ಈ ವಾರ ಒಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳು: ಇಲ್ಲಿವೆ ಪಟ್ಟಿ

Updated on: Oct 10, 2026 | 3:55 PM

ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಸಿನಿಮಾ ತನ್ನ ಕಮಾಲ್ ಮುಂದುವರೆಸಿದೆ. ಇದರ ನಡುವೆ ಒಟಿಟಿಯಲ್ಲೂ ಸಹ ಈ ಹಬ್ಬದ ಸೀಸನ್​​ಗೆ ಕೆಲ ಭರ್ಜರಿ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿದ್ದು, ಇಲ್ಲಿದೆ ಪ್ರಮುಖ ಸಿನಿಮಾಗಳ ಪಟ್ಟಿ...

1 / 8
ದೀಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ಹಾರರ್ ಥ್ರಿಲ್ಲರ್ ಸಿನಿಮಾ ‘ವಿಡಿಯೋ’ ಚಿತ್ರಮಂದಿರಗಳಲ್ಲಿ ಕೆಲ ವಾರಗಳ ಹಿಂದೆ ರಿಲೀಸ್ ಆಗಿತ್ತು. ಅದೇ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ.

ದೀಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ಹಾರರ್ ಥ್ರಿಲ್ಲರ್ ಸಿನಿಮಾ ‘ವಿಡಿಯೋ’ ಚಿತ್ರಮಂದಿರಗಳಲ್ಲಿ ಕೆಲ ವಾರಗಳ ಹಿಂದೆ ರಿಲೀಸ್ ಆಗಿತ್ತು. ಅದೇ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 8

ಕನ್ನಡ ಸಿನಿಮಾ ‘ಲೈಫ್ ಟುಡೆ’ ಇದೇ ವಾರ ಒಟಿಟಿಗೆ ಬಂದಿದೆ. ಆಕ್ಷನ್ ಉಳ್ಳ ಈ ಪ್ರೇಮಕತಾ ಸಿನಿಮಾ ಅನ್ನು ಸನ್ ನೆಕ್ಸ್ಟ್​​ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.

3 / 8

ಮಿಲನ ಪಾರ್ವತಿ ನಟಿಸಿರುವ ಮಲಯಾಳಂ ಸಿನಿಮಾ ‘ಪ್ರಥಮ ದೃಶ್ಯ ಕುಟ್ಟಕಾರ್’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ. ಸಿನಿಮಾ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 8

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ತಮಿಳು ಸಿನಿಮಾ ‘ಮಂದಾಡಿ’ ಈ ವಾರ ನೆಟ್​​ಫ್ಲಿಕ್ಸ್​​ಗೆ ಬಂದಿದೆ. ಸೂರಿ, ಸುಹಾಸ್ ನಟನೆಯ ಈ ಸಿನಿಮಾ ಬೋಟು ರೇಸಿನ ಕುರಿತಾದ ಕತೆಯನ್ನು ಒಳಗೊಂಡಿದೆ.

5 / 8

ಪೃಥ್ವಿರಾಜ್ ಸುಕುಮಾರನ್ ನಟನೆ ಮಾಡಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಖಲೀಫಾ’ ಒಟ್ಟಿಗೆ 6 ಒಟಿಟಿಗಳಲ್ಲಿ ಈ ವಾರ ರಿಲೀಸ್ ಆಗಿದೆ. ಪ್ರೈಂ ವಿಡಿಯೋ, ಆಹಾ ಸೇರಿದಂತೆ ಇನ್ನೂ ಕೆಲವು ಒಟಿಟಿಗಳಲ್ಲಿಯೂ ಸಹ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

6 / 8

ಬಾಲಿವುಡ್ ನಟ ವಿದ್ಯುತ್ ಜಾಮ್​​ವಾಲ್ ನಟನೆ ಮಾಡಿರುವ ಜನಪ್ರಿಯ ಹಾಲಿವುಡ್ ಸಿನಿಮಾ ‘ಮಾರ್ಟಲ್ ಕಾಂಬ್ಯಾಟ್ 2’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಈ ಸಿನಿಮಾ ಅನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

7 / 8

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟಿಸಿರುವ ಹಾಟ್ ರೊಮ್ಯಾಂಟಿಕ್ ಸಿನಿಮಾ ‘ಎಪಿಕ್’ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣಲಿಲ್ಲವಾದರೂ ಸಿನಿಮಾದ ಹಾಟ್​​ನೆಸ್​​ನಿಂದಾಗಿ ಸಾಕಷ್ಟು ಸುದ್ದಿ ಆಗಿತ್ತು. ಸಿನಿಮಾ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

8 / 8

ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿದ್ದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಆಪಲ್ ಟಿವಿ ಮತ್ತು ಪ್ರೈಂ ವಿಡಿಯೋನಲ್ಲಿ ರೆಂಟ್ ಪಡೆದು ನೋಡಬಹುದಾಗಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us