ಮಲಯಾಳಂನಲ್ಲಿ ಹೊಸ ದಾಖಲೆ ಬರೆದ ‘ಲೋಕಃ’; ಒಟಿಟಿಗೆ ಯಾವಾಗ?
‘ಲೋಕಃ’ ಸಿನಿಮಾ ಕೇವಲ 30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ. ಈ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ಇನ್ನೂ ಹಲವು ಸ್ಥಳಗಳಲ್ಲಿ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅದೇ ಸಮಯದಲ್ಲಿ, ಒಟಿಟಿಯಲ್ಲಿಯೂ ಈ ಸಿನಿಮಾವನ್ನು ನೋಡಲು ಬಯಸುವ ಅನೇಕ ಜನರಿದ್ದಾರೆ. ಈಗ ಅವರ ಆಸೆ ಈಡೇರಲಿದೆ.

‘ಲೋಕಃ: ಚಾಪ್ಟರ್ 1-ಚಂದ್ರ’ ಸಿನಿಮಾ ಸೂಪರ್ ಹಿಟ್ ಆಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲು ಈ ಸಿನಿಮಾದ ಬಗ್ಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಈ ಸಣ್ಣ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸಿತು. ದಾಖಲೆಯ ಕಲೆಕ್ಷನ್‌ಗಳೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಆಸಕ್ತಿದಾಯಕ ಕಥಾಹಂದರ, ರೋಮಾಂಚಕ ದೃಶ್ಯಗಳು, ಬೆರಗುಗೊಳಿಸುವ ಸಾಹಸ ದೃಶ್ಯಗಳು ಮತ್ತು ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರಿಗೆ ಉತ್ತಮ ಥ್ರಿಲ್ ನೀಡಿತು. ಈ ಸಿನಿಮಾ ಒಟಿಟಿಗೆ ಬರಲೂ ರೆಡಿ ಆಗಿದೆ
‘ಲೋಕಃ’ ಸಿನಿಮಾ ಕೇವಲ 30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ. ಈ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ಇನ್ನೂ ಹಲವು ಸ್ಥಳಗಳಲ್ಲಿ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅದೇ ಸಮಯದಲ್ಲಿ, ಒಟಿಟಿಯಲ್ಲಿಯೂ ಈ ಸಿನಿಮಾವನ್ನು ನೋಡಲು ಬಯಸುವ ಅನೇಕ ಜನರಿದ್ದಾರೆ. ಈಗ ಅವರ ಆಸೆ ಈಡೇರಲಿದೆ. ಈ ಬ್ಲಾಕ್‌ಬಸ್ಟರ್ ಸಿನಿಮಾ ದೀಪಾವಳಿ ಉಡುಗೊರೆಯಾಗಿ ಒಟಿಟಿಗೆ ಬರಲಿದೆ. ಅಕ್ಟೋಬರ್ 20ರಿಂದ ಮಲಯಾಳಂ, ಕನ್ನಡ ಮತ್ತು ಇತರ ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.
ಆಗಸ್ಟ್ 28ರಂದು ‘ಲೋಕಃ ಚಾಪ್ಟರ್ 1 ಚಂದ್ರ’ ಸಿನಿಮಾನ ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಪ್ರೊಡಕ್ಷನ್ ಹಂಚಿಕೆ ಮಾಡಿತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇಡೀ ಸಿನಿಮಾದ ಕಥೆ ಬೆಂಗಳೂರಿನಲ್ಲಿಯೇ ಸಾಗುತ್ತದೆ ಅನ್ನೋದು ವಿಶೇಷ. ಈ ಸಿನಿಮಾ ಇಲ್ಲಿಯವರೆಗೆ ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬುದು ಗಮನಾರ್ಹ.
ಇದನ್ನೂ ಓದಿ: ‘ಲೋಕಃ’ ಸಿನಿಮಾ ಭರ್ಜರಿ ಕಲೆಕ್ಷನ್, ಲಾಭವನ್ನು ಹಂಚಲು ಮುಂದಾದ ನಿರ್ಮಾಪಕ
ಡೊಮಿನಿಕ್ ನಿರ್ದೇಶನದ ‘ಲೋಕಃ’ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮುಲು’ ಖ್ಯಾತಿಯ ನಸ್ಲೆನ್, ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ, ವಿಜಯರಾಘವನ್, ಸಂಧು ಸಲೀಂಕುಮಾರ್, ರಘುನಂದ ಪಲೇರಿ, ಶಿವಜಿತ್ ಪದ್ಮನಾಭನ್, ಜೈನ್ ಆಂಡ್ರ್ಯೂಸ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದುಲ್ಕರ್ ಸಲ್ಮಾನ್, ಟುವಿನೋ ಥಾಮಸ್ ಮತ್ತು ಸೌಬಿನ್ ಶಾಹಿರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಉಡುಗೊರೆಯಾಗಿ ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



