ಮಹೇಶ್ ಬಾಬು (Mahesh Babu) ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರು ‘SSMB28’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹಿಟ್ ಕಾಂಬಿನೇಷನ್ ಎನಿಸಿಕೊಂಡಿರುವ ಈ ಜೋಡಿ ಮೂರನೇ ಬಾರಿಗೆ ಮತ್ತೆ ಒಂದಾಗಿದೆ. ಈ ಸಿನಿಮಾದ ಒಟಿಟಿ ಹಕ್ಕು ಮಾರಾಟ ಆದ ಬಗ್ಗೆ ನೆಟ್ಫ್ಲಿಕ್ಸ್ ಇಂಡಿಯಾ ಈ ಮೊದಲು ಘೋಷಣೆ ಮಾಡಿತ್ತು. ಈಗ ಈ ಸಿನಿಮಾ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ ಎನ್ನುವ ವಿಚಾರ ರಿವೀಲ್ ಆಗಿದೆ. ಚಿತ್ರ ಒಂದರ ಒಟಿಟಿ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ಟಾಲಿವುಡ್ನಲ್ಲಿ ಇದೇ ಮೊದಲು ಎನ್ನಲಾಗಿದೆ.
ಮಹೇಶ್ ಬಾಬು ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ 2022ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅವರು ‘SSMB28’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆದರು. ಆದರೆ, ಮಹೇಶ್ ಬಾಬು ಕುಟುಂಬದಲ್ಲಿ ಸಾಕಷ್ಟು ದುರ್ಘಟನೆಗಳು ನಡೆದವು. ಅಪ್ಪ-ಅಮ್ಮನನ್ನು ಕೆಲವೇ ತಿಂಗಳ ಅಂತರದಲ್ಲಿ ಮಹೇಶ್ ಬಾಬು ಕಳೆದುಕೊಂಡರು. ಈ ಕಾರಣಕ್ಕೆ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಹೈದರಾಬಾದ್ನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ.
ಮೂಲಗಳ ಪ್ರಕಾರ ‘SSMB28’ ಚಿತ್ರದ ಡಿಜಿಟಲ್ ಹಕ್ಕನ್ನು ಪಡೆಯಲು ನೆಟ್ಫ್ಲಿಕ್ಸ್ 81 ಕೋಟಿ ರೂಪಾಯಿ ನೀಡಿದೆ ಎನ್ನಲಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ‘SSMB28’ ಪ್ರಸಾರ ಕಾಣಲಿದೆ. ಹಾಗಂತ ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿಲ್ಲ. ಥಿಯೇಟರ್ನಲ್ಲಿ ರಿಲೀಸ್ ಆದ 50 ದಿನಗಳ ಬಳಿಕ ಸಿನಿಮಾ ಒಟಿಟಿಗೆ ಕಾಲಿಡಲಿದೆ.
Penu thuphaanu thalonchaina choodaataniki memu ready. Meeru?#SSMB28 is coming on Netflix in Telugu, Tamil, Malayalam and Kannada as a post theatrical release! ?#NetflixLoEmSpecial #NetflixPandaga #SSMB28 pic.twitter.com/34teGAQz2m
— Netflix India South (@Netflix_INSouth) January 14, 2023
ಇದನ್ನೂ ಓದಿ: Mahesh Babu: ‘ವಿಜಯ್ ಅವರನ್ನು ನೋಡಿ ಮಹೇಶ್ ಬಾಬು ಕಲಿಯಬೇಕು’; ನೇರವಾಗಿ ಕಿವಿಮಾತು ಹೇಳಿದ ‘ಪ್ರಿನ್ಸ್’ ಫ್ಯಾನ್ಸ್
ಸಾಮಾನ್ಯವಾಗಿ ಸಿನಿಮಾ ನೇರವಾಗಿ ಒಟಿಟಿಗೆ ರಿಲೀಸ್ ಆಗುತ್ತದೆ ಎಂದರೆ ಹೆಚ್ಚಿನ ಮೊತ್ತ ನೀಡಲಾಗುತ್ತದೆ. ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ಸಿನಿಮಾ ಒಟಿಟಿ ಹಾದಿ ಹಿಡಿದರೆ ಅದಕ್ಕೆ ಕಡಿಮೆ ಬಿಡ್ ಮಾಡಲಾಗುತ್ತದೆ. ಆದಾಗ್ಯೂ ‘SSMB28’ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ನೀಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ತೆಲುಗು ಚಿತ್ರ ಒಂದು ಒಟಿಟಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರೋದು ಇದೇ ಮೊದಲು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Thu, 2 February 23