
ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿ ಪ್ರಿಯದರ್ಶನ್ ನಿರ್ದೇಶನ ಮಾಡಿರುವ ‘ಹೈವಾನ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಜನರನ್ನು ಸೆಳೆಯಲು ವಿಫಲವಾಗಿತ್ತು ಈ ಸಿನಿಮಾ. ಸಿನಿಮಾ ಅನ್ನು ಸೋನಿ ಲಿವ್ನಲ್ಲಿ ವೀಕ್ಷಿಸಬಹುದಾಗಿದೆ.
ದುಲ್ಕರ್ ಸಲ್ಮಾನ್ ನಟಿಸಿದ್ದ ಬಹು ನಿರೀಕ್ಷಿತ ಸಿನಿಮಾ ‘ಐಆಮ್ ಗೇಮ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಧಾರುಣ ಸೋಲು ಕಂಡಿತ್ತು. ಇದೀಗ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾ ಅನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ತಮನ್ನಾ ಭಾಟಿಯಾ, ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿರುವ ಹಾರರ್ ಭರಿತ ಆಕ್ಷನ್ ಸಿನಿಮಾ ‘ದಿ ವಿವಾನ್’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಸಿನಿಮಾ ಅನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದು.
ಮನೋಜ್ ಭಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಲಾಸ್ಟ ಮ್ಯಾನ್ ಇನ್ ಟವರ್’ ಸಿನಿಮಾ ಸಾಮಾನ್ಯ ವ್ಯಕ್ತಿಯೊಬ್ಬ ಹೌಸಿಂಗ್ ಸೊಸೈಟಿ ವಿರುದ್ಧ ಹೋರಾಡುವ ಕತೆಯನ್ನು ಒಳಗೊಂಡಿದೆ. ಈ ಸಿನಿಮಾ ಇದೀಗ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.
‘ಮಿನಿಯನ್ಸ್’ ಕಾರ್ಟೂನ್ ಸಿನಿಮಾಗಳು ದಶಕಗಳಿಂದಲೂ ನಿರ್ಮಾಣ ಆಗುತ್ತಿದ್ದು, ‘ಮಿನಿಯನ್ಸ್’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇದೀಗ ‘ಮಿನಿಯನ್ಸ್ ಆಂಡ್ ಮಾನ್ಸ್ಟರ್ಸ್’ ಹೆಸರಿನ ಹೊಸ ಮಿನಿಯನ್ ಸಿನಿಮಾ ರಿಲೀಸ್ ಆಗಿದ್ದು ಈ ವಾರ ಒಟಿಟಿಗೆ ಬಂದಿದೆ. ಸಿನಿಮಾ ಅನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆ ಮಾಡಬಹುದು.
ತಮಿಳು ಸಿನಿಮಾ ‘ಮೀಸೆಯಾ ಮುರುಕ್ಕು’ ಸಿನಿಮಾದ ಸೀಕ್ವೆಲ್ ‘ಮೀಸೆಯಾ ಮುರುಕ್ಕು 2’ ಈ ವಾರ ಒಟಿಟಿಗೆ ಬಂದಿದೆ. ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ಇದಾಗದ್ದು, ಸಿನಿಮಾನಲ್ಲಿ ಸಖತ್ ಟ್ವಿಸ್ಟು, ಟರ್ನುಗಳಿವೆ. ಈ ಸಿನಿಮಾವನ್ನು ಸೋನಿ ಲಿವ್ನಲ್ಲಿ ವೀಕ್ಷಣೆ ಮಾಡಬಹುದು.
‘ದಿ ಗ್ರೇಟೆಸ್ಟ್’ ವೆಬ್ ಸರಣಿ ಆಗಿದ್ದು, ಇದು ವಿಶ್ವ ಶ್ರೇಷ್ಟ ಬಾಕ್ಸರ್ ಮಹಮ್ಮದ್ ಅಲಿಯ ಜೀವನವನ್ನು ಆಧರಿಸಿದೆ. ಎಂಟು ಎಪಿಸೋಡುಗಳ ಈ ವೆಬ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆ ಮಾಡಬಹುದಾಗಿದೆ.