ಹಲವು ಭಾಷೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಫೇಮಸ್ ಆಗಿದೆ. ಟಿವಿಯಲ್ಲಿ ಪ್ರಸಾರ ಆಗುವ ಕಾರ್ಯಕ್ರಮ ಮಾತ್ರವಲ್ಲದೇ ಒಟಿಟಿ ವರ್ಷನ್ ಕೂಡ ಜನಮೆಚ್ಚುಗೆ ಗಳಿಸಿದೆ. ಆದರೆ ಈ ಕಾರ್ಯಕ್ರಮವನ್ನು ಯಾರು ನಡೆಸಿಕೊಡುತ್ತಾರೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಕನ್ನಡದಲ್ಲಿ ನಟ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಕೂಡ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಅನಿಲ್ ಕಪೂರ್ ಅವರು ಅತಿ ಕಳಪೆ ನಿರೂಪಕ ಎಂಬ ಟೀಕೆಗೆ ಒಳಗಾಗಿದ್ದಾರೆ.
ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಶೋ ಸೆನ್ಸೇಷನ್ ಸೃಷ್ಟಿಸಿದೆ. ಈ ಮೊದಲು ಎರಡು ಸೀಸನ್ಗಳು ಯಶಸ್ವಿ ಆಗಿದ್ದವು. ಈ ವರ್ಷ ‘ಬಿಗ್ ಬಾಸ್ ಒಟಿಟಿ 3’ ನಡೆಯುತ್ತಿದೆ. ಮೊದಲ ಸೀಸನ್ಗೆ ಕರಣ್ ಜೋಹರ್ ನಿರೂಪಣೆ ಮಾಡಿದ್ದರು, ಎರಡನೇ ಸೀಸನ್ಗೆ ಸಲ್ಮಾನ್ ಖಾನ್ ನಿರೂಪಕ ಆಗಿದ್ದರು. ಮೂರನೇ ಸೀಸನ್ನಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಅನಿಲ್ ಕಪೂರ್ ಅವರಿಗೆ ನೀಡಲಾಯಿತು.
ಈಗ ಹಿಂದಿ ‘ಬಿಗ್ ಬಾಸ್ ಒಟಿಟಿ 3’ ಕೊನೇ ಹಂತ ತಲುಪಿದೆ. ಶೀಘ್ರದಲ್ಲೇ ಇದರ ಫಿನಾಲೆ ನಡೆಯಲಿದೆ. ಇಷ್ಟು ದಿನಗಳ ಕಾಲ ಅನಿಲ್ ಕಪೂರ್ ಅವರ ನಿರೂಪಣೆಯನ್ನು ನೋಡಿದ ವೀಕ್ಷಕರು ಬೇಸತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಇನ್ನೆಂದೂ ಅನಿಲ್ ಕಪೂರ್ ಅವರು ಬಿಗ್ ಬಾಸ್ ನಿರೂಪಣೆ ಮಾಡುವುದು ಬೇಡ ಎಂದು ಜನರು ತಾಕೀತು ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಹಿನಾ ಖಾನ್ಗೆ 3ನೇ ಹಂತದ ಸ್ತನ ಕ್ಯಾನ್ಸರ್; ಶಾಕಿಂಗ್ ವಿಚಾರ ತಿಳಿಸಿದ ನಟಿ
ಬಿಗ್ ಬಾಸ್ ನಿರೂಪಣೆ ಮಾಡುವವರಿಗೆ ಒಂದು ಬಗೆಯ ಗತ್ತು ಇರಬೇಕು. ಸಂದರ್ಭಕ್ಕೆ ತಕ್ಕಂತೆ ತುಂಬ ಸಹಜವಾಗಿ ಮಾತನಾಡುವ ಕಲೆ ಇರಬೇಕು. ಈ ಗುಣಗಳು ಅನಿಲ್ ಕಪೂರ್ ಅವರಿಗೆ ಇಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ. ‘ಇವರದ್ದು ಫೇಕ್ ವ್ಯಕ್ತಿತ್ವ, ಫೇಕ್ ನಗು, ಫೇಕ್ ಸಿಟ್ಟು. ಅತಿ ಕಳಪೆ ನಿರೂಪಕ ಇವರು. ಇಂಥವರು ಬಂದರೆ ಬಿಗ್ ಬಾಸ್ ಅಂತ್ಯವಾಗುತ್ತದೆ’ ಎಂದು ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.