಿ ಆಕೆಯ ಹೆಣ ಸಿಗುತ್ತದೆ. ಇದನ್ನು ನೋಡಿದ ಲಾಡ್ಜ್​ ರಿಸೆಪ್ಶನಿಸ್ಟ್ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಈ ಕೊಲೆಯ ಹಿಂದಿನ ಕಾರಣ ಏನು? ಆತ ಹೇಗೆ ತಪ್ಪಿಸಿಕೊಳ್ಳುತ್ತಾನೆ? ಪೊಲೀಸರು ಹೇಗೆಲ್ಲ ಕಷ್ಟಪಡುತ್ತಾರೆ ಅನ್ನೋದು ಈ ಸೀರಿಸ್​ನಲ್ಲಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ ಎಲ್ಲರ ಗಮನ ಸೆಳೆಯುತ್ತಿದೆ.

‘ಕೇರಳ ಕ್ರೈಮ್ ಫೈಲ್ಸ್​’ ಸೀರಿಸ್​ನಲ್ಲಿ ಅಜು ವರ್ಗೀಸ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾಡಿರುವ ಪೊಲೀಸ್ ಪಾತ್ರ ಎಲ್ಲರ ಗಮನ ಸೆಳೆದಿದೆ. ಇದರ ಜೊತೆ ಲಾಲ್, ಶ್ರೀಜಿತ್ ಮಹದೇವನ್ ಸೇರಿ ಎಲ್ಲಾ ಕಲಾವಿದರು ಗಮನ ಸೆಳೆದಿದ್ದಾರೆ. ಈ ಸೀರಿಸ್ ಎಲ್ಲರಿಗೂ ಇಷ್ಟ ಆಗುತ್ತಿದೆ.

ಸಾಮಾನ್ಯವಾಗಿ ವೆಬ್ ಸೀರಿಸ್ ಎಂದಾಗ ಹತ್ತಾರು ಎಪಿಸೋಡ್ ಇರುತ್ತವೆ. ಪ್ರತಿ ಎಪಿಸೋಡ್ ಅವಧಿ ಮುಕ್ಕಾಲು ಗಂಟೆ ಅಥವಾ ಒಂದು ಗಂಟೆಯನ್ನೂ ಮೀರಿರುತ್ತದೆ. ಆದರೆ, ‘ಕೇರಳ ಫೈಲ್ಸ್’ ವಿಚಾರದಲ್ಲಿ ಹಾಗಿಲ್ಲ. ಇಲ್ಲಿ ಇರೋದು ಕೇವಲ ಆರು ಎಪಿಸೋಡ್​ಗಳು. ಪ್ರತೀ ಎಪಿಸೋಡ್​ನ ಅವಧಿ 30 ನಿಮಿಷ ಮೀರಿಲ್ಲ. ಸಸ್ಪೆನ್ಸ್ ಜೊತೆ ಭಾವನಾತ್ಮಕ ವಿಚಾರಗಳನ್ನು ಕೂಡ ಸೇರಿಸಲಾಗಿದೆ.

ಇದನ್ನೂ ಓದಿ: ‘ಪತ್ನಿಗೆ ಅನೈತಿಕ ಸಂಬಂಧ ಇದೆ, ಡ್ರಗ್ಸ್ ತೆಗೆದುಕೊಳ್ಳುತ್ತಾಳೆ’; ಕನ್ನಡ ನಟ, ನಿರ್ಮಾಪಕನ ದೂರು

ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಈ ವೆಬ್ ಸರಣಿ ಪ್ರಸಾರ ಕಂಡಿದೆ. ಹೇಷಮ್ ಅಬ್ದುಲ್ ವಹಾಬ್ ಅವರು ಈ ಸೀರಿಸ್​ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತದ ಮೂಲಕ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.  ಅಹ್ಮದ್ ಕಬೀರ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಯಾವುದೇ ಹೆಚ್ಚಿನ ಡ್ರಾಮಾಗೆ ಜಾಗ ನೀಡದೇ ಸೀರಿಸ್ ರಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ