ಸೀಸನ್ 5ಕ್ಕೆ ಪೂರ್ಣಗೊಳ್ಳಲ್ಲ ‘ಪಂಚಾಯತ್’ ಸರಣಿ; ಇಲ್ಲಿದೆ ಪ್ರಸಾರ ದಿನಾಂಕ

ಖ್ಯಾತ ‘ಪಂಚಾಯತ್’ ವೆಬ್ ಸರಣಿಯ ಐದನೇ ಸೀಸನ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸರಣಿಯ ಎಡಿಟಿಂಗ್ ಕೆಲಸಗಳು ನಡೆಯುತ್ತಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ ಎಂದು ನಿರ್ದೇಶಕ ದೀಪಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಪ್ರಧಾನ್ ಜಿ ಸೋಲಿನ ನಂತರದ ಕಥೆಯನ್ನು ಈ ಸೀಸನ್ ಹೊಂದಿರಲಿದೆ.

ಸೀಸನ್ 5ಕ್ಕೆ ಪೂರ್ಣಗೊಳ್ಳಲ್ಲ ‘ಪಂಚಾಯತ್’ ಸರಣಿ; ಇಲ್ಲಿದೆ ಪ್ರಸಾರ ದಿನಾಂಕ
ಪಂಚಾಯತ್
Edited By:

Updated on: Sep 07, 2026 | 8:24 AM

ಮುಖ್ಯಾಂಶಗಳು

  • ಫುಲೇರಾಗೆ ಮತ್ತೆ ಸಚಿವ್ ಜಿ ಎಂಟ್ರಿ
  • ‘ಪಂಚಾಯತ್ 5’ ರಿಲೀಸ್ ಡೇಟ್ ಅಪ್‌ಡೇಟ್
  • ಸೀಸನ್ 5 ಕಥೆಯಲ್ಲಿ ಬಿಗ್ ಟ್ವಿಸ್ಟ್

‘ಪಂಚಾಯತ್’ ವೆಬ್ ಸರಣಿಯ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ. ಫುಲೇರಾ ಗ್ರಾಮದ ನಿವಾಸಿಗಳು ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಚಿವ್ ಜಿ ಹಾಗೂ ಪ್ರಧಾನ್ ಜಿ ಅವರ ಮುಂದಿನ ಪಯಣ ಹೇಗಿರಲಿದೆ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಈ ಜನಪ್ರಿಯ ಸರಣಿಯ ಐದನೇ ಸೀಸನ್ ಪ್ರಸಾರದ ಕುರಿತು ನಿರ್ದೇಶಕ ದೀಪಕ್ ಕುಮಾರ್ ಮಿಶ್ರಾ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ನಿರ್ದೇಶಕ ದೀಪಕ್ ಕುಮಾರ್ ಮಿಶ್ರಾ ಹಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ‘ಪಂಚಾಯತ್ ಸೀಸನ್ 5’ರ ಎಡಿಟಿಂಗ್ ಕೆಲಸಗಳು ಭರದಿಂದ ಸಾಗಿವೆ. ಹೊಸ ಸೀಸನ್ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಪ್ರಸಾರವಾಗುವ ಸಾಧ್ಯತೆ ಇದೆ. ಆದರೆ ಅಧಿಕೃತ ಬಿಡುಗಡೆಯ ದಿನಾಂಕವನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಕಥೆಯಲ್ಲಿ ಸಂಪೂರ್ಣ ಹೊಸ ತಿರುವು ಸಿಗಲಿದೆ. ಚುನಾವಣೆಯಲ್ಲಿ ಪ್ರಧಾನ್ ಜಿ ಸೋಲನುಭವಿಸಿದ್ದಾರೆ. ಸೋಲಿನ ನಂತರ ಅವರ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ಕಥೆಯಲ್ಲಿ ತೋರಿಸಲಾಗುತ್ತದೆ. ಚುನಾವಣೆಯ ನಂತರ ಫುಲೇರಾ ಗ್ರಾಮದ ಇತರ ಪಾತ್ರಗಳ ಬದುಕಿನಲ್ಲಿ ಆಗುವ ಬದಲಾವಣೆಗಳು ಪ್ರೇಕ್ಷಕರನ್ನು ತಲುಪಲಿವೆ.

ಇದು ಪಂಚಾಯತ್ ಸರಣಿಯ ಕೊನೆಯ ಸೀಸನ್ ಎಂಬ ವದಂತಿಗಳು ಹರಿದಾಡುತ್ತಿದ್ದವು. ನಿರ್ದೇಶಕ ದೀಪಕ್ ಕುಮಾರ್ ಮಿಶ್ರಾ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸರಣಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತು ಸರಣಿಯ ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ, ಕೆಲವರು ಬೇಸರಗೊಂಡಿದ್ದಾರೆ. ಮೊದಲ ಎರಡು ಸೀಸನ್​ಗೆ ಹೋಲಿಸಿದರೆ ನಂತರದ ಸೀಸನ್​ಗಳು ಅಷ್ಟು ಉತ್ತವಾಗಿಲ್ಲ ಎಂಬ ಮಾತು ಕೇಳಿ ಬಂದಿದ್ದವು.

ಇದನ್ನೂ ಓದಿ: ‘ಪಂಚಾಯತ್’ ವೆಬ್ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ಮೋದಿ; ‘ಬಿನೋದ್’ ಜೊತೆಗಿನ ರೀಲ್ ವೈರಲ್

ಹೊಸ ಸೀಸನ್‌ನಲ್ಲಿಯೂ ಹಳೆಯ ಪ್ರಮುಖ ತಾರಾಗಣವೇ ಮುಂದುವರಿಯಲಿದೆ. ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುವೀರ್ ಯಾದವ್ ನಟಿಸಿದ್ದಾರೆ. ಫೈಸಲ್ ಮಲಿಕ್ ಮತ್ತು ಚಂದನ್ ರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರು ಮತ್ತೆ ಹಳೆಯ ಪಾತ್ರಗಳ ಮನರಂಜನೆಯನ್ನು ಸವಿಯಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us