ಈ ವಾರ ಒಟಿಟಿಗೆ ಬರಲಿರುವ ಸಿನಿಮಾಗಳು, ತೆಲುಗಿಗೆ ಹೋಗುತ್ತಿದೆ ಕನ್ನಡದ ಸಿನಿಮಾ
OTT Release this week: ಈ ವಾರ ಹಲವಾರು ಹಲವು ಒಳ್ಳೆಯ ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಈ ವಾರ ಚಿತ್ರಮಂದಿರದಲ್ಲಿ ದೊಡ್ಡ ಬಜೆಟ್ನ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಆದರೆ ಒಟಿಟಿ ನಿರಾಸೆ ಮೂಡಿಸಿಲ್ಲ. ಕೆಲ ಒಳ್ಳೆಯ ಸಿನಿಮಾ ಮತ್ತು ವೆಬ್ ಸರಣಿಗಳು ಬಿಡುಗಡೆ ಆಗಿದ್ದು, ಇಲ್ಲಿದೆ ಪಟ್ಟಿ.

ಚಿತ್ರಮಂದಿರಗಳಲ್ಲಿ ಈ ವಾರ ದೊಡ್ಡ ಕನ್ನಡ ಸಿನಿಮಾಗಳು ಇಲ್ಲ, ಪರಭಾಷೆಯಲ್ಲಿಯೂ ಸಹ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆದರೆ ಈ ವಾರ ಒಟಿಟಿಗಳು ನಿರಾಸೆ ಮಾಡುತ್ತಿಲ್ಲ. ಈ ವಾರ ಒಟಿಟಿಗೆ ಕೆಲವು ಒಳ್ಳೆಯ ಸಿನಿಮಾಗಳು, ವೆಬ್ ಸರಣಿಗಳು ಬರುತ್ತಿವೆ. ವಿಶೇಷವೆಂದರೆ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದ ಕನ್ನಡ ಸಿನಿಮಾ ಒಂದು ಇದೀಗ ತೆಲುಗಿಗೆ ಡಬ್ ಆಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.
ಕೌಸಲ್ಯ ಸುಪ್ರಜಾ ರಾಮ
ಡಾರ್ಲಿಂಗ್ ಕೃಷ್ಣ ನಟಿಸಿ ಶಶಾಂಕ್ ನಿರ್ದೇಶನ ಮಾಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ 2023ರ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಬೃಂದಾ ಆಚಾರ್ಯ ಮತ್ತು ಮಿಲನಾ ನಾಗರಾಜ್ ನಾಯಕಿಯರಾಗಿ ನಟಿಸಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತು. ಇದೀಗ ಒಂದೂವರೆ ವರ್ಷದ ಬಳಿಕ ಇದೇ ಸಿನಿಮಾ ತೆಲುಗು ಒಟಿಟಿಯಲ್ಲಿ ಬಿಡುಗಡೆ ಆಗಿದೆ. ತೆಲುಗಿನ ಈಟಿವಿ ವಿನ್ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಿದೆ.
ಸಂಕ್ರಾಂತಿಕಿ ವಸ್ತುನ್ನಾಮ್
ವಿಕ್ಟರಿ ವೆಂಕಟೇಶ್, ಐಶ್ವರ್ಯಾ ರಾಜೇಶ್, ಮೀನಾಕ್ಷಿ ಚೌಧರಿ ಒಟ್ಟಿಗೆ ನಟಿಸಿರುವ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ‘ಸಂಕ್ರಾಂತಿಕಿ ವಸ್ತುನ್ನಾಮ್’ ಕಳೆದ ತಿಂಗಳು ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಇದೀಗ ಈ ಸಿನಿಮಾ ಟಿವಿ ಮತ್ತು ಒಟಿಟಿಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಜೀ5 ನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.
ಸುಳಲ್ 2
2022 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ‘ಸುಳಲ್: ದಿ ವೊರ್ಟೆಕ್ಸ್’ ವೆಬ್ ಸರಣಿಯ ಎರಡನೇ ಸೀಸನ್ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ವಿಕ್ರಂ ವೇದ’ ರಚಿಸಿ ನಿರ್ದೇಶನ ಮಾಡಿದ್ದ ಪುಷ್ಕರ್-ಗಾಯತ್ರಿ ಅವರುಗಳು ‘ಸುಳಲ್’ ಗೆ ಚಿತ್ರಕತೆ ಬರೆದಿದ್ದು, ಎರಡನೇ ಸೀಸನ್ಗೂ ಅವರೇ ಬರಹಗಾರರು. ಮೊದಲ ಭಾಗದಲ್ಲಿ ನಟಿಸಿದ್ದ ಕತೀರ್ ಮತ್ತು ಐಶ್ವರ್ಯಾ ರಾಜೇಶ್ ಈ ಸೀಸನ್ನಲ್ಲೂ ನಟಿಸಿದ್ದಾರೆ.
ವಿದಮಯುರ್ಚಿ
ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ‘ವಿದಮಯುರ್ಚಿ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿತ ಮಟ್ಟದ ಗೆಲುವು ಪಡೆಯಲಿಲ್ಲ. ಇದೀಗ ಸಿನಿಮಾ ಒಟಿಟಿಗೆ ಬಂದಿದೆ. ‘ವಿದಮಯುರ್ಚಿ’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದ್ದು, ಆಸಕ್ತರು ವೀಕ್ಷಿಸಬಹುದು. ಈ ಸಿನಿಮಾ ಚಿತ್ರಮಂದಿರದಲ್ಲಿ ಫ್ಲಾಪ್ ಎನಿಸಿಕೊಂಡಿದೆ.
ಮದರಾಸ್ಕಾರನ್
ಇದೇ ವರ್ಷದ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸನ್ನಷ್ಟೆ ಕಂಡ ‘ಮದರಾಸ್ಕಾರನ್’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಈ ಸಿನಿಮಾ ಆಹಾ ತೆಲುಗು ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ