‘ಪತ್ನಿಗೆ ಅನೈತಿಕ ಸಂಬಂಧ ಇದೆ, ಡ್ರಗ್ಸ್ ತೆಗೆದುಕೊಳ್ಳುತ್ತಾಳೆ’; ಕನ್ನಡ ನಟ, ನಿರ್ಮಾಪಕನ ದೂರು

ಡ್ರಗ್ ಪೆಡ್ಲರ್ ಜೊತೆ ದೈಹಿಕ ಸಂಪರ್ಕ ನಡೆಸುವಾಗಲೇ ಪತ್ನಿ ಸಿಕ್ಕಿ ಬಿದ್ದಿದ್ದಾಳೆ ಎಂಬುದು ನಿರ್ಮಾಪಕನ ಆರೋಪ. ಈ ಸಂಬಂಧ ದೂರು ದಾಖಲಾಗಿದೆ.

‘ಪತ್ನಿಗೆ ಅನೈತಿಕ ಸಂಬಂಧ ಇದೆ, ಡ್ರಗ್ಸ್ ತೆಗೆದುಕೊಳ್ಳುತ್ತಾಳೆ’; ಕನ್ನಡ ನಟ, ನಿರ್ಮಾಪಕನ ದೂರು
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on: Jun 26, 2023 | 9:28 AM

ಚಿತ್ರರಂಗದಲ್ಲಿ ತೊಡಗಿಕೊಂಡಿದ್ದವರು ಸಣ್ಣ ಕಿರಿಕ್ ಮಾಡಿಕೊಂಡರೂ ಅದು ದೊಡ್ಡ ಸುದ್ದಿ ಆಗುತ್ತದೆ. ಈಗ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಟಿ. ಚಂದ್ರಶೇಖರ್ (T. Chandrashekhar) ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತ್ನಿ ಮಾದಕದ್ರವ್ಯ ವ್ಯಸನಿ ಆಗಿದ್ದು, ಡ್ರಗ್ಸ್​ ಪಡೆಯಲು ಪೆಡ್ಲರ್ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಚಂದ್ರಶೇಖರ್ ದೂರಿದ್ದಾರೆ. ಸದ್ಯ ಈ ಸಂಬಂಧ ಬೆಂಗಳೂರಿನ (Bengaluru) ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರ ಗೊತ್ತಾಗಿದ್ದು ಹೇಗೆ?

ಚಂದ್ರಶೇಖರ್ ಹೊರಗೆ ತೆರಳಿದ್ದರು. ಈ ವೇಳೆ ಡ್ರಗ್ ಪೆಡ್ಲರ್ ಇವರ ಮನೆಗೆ ಬಂದಿದ್ದನಂತೆ. ಡ್ರಗ್ ಪೆಡ್ಲರ್ ಜೊತೆ ದೈಹಿಕ ಸಂಪರ್ಕ ನಡೆಸುವಾಗಲೇ ಪತ್ನಿ ಸಿಕ್ಕಿ ಬಿದ್ದಿದ್ದಾಳೆ ಎಂಬುದು ಚಂದ್ರಶೇಖರ್ ಆರೋಪ. ಇದನ್ನು ಚಂದ್ರಶೇಖರ್ ಪ್ರಶ್ನಿಸಿದ್ದರು. ಈ ವೇಳೆ ಪತ್ನಿ ಹಾಗೂ ಡ್ರಗ್ ಪೆಡ್ಲರ್ ಎನ್ನಲಾದ ಲಕ್ಷ್ಮೀಶ್ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಈ ಕಾರಣಕ್ಕೆ ಪತ್ನಿ ಹಾಗು ಆಕೆಯ ಪ್ರಿಯತಮ ಎಂದು ಆರೋಪಿಸಿರುವ ಲಕ್ಷ್ಮೀಶ್ ಪ್ರಭು ಮೇಲೆ ಚಂದ್ರಶೇಖರ್ ಕೇಸ್ ಹಾಕಿದ್ದಾರೆ.

ಡ್ರಗ್ ಬಿಡಿಸಲು ಚಂದ್ರಶೇಖರ್ ಪ್ರಯತ್ನ

‘ಪತ್ನಿ ಡ್ರಗ್ ಬಿಡಿಸಲು ಸಾಕಷ್ಟು ದಿನಗಳಿಂದ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಿಲ್ಲ ಆಕೆ ಡ್ರಗ್ ಪೆಡ್ಲರ್ ಜೊತೆಯೇ ಸಂಬಂಧ ಇರಿಸಿಕೊಂಡಿದ್ದಾಳೆ’ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.

ಪ್ರತಿ ದೂರು ನೀಡಿದ ಪತ್ನಿ

ಇತ್ತ ಮಹಿಳೆ ಪತಿಯ ಮೇಲೆ ಪತ್ನಿ ಪ್ರತಿ ದೂರು ನೀಡಿದ್ದಾರೆ. ‘ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತೀನಿ ಎಂದು ಚಂದ್ರಶೇಖರ್ ಬೆದರಿಕೆ ಹಾಕಿದ್ದಾರೆ. ಅಷ್ಟಲ್ಲದೆ ನನ್ನ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಲಾಗಿದೆ. ಚಾಕುವಿನಿಂದ ಹಲ್ಲೆ ಮಾಡಲಾಗಿದೆ’ ಎಂದು ಚಂದ್ರಶೇಖರ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿರುವ ನಿರ್ಮಾಪಕನ ಐಶಾರಾಮಿ ಬದುಕು ಹೀಗಿತ್ತು

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚಂದ್ರಶೇಖರ್

ಚಂದ್ರಶೇಖರ್ ಅವರು ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ‘ಹೀಗೊಂದು ದಿನ’ ಹಾಗೂ ‘ಅಪ್ಪುಗೆ’ ಹೆಸರಿನ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್