AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಸ್ಪರ್ಧಿ ಹಿನಾ ಖಾನ್​ಗೆ 3ನೇ ಹಂತದ ಸ್ತನ ಕ್ಯಾನ್ಸರ್​; ಶಾಕಿಂಗ್​ ವಿಚಾರ ತಿಳಿಸಿದ ನಟಿ

ಹಿನಾ ಖಾನ್​ ಅವರ ಆರೋಗ್ಯದ ಕುರಿತಂತೆ ಕೆಲವು ಅಂತೆಕಂತೆಗಳು ಹರಡಲು ಶುರುವಾಗಿವೆ. ಅದು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಾವು ಸ್ತನ ಕ್ಯಾನ್ಸರ್​ಗೆ ಒಳಗಾಗಿರುವುದನ್ನು ಹಿನಾ ಖಾನ್​ ಖಚಿತಪಡಿಸಿದ್ದಾರೆ. ಅಲ್ಲದೇ ಶೀಘ್ರವೇ ತಾವು ಗುಣಮುಖರಾಗುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಬಿಗ್​ ಬಾಸ್​ ಸ್ಪರ್ಧಿ ಹಿನಾ ಖಾನ್​ಗೆ 3ನೇ ಹಂತದ ಸ್ತನ ಕ್ಯಾನ್ಸರ್​; ಶಾಕಿಂಗ್​ ವಿಚಾರ ತಿಳಿಸಿದ ನಟಿ
ಹಿನಾ ಖಾನ್​
ಮದನ್​ ಕುಮಾರ್​
|

Updated on: Jun 28, 2024 | 4:06 PM

Share

ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ನಟಿ ಹಿನಾ ಖಾನ್​ (Hina Khan) ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಈಗ ಬಗ್ಗೆ ಅವರು ಅಭಿಮಾನಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಒಂದು ಬೇಸರದ ವಿಚಾರವನ್ನು ಹಿನಾ ಖಾನ್​ ಬಹಿರಂಗಪಡಿಸಿದ್ದಾರೆ. ಅವರಿಗೆ ಕ್ಯಾನ್ಸರ್​ (Breast Cancer) ಆಗಿದೆ. ಮೂರನೇ ಹಂತದ ಸ್ತನ ಕ್ಯಾನ್ಸರ್​ನಿಂದ ಹಿನಾ ಖಾನ್​ ಬಳಲುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ನೋವಾಗಿದೆ. ಹಿಂದಿ ಧಾರಾವಾಹಿ ಹಾಗೂ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಹಿನಾ ಖಾನ್​ ಖ್ಯಾತಿ ಗಳಿಸಿದ್ದಾರೆ.

ಸೋಶಿಯಲ್​ ಮೀಡಿಯಾ ಮೂಲಕ ಹಿನಾ ಖಾನ್​ ಅವರು ಮಾಹಿತಿ ನೀಡಿದ್ದಾರೆ. ‘ಇತ್ತೀಚೆಗೆ ಹರಡಿರುವ ಗಾಸಿಪ್​ಗಳಿಗೆ ಸ್ಪಷ್ಟನೆ ನೀಡುತ್ತಾ, ಒಂದು ಮುಖ್ಯವಾದ ವಿಷಯವನ್ನು ನನ್ನ ಅಭಿಮಾನಿಗಳಿಗೆ ತಿಳಿಸುತ್ತಿದ್ದೇನೆ. ನನಗೆ 3ನೇ ಹಂತದ ಸ್ತನ ಕ್ಯಾನ್ಸರ್​ ಆಗಿರುವುದು ತಿಳಿದುಬಂದಿದೆ. ಈ ಖಾಯಿಲೆಯ ವಿರುದ್ಧ ಹೋರಾಡಿ ಹೊರಬರಲು ನಾನು ಸನ್ನದ್ಧಳಾಗಿದ್ದೇನೆ’ ಎಂದು ಹಿನಾ ಖಾನ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ! ಬ್ಯಾನ್​ ಆಗುತ್ತಾ ಪಾನಿಪುರಿ?

ಈಗಾಗಲೇ ಹಿನಾ ಖಾನ್​ ಅವರು ಸ್ತನ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ಗುಣಮುಖರಾಗಿ, ಮೊದಲಿನಿಂದಲೂ ಸ್ಟ್ರಾಂಗ್​ ಆಗಿ ಜನರ ಎದುರು ಬರುವುದಾಗಿ ಅವರು ಹೇಳಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಅವರು ಭರವಸೆ ನೀಡಿದ್ದಾರೆ. ಹಿಂದಿ ಕಿರುತೆರೆ ಧಾರಾವಾಹಿಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರು ಈಗ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ನನಗೆ ಬೇಕು. ನಿಮ್ಮ ಸ್ವಂತ ಅನುಭವ, ಚಿಕ್ಕ ಮಾಹಿತಿಗಳು, ಸಲಹೆಗಳು ನನಗೆ ತುಂಬ ಮುಖ್ಯವಾಗಿವೆ. ನಾನು ಮತ್ತು ನನ್ನ ಕುಟುಂಬದವರು ಚಿಕಿತ್ಸೆಯ ಕಡೆಗೆ ಗಮನ ಹರಿಸಿದ್ದೇವೆ. ದೇವರ ದಯೆಯಿಂದ ನಾನು ಗುಣಮುಖಳಾಗುತ್ತೇನೆ ಹಾಗೂ ಸಂಪೂರ್ಣ ಆರೋಗ್ಯವಂತಳಾಗುತ್ತೇನೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ, ಹಾರೈಕೆ ನನಗೆ ಕಳಿಸಿ’ ಎಂದು ಅಭಿಮಾನಿಗಳಲ್ಲಿ ಹಿನಾ ಖಾನ್​ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.