ಥಿಯೇಟರ್​ನಲ್ಲಿ ಹಿಟ್ ಆದ ಮೋಹನ್​ಲಾಲ್ ನಟನೆಯ ಈ ಮಲಯಾಳಂ ಸಿನಿಮಾ ಈಗ ಒಟಿಟಿಯಲ್ಲಿ

Hridayapoorvam Movie: ಮೋಹನ್‌ಲಾಲ್ ಅಭಿನಯದ ಸೂಪರ್ ಹಿಟ್ ಮಲಯಾಳಂ ಸಿನಿಮಾ "ಹೃದಯಪೂರ್ವಂ" ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಜಿಯೋ ಸಿನಿಮಾಸ್‌ನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಥಿಯೇಟರ್‌ನಲ್ಲಿ ಯಶಸ್ಸು ಕಂಡ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಒಟಿಟಿ ವೀಕ್ಷಕರನ್ನು ರಂಜಿಸುವ ನಿರೀಕ್ಷೆಯಲ್ಲಿದೆ.

ಥಿಯೇಟರ್​ನಲ್ಲಿ ಹಿಟ್ ಆದ ಮೋಹನ್​ಲಾಲ್ ನಟನೆಯ ಈ ಮಲಯಾಳಂ ಸಿನಿಮಾ ಈಗ ಒಟಿಟಿಯಲ್ಲಿ
ಹೃದಯಪೂರ್ವಂ
Updated By: ರಾಜೇಶ್ ದುಗ್ಗುಮನೆ

Updated on: Sep 20, 2025 | 11:57 AM

ಪ್ರತಿ ವಾರ ಒಟಿಟಿಗೆ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇರುತ್ತವೆ. ಒಟಿಟಿ ವ್ಯಾಪ್ತಿ ಹಿರಿದಾಗಿರುವುದು ಇದಕ್ಕೆ ಕಾರಣ. ಮೂಲ ಭಾಷೆ ಯಾವುದೇ ಆಗಿರಲಿ ಅದು, ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರುವುದರಿಂದ ಆ ಸಿನಿಮಾಗಳು ಹೆಚ್ಚು ಜನರನ್ನು ತಲುಪುತ್ತವೆ. ಇದೇ ಕಾರಣದಿಂದ ಮಲಯಾಳಂ ಸಿನಿಮಾಗಳು ಕನ್ನಡಿಗರನ್ನು ಹೆಚ್ಚು ತಲುಪುತ್ತಿವೆ. ಈಗ ಮಲಯಾಳಂನ ಸೂಪರ್ ಹಿಟ್ ಚಿತ್ರ ಒಟಿಟಿಗೆ ಬರಲು ರೆಡಿ ಆಗಿದೆ. ಈ ಸಿನಿಮಾ ಕನ್ನಡದಲ್ಲೂ ಲಭ್ಯವಿರಲಿದೆ.

ಮಲಯಾಳಂ ಸಿನಿಮಾಗಳು ಚಿತ್ರರಂಗದಲ್ಲಿ ಈಗ ಬೇರೆಯದೇ ರೀತಿಯ ಛಾಪು ಮೂಡಿಸುತ್ತಿರುವುದು ಗೊತ್ತೇ ಇದೆ. ಹಲವು ಸಿನಿಮಾಗಳು ಹಿಟ್ ಆಗಿ ಗಮನ ಸೆಳೆಯುತ್ತಿವೆ. ಅದೇ ರೀತಿ ಮೋಹನ್​ಲಾಲ್ ನಟನೆಯ ‘ಹೃದಯಪೂರ್ವಂ’ ಸಿನಿಮಾ ಥಿಯೇಟರ್​ನಲ್ಲಿ ಯಶಸ್ಸು ಕಂಡಿತು ಮತ್ತು ಈಗ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ಈ ಚಿತ್ರದ ಬಗ್ಗೆ ಒಟಿಟಿ ವೀಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಥಿಯೇಟರ್​​ನಲ್ಲಿ ಸಿನಿಮಾನ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

‘ಹೃದಯಪೂರ್ವಂ’ ಸಿನಿಮಾ ರಿಲೀಸ್ ಬಗ್ಗೆ ಜಿಯೋ ಹಾಟ್​ಸ್ಟಾರ್ ಸಿನಿಮಾ ಮಾಹಿತಿ ನೀಡಿದೆ. ಸೆಪ್ಟೆಂಬರ್ 26ರಂದು ಈ ಚಿತ್ರ ಬಿಡುಗಡೆ ಕಾಣಲಿದೆ. ಮಲಯಾಳಂ, ತೆಲುಗು, ಹಿಂದಿ, ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಲಭ್ಯವಾಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ
ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ ತನುಶ್ರೀ ದತ್ತಾ
ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ?
ಬದಲಾಗೋದೇ ಇಲ್ಲ ಅಕ್ಷಯ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
‘ಕಲ್ಕಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ

ಮೋಹನ್​ಲಾಲ್ ಜೊತೆ ಸಂಗೀತ್ ಪ್ರತಾಪ್, ಸಂಗೀತಾ, ಸಿದ್ದಿಕಿ, ನಿಶಾನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅಖಿಲ್ ಸತ್ಯನ್ ಅವರು ಚಿತ್ರಕಥೆ ಬರೆದಿದ್ದಾರೆ. ಅನು ಮೂತೆದಾತ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.  ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ಅಪರೂಪದ ದಾಖಲೆ ಬರೆದ ಮೋಹನ್​ಲಾಲ್

‘ಹೃದಯಪೂರ್ವಂ’ ಸಿನಿಮಾ ಮಲಯಾಳಂ ಭಾಷೆಯಲ್ಲಿ 43 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದ ರನ್ ಟೈಮ್ ಎರಡು ಗಂಟೆ 31 ನಿಮಿಷ ಇದೆ. ಈ ಸಿನಿಮಾ ಆಗಸ್ಟ್ 28ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಇದನ್ನು ಜನರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:56 am, Sat, 20 September 25