‘ಮರಕ್ಕಾರ್’ ಒಟಿಟಿ ಬಿಡುಗಡೆಯ ದಿನಾಂಕ ಘೋಷಣೆ; ಚಿತ್ರವನ್ನು ಕನ್ನಡದಲ್ಲೂ ವೀಕ್ಷಿಸಬಹುದೇ? ಇಲ್ಲಿದೆ ಮಾಹಿತಿ
Marakkar: Lion of the Arabian Sea OTT release: ಮೋಹನ್ಲಾಲ್ ನಟನೆಯ ‘ಮರಕ್ಕಾರ್: ಅರಬ್ಬಿಕಡಲಿಂಟೆ ಸಿಂಹಮ್’ ಚಿತ್ರ ಒಟಿಟಿ ಬಿಡುಗಡೆಯ ದಿನಾಂಕ ಘೋಷಿಸಿದೆ. ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗಲಿದೆಯೇ? ಇಲ್ಲಿದೆ ಉತ್ತರ.
ಅಭಿಮಾನಿಗಳು ಚಿತ್ರರಂಗದ ಒತ್ತಾಸೆಯಂತೆ ಮೋಹನ್ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಹುನಿರೀಕ್ಷಿತ ‘ಮರಕ್ಕಾರ್: ಅರಬ್ಬಿ ಕಡಲಿಂಟೆ ಸಿಂಹಮ್’ ಚಿತ್ರ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆದರೆ ವೀಕ್ಷಕರಿಂದ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಅದಾಗ್ಯೂ ತಾಂತ್ರಿಕವಾಗಿ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದೀಗ ‘ಮರಕ್ಕಾರ್’ ಒಟಿಟಿ ಮೂಲಕ ಸಿನಿ ಪ್ರೇಮಿಗಳನ್ನು ತಲುಪಲು ಸಜ್ಜಾಗಿದೆ. ಡಿಸೆಂಬರ್ 17ರಂದು ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ‘ಮರಕ್ಕಾರ್’ ಚಿತ್ರ ಒಟಿಟಿ ಬಿಡುಗಡೆಯಾಗಲಿದೆ. ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಪ್ರೈಮ್ನಲ್ಲಿ ತೆರೆ ಕಾಣಲಿದೆ ಎಂದು ತಿಳಿಸಲಾಗಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್, ಕೀರ್ತಿ ಸುರೇಶ್, ನೆಡುಮುಡಿ ವೇಣು, ಪ್ರಣವ್ ಮೋಹನ್ಲಾಲ್ ಮೊದಲಾದ ಖ್ಯಾತನಾಮರು ಬಣ್ಣಹಚ್ಚಿದ್ದಾರೆ.
ಚಿತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ ಪ್ರತಿಕ್ರಿಯಿಸಿದ ಮೋಹನ್ಲಾಲ್, ‘‘ಜನರ ಪ್ರತಿಕ್ರಿಯೆ ನೋಡಿ ಬಹಳ ಸಂತಸವಾಗಿದೆ. ಭಾರತದ ಮೊದಲ ನೌಕಾ ಕಮಾಂಡರ್ ಕುಂಜಲಿ ಮರಕ್ಕರ್ ಪಾತ್ರವನ್ನು ನಿರ್ವಹಿಸಿರುವುದು ನನಗೆ ಹೆಮ್ಮೆಯ ಸಂಗತಿ’’ ಎಂದಿದ್ದಾರೆ. ಅಲ್ಲದೇ ಅಭಿಮಾಣಿಗಳ ಪ್ರೀತಿಗೆ ಅವರು ಧನ್ಯಬವಾದ ಸಮರ್ಪಿಸಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಚಿತ್ರದ ಒಟಿಟಿ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದು, ‘‘ಇದಕ್ಕಾಗಿ ಕಾಯುತ್ತಿದ್ದೇನೆ. ಭಾರತ ಹಾಗೂ ವಿಶ್ವಾದ್ಯಂತ ಒಟಿಟಿ ಮೂಲಕ ಚಿತ್ರ ಜನರನ್ನು ತಲುಪಲಿದೆ’’ ಎಂದು ಹೇಳಿದ್ದಾರೆ.
This sea is ruled…by a lion! ? Watch #MarakkarOnPrime, Dec. 17@Mohanlal @priyadarshandir @antonypbvr @SunielVShetty @akarjunofficial @ManjuWarrier4 @kalyanipriyan @impranavlal @KeerthyOfficial @aashirvadcine pic.twitter.com/xObu9EJXw8
— amazon prime video IN (@PrimeVideoIN) December 13, 2021
ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಸಿನಿಮಾವೆಂದು ‘ಮರಕ್ಕಾರ್’ ಗುರುತಿಸಕೊಂಡಿದೆ. ಈಗಾಗಲೇ ಚಿತ್ರಕ್ಕೆ 2021ರ ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಲ್ಲಿ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ಮತ್ತು ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ಚಿತ್ರಕ್ಕೆ ಪ್ರಶಸ್ತಿಗಳು ಲಭ್ಯವಾಗಿದೆ.
View this post on Instagram
‘ಮರಕ್ಕಾರ್’ ಕನ್ನಡದಲ್ಲೂ ಬಿಡುಗಡೆಯಾಗಲಿದೆಯೇ? ‘ಮರಕ್ಕಾರ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕನ್ನಡ ಆವೃತ್ತಿಯಲ್ಲೂ ತೆರೆಕಂಡಿತ್ತು. ಪರಂವಾ ಸ್ಟುಡಿಯೋಸ್ ಅದನ್ನು ಪ್ರಸ್ತುತಪಡಿಸಿತ್ತು. ಆದರೆ ಒಟಿಟಿಯಲ್ಲಿ ಇದುವರೆಗೆ ಕನ್ನಡ ಭಾಷೆಯ ಆವೃತ್ತಿಯ ಬಿಡುಗಡೆಯನ್ನು ಘೋಷಿಸಿಲ್ಲ. ಕೇವಲ ಹಿಂದಿ, ತಮಿಳು, ತೆಲುಗು ಹಾಗೂ ಮೂಲ ಮಲಯಾಳಂ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗುತ್ತಿರುವುದಾಗಿ ಅಮೆಜಾನ್ ಪ್ರೈಮ್ ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
‘ಬಡವ ರಾಸ್ಕಲ್’ನಲ್ಲಿ ಏನೆಲ್ಲ ಇದೆ? ಡಾಲಿ ಧನಂಜಯ್ ಮಾತು
ಫ್ರೆಂಡ್ಸ್ ಅಂದ್ರೆ ಪ್ರಾಣ ಕೊಡೋಕೂ ರೆಡಿ ‘ಬಡವ ರಾಸ್ಕಲ್’; ಹೈಪ್ ಸೃಷ್ಟಿಸಿದ ಧನಂಜಯ ನಟನೆಯ ಸಿನಿಮಾ ಟ್ರೇಲರ್