‘ಮನಿ ಹೈಸ್ಟ್ ಸೀಸನ್ 5’ ರಿಲೀಸ್ಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 3ರಂದು ಈ ಸಿರೀಸ್ ರಿಲೀಸ್ ಆಗುತ್ತಿದೆ. ಮೂಲತಃ ಸ್ಪ್ಯಾನಿಶ್ ವೆಬ್ ಸೀರಿಸ್ ಇದಾಗಿದ್ದು, ಇಂಗ್ಲಿಷ್ನಲ್ಲೂ ಡಬ್ ಆಗಿ ನೆಟ್ಫ್ಲಿಕ್ಸ್ನಲ್ಲಿ ತೆರೆಕಾಣುತ್ತಿದೆ. ಭಾರತದಲ್ಲಿಯೂ ಈ ವೆಬ್ ಸೀರಿಸ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ರಿಲೀಸ್ ದಿನಾಂಕ ಸಮೀಪಿಸಿದಂತೆ ಈ ವೆಬ್ ಸೀರಿಸ್ ಕ್ರೇಜ್ ಜೋರಾಗಿದೆ. ಅಚ್ಚರಿ ಎಂದರೆ, ಈ ವೆಬ್ ಸೀರಿಸ್ ರಿಲೀಸ್ ಆಗುವ ದಿನ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದೆ.
‘ಮನಿ ಹೈಸ್ಟ್’ ನಾಲ್ಕು ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್ ಸೀರಿಸ್ ಹೇಳುತ್ತಿದೆ. ಸಾಕಷ್ಟು ಕುತೂಹಲಕಾರಿ ಅಂಶ ಹಾಗೂ ಪ್ರಶ್ನೆಗಳೊಂದಿಗೆ ನಾಲ್ಕನೇ ಸೀಸನ್ ಅಂತ್ಯವಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಸೀಸನ್ 5ರಲ್ಲಿ ಉತ್ತರ ಸಿಗುವ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಈ ಕಾರಣಕ್ಕೆ ಈ ವೆಬ್ ಸೀರಿಸ್ ನೋಡೋಕೆ ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಜೈಪುರ ಮೂಲದ ಕಂಪೆನಿ ಸೆಪ್ಟೆಂಬರ್ 3ರಂದು ರಜೆ ಘೋಷಿಸಿದೆ. ಈ ವಿಶೇಷ ರಜೆಗೆ ‘ನೆಟ್ಫ್ಲಿಕ್ಸ್ ಮತ್ತು ಚಿಲ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಕಂಪೆನಿಯ ಸಿಇಒ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಳೆದ ಎರಡು ವರ್ಷಗಳಿಂದ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸೆಪ್ಟೆಂಬರ್ 3ರಂದು ‘ಮನಿ ಹೈಸ್ಟ್’ ನೋಡೋಕೆ ನಾವು ಅವಕಾಶ ಮಾಡಿಕೊಡುತ್ತಿದ್ದೇವೆ. ಅಂದು ಸಿಬ್ಬಂದಿಗೆ ರಜೆ ನೀಡುತ್ತಿದ್ದೇವೆ. ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಶನ್ ಇಲ್ಲದವರಿಗೆ ಅದನ್ನೂ ನೀಡುತ್ತಿದ್ದೇವೆ’ ಎಂದಿದ್ದಾರೆ ಅಭಿಷೇಕ್.
Rajasthan: A Jaipur-based IT company, Verve Logic decided to give leave to its employees to watch a web series
All employees have worked hard for past 2 yrs. We decided to give some free time & thought of showing them a web series in office:Abhishek Jain, CEO of Verve Logic(1/2) pic.twitter.com/OI9DytDXYB
— ANI (@ANI) September 1, 2021
ಸದ್ಯ, ಈ ಸಿಇಒ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಅನೇಕರು ಈ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮನಿ ಹೈಸ್ಟ್ ಪ್ರೊಫೆಸರ್ಗೆ ಕಾಡಿತ್ತು ಕ್ಯಾನ್ಸರ್; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ