Kotigobba 3: ಸುದೀಪ್ ಫ್ಯಾನ್ಸ್ಗೆ ಸಿಹಿ ಸುದ್ದಿ; ಒಟಿಟಿಯಲ್ಲಿ ‘ಕೋಟಿಗೊಬ್ಬ 3’ ರಿಲೀಸ್ ಆಗೋಕೆ ದಿನಾಂಕ ಫಿಕ್ಸ್
ಕಿಚ್ಚ ಸುದೀಪ್ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಹೊಂದಿದೆ. ಸುದೀಪ್ ಅವರು ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡಿತ್ತು.
ಸುದೀಪ್ (Kichcha Sudeep) ನಟನೆಯ ‘ಕೋಟಿಗೊಬ್ಬ 3’ (Kotigobba 3) ಸಿನಿಮಾ ಕೆಲ ಸಮಸ್ಯೆಗಳನ್ನು ಎದುರಿಸಿದ್ದರಿಂದ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಮಾಯಿ (Box Office Collection) ಮಾಡಿದ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿತ್ತು. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಮೇಲಾಗಿದೆ. ಅನೇಕ ಕಡೆಗಳಲ್ಲಿ ಕಿಚ್ಚ ಸುದೀಪ್ ಚಿತ್ರ ಪ್ರದರ್ಶನ ಕಾಣುತ್ತಿದೆ. ಈಗ ಚಿತ್ರತಂಡ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋಕೆ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ‘ಕೋಟಿಗೊಬ್ಬ 3’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಹಾಗಾದರೆ, ರಿಲೀಸ್ ದಿನಾಂಕ ಯಾವುದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಿಚ್ಚ ಸುದೀಪ್ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಹೊಂದಿದೆ. ಸುದೀಪ್ ಅವರು ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡಿತ್ತು. ಕೆಲವರು ಎರಡು ಬಾರಿ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಇನ್ನೂ ಕೆಲವರು ಕೊವಿಡ್ಗೆ ಭಯ ಬಿದ್ದು ಮನೆಯಲ್ಲೇ ಇದ್ದರು. ಇದರಿಂದ ಸಿನಿಮಾ ನೋಡೋಕೆ ಆಗಿರಲಿಲ್ಲ. ಆದರೆ, ಈಗ ಅವರೆಲ್ಲರಿಗೂ ಸಿಹಿ ಸುದ್ದಿ ಸಿಕ್ಕಿದೆ. ‘ಕೋಟಿಗೊಬ್ಬ 3’ ಸಿನಿಮಾ ನವೆಂಬರ್ 23ರಂದು ಅಮೇಜಾನ್ ಪ್ರೈಮ್ನಲ್ಲಿ ತೆರೆಗೆ ಬರುತ್ತಿದೆ.
ಅಭಿಮಾನಿಯೋರ್ವ ಟ್ವಿಟರ್ನಲ್ಲಿ ಅಮೇಜಾನ್ ಪ್ರೈಮ್ ಹೆಲ್ಪ್ ಡೆಸ್ಕ್ಗೆ ‘ಕೋಟಿಗೊಬ್ಬ 3’ ಯಾವಾಗ ರಿಲೀಸ್ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಅಮೇಜಾನ್ ಪ್ರೈಮ್ ವಿಡಿಯೋ ಉತ್ತರ ನೀಡಿದೆ. ನವೆಂಬರ್ 23ಕ್ಕೆ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Finally #Kotigobba3 on prime on 23rd. #Kotigobba3onprime . Spread the date and spread the love. @KicchaSudeep @TeamKiccha @MHSKFC @KSFA_Official @KicchafansKKSFA https://t.co/3gqMaZRulL
— santosh✋ⱽⁱᵏʳᵃⁿᵗᴿᵒⁿᵃ (@san3148) November 18, 2021
‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್ ವಿಳಂಬವಾದರೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಮೊದಲ ದಿನ ‘ಕೋಟಿಗೊಬ್ಬ 3’ ಬರೋಬ್ಬರಿ 12.5 ಕೋಟಿ ರೂಪಾಯಿ ಗಳಿಸಿತ್ತು. ನಾಲ್ಕು ದಿನಕ್ಕೆ ಸಿನಿಮಾ ಬರೋಬ್ಬರಿ 40.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ನಿರೂಪಣೆಯಿಂದ ಅರುಣ್ ಸಾಗರ್ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್
Published On - 1:44 pm, Fri, 19 November 21