ವೀಕೆಂಡ್​ನಲ್ಲಿ ನೋಡಲು ಒಟಿಟಿಗೆ ಬಂದಿವೆ ಒಳ್ಳೆ ಸಿನಿಮಾಗಳು

OTT Movie: ಈ ವಾರ ಬಿಡುಗಡೆ ಆದ ‘ಗೋಟ್’ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿಲ್ಲ. ಆದರೆ ಈ ವೀಕೆಂಡ್​ನಲ್ಲಿ ನೋಡಿ ಖುಷಿ ಪಡುಲೆ ಕೆಲವು ಬಹಳ ಒಳ್ಳೆಯ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ.

ವೀಕೆಂಡ್​ನಲ್ಲಿ ನೋಡಲು ಒಟಿಟಿಗೆ ಬಂದಿವೆ ಒಳ್ಳೆ ಸಿನಿಮಾಗಳು
Follow us
ಮಂಜುನಾಥ ಸಿ.
|

Updated on: Sep 07, 2024 | 7:18 PM

ಇತ್ತೀಚೆಗೆ ಬಿಡುಗಡೆ ಆದ ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ನಿರಾಸೆ ಮೂಡಿಸಿದೆ. ಕನ್ನಡದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಪೆಪೆ’, ‘ಲಾಫಿಂಗ್ ಬುದ್ಧ’ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದವು. ಆದರೆ ‘ಗೋಟ್​’ಗೆ ದಾರಿ ಮಾಡಿ ಕೊಡಲು ಹಲವು ಕಡೆ ಈ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಹಾಕಲಾಗಿದೆ. ಇದೆಲ್ಲದರ ನಡುವೆ ಈ ವಾರ ಒಟಿಟಿಗೆ ಕೆಲವು ಉತ್ತಮ ಸಿನಿಮಾಗಳು ಬಂದಿವೆ. ವಿಶೇಷವೆಂದರೆ ಕನ್ನಡದ ಹಿಟ್ ಸಿನಿಮಾ ಒಂದು ಸಹ ಈ ವಾರ ಅಮೆಜಾನ್​ನಲ್ಲಿ ಬಿಡುಗಡೆ ಆಗಿದೆ. ಪರಭಾಷೆಯ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ.

ಭೀಮ

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಂ ಆಗುತ್ತಿದೆ. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡಿರುವ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂಗೆ ಬಂದಿದೆ. ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಯಾವ ಒಟಿಟಿಯವರೂ ಸಹ ‘ಭೀಮ’ ಸಿನಿಮಾವನ್ನು ಖರೀದಿಸಿರಲಿಲ್ಲ. ಈಗ ಸಿನಿಮಾ ಹಿಟ್ ಆಗುತ್ತಿದ್ದಂತೆ ಅಮೆಜಾನ್​ನವರು ‘ಭೀಮ’ನಿಗೆ ವೇದಿಕೆ ನೀಡಿದ್ದಾರೆ.

19 20 21

ಮಂಸೋರೆ ನಿರ್ದೇಶಿಸಿರುವ ನಿಜ ಘಟನೆ ಆಧರಿಸಿದ ಸಿನಿಮಾ ‘192021’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ರೆಂಟ್​ ಆಧಾರದಲ್ಲಿ ಲಭ್ಯವಿದೆ. ಸಾಮಾನ್ಯ ಯುವಕನೊಬ್ಬನ ಮೇಲೆ ಪೊಲೀಸರು ಸುಳ್ಳು ನಕ್ಸಲ್ ಪ್ರಕರಣ ದಾಖಲಿಸಿ ಅದಾದ ಬಳಿಕ ಆತ ಎದುರಿಸಿದ ಸಮಸ್ಯೆ, ನ್ಯಾಯಕ್ಕಾಗಿ ಮಾಡಿದ ಹೋರಾಟ ಇತರೆಗಳ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು.

ಆಟ್ಟಂ

2024 ರ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿರುವ ಮಲಯಾಳಂ ಸಿನಿಮಾ ‘ಆಟ್ಟಂ’ ಕೆಲ ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ಆಟ್ಟಂ’ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ. ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ಲಭಿಸಿತ್ತು.

‘ಕಿಲ್’

ಹಿಂದಿ ಚಿತ್ರರಂಗದಲ್ಲಿ ಇದೀಗ ‘ಸ್ತ್ರೀ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಆದರೆ ಕೆಲವು ವಾರಗಳ ಹಿಂದೆ ಬಿಡುಗಡೆ ಆಗಿದ್ದ ‘ಕಿಲ್’ ಸಿನಿಮಾಕ್ಕೆ ಬಹಳ ಪ್ರಶಂಸೆ ದೊರೆತಿತ್ತು. ಆ ಸಿನಿಮಾ ಸಹ ಹಿಟ್ ಆಗಿತ್ತು. ಒಂದು ರೈಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ತಲವಾನ್

ಬಿಜು ಮೆನನ್ ಮತ್ತು ಜಯಸೂರ್ಯ ನಟಿಸಿರುವ ‘ತಲವಾನ್’ ಸಿನಿಮಾ ಸೆಪ್ಟೆಂಬರ್ 10ಕ್ಕೆ ಸೋನಿ ಲಿವ್​ನಲ್ಲಿ ಬಿಡುಗಡೆ ಆಗಲಿದೆ. ಇಬ್ಬರು ಪೊಲೀಸರ ನಡುವೆ ನಡೆಯುವ ತಿಕ್ಕಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಅಡಿಯೊಸ್ ಅಮಿಗೋ

ಮಲಯಾಳಂನ ಹಾಸ್ಯಪ್ರಧಾನ ಸಿನಿಮಾ, ‘ಅಡಿಯೋಸ್ ಅಮಿಗೊ’ ಸಿನಿಮಾ ಇತ್ತೀಚೆಗಷ್ಟೆ ನಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬಂದಿದೆ. ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದ್ದು, ನೋಡಿದವರು ಮೆಚ್ಚಿಕೊಂಡಿದ್ದಾರೆ.

‘ಬ್ಯಾಡ್​ಬಾಯ್ಸ್’

ವಿಲ್ ಸ್ಮಿತ್ ನಟಿಸಿರುವ ಯಶಸ್ವಿ ‘ಬ್ಯಾಡ್ ಬಾಯ್ಸ್’ ಸಿನಿಮಾದ ಹೊಸ ಸರಣಿ ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​ಗೆ ಬಂದಿದೆ. ದಶಕಗಳ ಬಳಿಕ ‘ಬ್ಯಾಡ್ ಬಾಯ್ಸ್’ ಸಿನಿಮಾದ ಸೀಕ್ವೆಲ್ ಮಾಡಲಾಗಿತ್ತು. ಸಿನಿಮಾ ಹಾಸ್ಯಪ್ರಧಾನ ಆಕ್ಷನ್ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು