Honey Singh: ಬಯಲಾಗತ್ತೆ ಹನಿ ಸಿಂಗ್ ಬದುಕಿನ ಕಹಿ ಸತ್ಯ; ಎಲ್ಲವನ್ನೂ ಬಹಿರಂಗಪಡಿಸಲು ಒಪ್ಪಿಗೆ ನೀಡಿದ ವಿವಾದಿತ ಗಾಯಕ

Yo Yo Honey Singh | Netflix: ‘ಈ ಮೊದಲೇ ನಾನು ನನ್ನ ಖಾಸಗಿ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದೆ. ಆದರೆ ಎಲ್ಲವನ್ನೂ ತೆರೆದಿಡಲು ಸಾಧ್ಯವಾಗಿರಲಿಲ್ಲ’ ಎಂದು ಯೋ ಯೋ ಹನಿ ಸಿಂಗ್​ ಹೇಳಿದ್ದಾರೆ.

Honey Singh: ಬಯಲಾಗತ್ತೆ ಹನಿ ಸಿಂಗ್ ಬದುಕಿನ ಕಹಿ ಸತ್ಯ; ಎಲ್ಲವನ್ನೂ ಬಹಿರಂಗಪಡಿಸಲು ಒಪ್ಪಿಗೆ ನೀಡಿದ ವಿವಾದಿತ ಗಾಯಕ
ಯೋ ಯೋ ಹನಿ ಸಿಂಗ್
Follow us
ಮದನ್​ ಕುಮಾರ್​
|

Updated on: Mar 16, 2023 | 5:47 PM

ಜನಪ್ರಿಯ ರ‍್ಯಾಪ್​ ಸಿಂಗರ್​ ಹನಿ ಸಿಂಗ್​ (Yo Yo Honey Singh) ಅವರ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಸಂಭವಿಸಿವೆ. ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ವಿವಾದಗಳು ಆಗಿವೆ. ವೈಯಕ್ತಿಕ ಬದುಕಿನಲ್ಲೂ ರಂಪಾಟ ಆಗಿದೆ. ದಾಂಪತ್ಯ ಜೀವನದಲ್ಲಿ ಶುರುವಾದ ಗಲಾಟೆಗಳು ವಿಚ್ಛೇದನದಲ್ಲಿ ಕೊನೆಯಾದವು. ಒಂದಷ್ಟು ವರ್ಷಗಳ ಕಾಲ ಅವರು ತೆರೆಮರೆಗೆ ಸರಿದರು. ಹೀಗೆ ಹನಿ ಸಿಂಗ್​ ಎದುರಿಸಿದ ತಾಪತ್ರಯಗಳು ಒಂದೆರಡಲ್ಲ. ಅದರಲ್ಲಿ ಸ್ವತಃ ಅವರ ತಪ್ಪುಗಳು ಕೂಡ ಸಾಕಷ್ಟು ಇವೆ. ಈ ಎಲ್ಲ ಕಹಿ ಸತ್ಯಗಳು ಈಗ ಪ್ರೇಕ್ಷಕರ ಎದುರು ಬಯಲಾಗಲಿವೆ. ಹೌದು, ಹನಿ ಸಿಂಗ್ ಅವರ ಜೀವನವನ್ನು ಆಧರಿಸಿ ಡಾಕ್ಯುಮೆಂಟರಿ (Honey Singh Documentary) ತಯಾರಾಗಲಿದೆ. ಯಾವ ವಿಚಾರವನ್ನೂ ಮುಚ್ಚಿಡದೇ ಎಲ್ಲ ವಿಷಯಗಳನ್ನು ತೋರಿಸಲು ಹನಿ ಸಿಂಗ್​ ಒಪ್ಪಿಗೆ ನೀಡಿದ್ದಾರೆ. ನೆಟ್​ಫ್ಲಿಕ್ಸ್​ (Netflix) ಮೂಲಕ ಇದು ಪ್ರಸಾರ ಆಗಲಿದೆ.

ದೆಹಲಿಯ ಹುಡುಗ ಹನಿ ಸಿಂಗ್​ ಅವರು 2003ರಲ್ಲಿ ಪಂಜಾಬಿ ರ‍್ಯಾಪ್​ ಸಾಂಗ್​ಗಳ ಮೂಲಕ ಬೆಳಕಿಗೆ ಬಂದರು. 2011ರ ಹೊತ್ತಿಗೆ ಅವರು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದರು. ದೇಶ-ವಿದೇಶದಲ್ಲಿ ಹನಿ ಸಿಂಗ್​ ಹೆಸರು ಫೇಮಸ್​ ಆಯಿತು. ಬಾಲಿವುಡ್​ನಲ್ಲಿ ಬಹುಬೇಡಿಕೆಯ ರ‍್ಯಾಪ್​ ಸಿಂಗರ್​ ಆಗಿ ಅವರು ಬೆಳೆದು ನಿಂತರು. ಆದರ ಜೊತೆಗೆ ಸಾಕಷ್ಟು ವಿವಾದಗಳನ್ನು ಮಾಡಿಕೊಂಡು ವಿವಾದಿತ ಸಿಂಗರ್​ ಎಂಬ ಹಣೆಪಟ್ಟಿ ಕಟ್ಟಿಕೊಂಡರು.

ಇದನ್ನೂ ಓದಿ
Image
Honey Singh: ‘ದೇಶದ ಹೆಣ್ಮಕ್ಕಳು ಉರ್ಫಿ ಜಾವೇದ್​ ರೀತಿ ಇರಬೇಕು’: ಅಚ್ಚರಿಯ ಹೇಳಿಕೆ ನೀಡಿದ ಹನಿ ಸಿಂಗ್​
Image
Honey Singh: ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾದ ಯೋ ಯೋ ಹನಿ ಸಿಂಗ್
Image
ವಿಚಾರಣೆ ವೇಳೆ ಕೋರ್ಟ್​ನಲ್ಲೇ ಅತ್ತ ಶಾಲಿನಿ ತಲ್ವಾರ್​; ಹನಿ ಸಿಂಗ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್​
Image
ಯೋ ಯೋ ಹನಿ ಸಿಂಗ್​ಗೆ ಶಾರುಖ್ ಖಾನ್ ಕಪಾಳಕ್ಕೆ ಬಾರಿಸಿದ್ದು ಯಾಕೆ ಅಂತ ಇದುವರೆಗೆ ಗೊತ್ತಾಗಿಲ್ಲ!

ಇದನ್ನೂ ಓದಿ: ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​

ಹನಿ ಸಿಂಗ್​ ಜೀವನದ ಕುರಿತ ಡಾಕ್ಯುಮೆಂಟರಿ ಸಿದ್ಧವಾಗುತ್ತಿದೆ ಎಂಬುದನ್ನು ತಿಳಿಸಲು ನೆಟ್​ಫ್ಲಿಕ್ಸ್​ ಒಂದು ಟೀಸರ್​ ರಿಲೀಸ್​ ಮಾಡಿದೆ. ಅದರಲ್ಲಿ ಸ್ವತಃ ಹನಿ ಸಿಂಗ್​ ಅವರು ಕಾಣಿಸಿಕೊಂಡಿದ್ದಾರೆ. ತಮ್ಮದೇ ರ‍್ಯಾಪ್​ ಶೈಲಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಇದರ ಪ್ರಸಾರ ಆರಂಭ ಆಗಲಿದೆ.

ಇದನ್ನೂ ಓದಿ: ವಿಚಾರಣೆ ವೇಳೆ ಕೋರ್ಟ್​ನಲ್ಲೇ ಅತ್ತ ಶಾಲಿನಿ ತಲ್ವಾರ್​; ಹನಿ ಸಿಂಗ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್​

‘ಈ ಮೊದಲೇ ನಾನು ನನ್ನ ಖಾಸಗಿ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದೆ. ಆದರೆ ಎಲ್ಲವನ್ನೂ ತೆರೆದಿಡಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳಿಂದ ನಾನು ಸಾಕಷ್ಟು ಪ್ರೀತಿ ಸ್ವೀಕರಿಸಿದ್ದೇನೆ. ನನ್ನ ಬದುಕಿನ ಪೂರ್ತಿ ಕಥೆಯನ್ನು ತಿಳಿಯುವ ಹಕ್ಕು ಅಭಿಮಾನಿಗಳಿಗೆ ಇದೆ. ಈ ನೆಟ್​ಫ್ಲಿಕ್ಸ್​ ಡಾಕ್ಯುಮೆಂಟರಿಯಲ್ಲಿ ನನ್ನ ಜೀವನದ ವಿವರಗಳನ್ನು ಪ್ರಾಮಾಣಿಕವಾಗಿ ತೆರೆದಿಡಲಾಗುವುದು’ ಎಂದು ಹನಿ ಸಿಂಗ್​ ಹೇಳಿದ್ದಾರೆ.

View this post on Instagram

A post shared by Netflix India (@netflix_in)

ಆಸ್ಕರ್​ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರವನ್ನು ಗುನೀತ್​ ಮೊಂಗಾ ನಿರ್ಮಿಸಿದ್ದಾರೆ. ಅವರೇ ಈಗ ಹನಿ ಸಿಂಗ್​ ಜೀವನಾಧಾರಿತ ಡಾಕ್ಯುಮೆಂಟರಿಗೆ ಬಂಡವಾಳ ಹೂಡುತ್ತಿದ್ದಾರೆ. ಮೊಜೇಜ್​ ಸಿಂಗ್​ ಅವರು ಇದಕ್ಕೆ ನಿರ್ದೇಶನ ಮಾಡಲಿದ್ದಾರೆ. ಆದಷ್ಟು ಬೇಗ ಈ ಡಾಕ್ಯುಮೆಂಟರಿ ರಿಲೀಸ್​ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.