ಈ ವಾರ ಒಟಿಟಿಗೆ ಬಂದಿವೆ ಬೊಂಬಾಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ
OTT Release this week: ಚಿತ್ರಮಂದಿರಗಳಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ ಈ ವಾರ ಒಟಿಟಿಗೆ ಬಹಳ ಒಳ್ಳೆಯ ಸಿನಿಮಾಗಳು ಲಗ್ಗೆ ಇಟ್ಟಿದ್ದು, ಮುಂಬರುವ ನವರಾತ್ರಿ ಪ್ರಯುಕ್ತ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ಒದಗಿಸುವ ದೃಷ್ಟಿಯಿಂದ ಒಳ್ಳೆಯ ಸಿನಿಮಾಗಳನ್ನು ಈ ವಾರ ಬಿಡುಗಡೆ ಮಾಡುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

Ott Release This Week
- ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸಿ, ವಿತರಣೆ ಮಾಡಿರುವ ‘ಮಹಾವತಾರ್ ನರಸಿಂಹ’ ಅನಿಮೇಷನ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.
- ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆನಿಲಿಯಾ, ರವಿಚಂದ್ರನ್, ಸುಧಾರಾಣಿ ನಟನೆಯ ‘ಜೂನಿಯರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿತ್ತು. ಈ ವಾರ ಸಿನಿಮಾ ಒಟಿಟಿಗೆ ಬಂದಿದ್ದು, ನಮ್ಮ್ ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದಾಗಿದೆ.
- ಆರ್ಜೆ ಮಯೂರ್ ಅವರ ಈ ಸಿನಿಮಾ ಅಪ್ಪಟ ಪ್ರೇಮಕತೆ ಆಗಿದ್ದು, ಈ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಪ್ರಿಯತಮೆಯನ್ನು ಹುಡುಕಿಕೊಂಡು ಹೋಗುವ ಪ್ರೇಮಿಯ ಕತೆ ಹೊಂದಿರುವ ಈ ಸಿನಿಮಾ ಸನ್ ನೆಕ್ಸ್ಟ್ನಲ್ಲಿ ವೀಕ್ಷಣೆಗೆ ಲಭ್ಯ ಇದೆ.
- ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶಿಸಿರುವ ವೆಬ್ ಸರಣಿ ‘ಬ್ಯಾಡಾಸ್ ಆಫ್ ಬಾಲಿವುಡ್’ ಇದೇ ವಾರ ಒಟಿಟಿಗೆ ಬಂದಿದೆ. ಈ ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ. ವೆಬ್ ಸರಣಿ ನೋಡಿದವರು ಮೆಚ್ಚಿಕೊಂಡಿದ್ದಾರೆ.
- ಬಾಲಿವುಡ್ ನಟಿ ಕಾಜಲ್ ನಟಿಸಿರುವ ವೆಬ್ ಸರಣಿ ‘ಟ್ರಯಲ್‘ ಎರಡನೇ ಸೀಸನ್ ಇದೇ ವಾರ ಬಿಡುಗಡೆ ಆಗಿದೆ. ಕೋರ್ಟ್ ರೂಂ ಡ್ರಾಮಾ ಹೊಂದಿರುವ ಈ ವೆಬ್ ಸರಣಿ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿದೆ. ಹಾಟ್ಸ್ಟಾರ್ನಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ.
Published On - 4:13 pm, Sat, 20 September 25








