ಈ ಒಟಿಟಿ ಹೀರೋಗಳ ಸಂಭಾವನೆ ಎಷ್ಟು? ಇಲ್ಲಿದೆ ವಿವರ
ಭಾರತೀಯ ವೆಬ್ ಸೀರಿಸ್ಗಳಲ್ಲೇ ಗಮನ ಸೆಳೆಯೋ ಸೀರಿಸ್ ಎಂದರೆ ಅದು ಮನೋಜ್ ಬಾಜ್ಪಾಯಿ ಅವರ ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್. ಮನೋಜ್ ಬಾಜ್ಪಾಯಿ ಅವರು ಶ್ರೀಕಾಂತ್ ತಿವಾರಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಈ ಸೀರಿಸ್ಗಾಗಿ ಅವರು 10 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಸ್ಟಾರ್ ಹೀರೋಗಳಷ್ಟು ಸಂಭಾವನೆ ಸಿಗೋದಿಲ್ಲ ಎಂದು ಈ ಮೊದಲು ನೇರವಾಗಿ ಹೇಳಿದ್ದರು.
ಸದ್ಯ ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಕೊವಿಡ್ ಸಮಯದಲ್ಲಿ ಹೇರಿದ ಲಾಕ್ಡೌನ್ನಿಂದ ಎಲ್ಲರೂ ಮನೆಯಲ್ಲೇ ಇರಬೇಕಾಯಿತು. ಈ ವೇಳೆ ಒಟಿಟಿ ಬಳಕೆ ಹೆಚ್ಚಿತು. ಈಗ ಒಟಿಟಿಯಿಂದಾಗಿ (OTT) ಅನೇಕ ಕಲಾವಿದರಿಗೆ ಬೇಡಿಕೆ ಹೆಚ್ಚಿದೆ. ಆ ಸಾಲಿನಲ್ಲಿ ಪಂಕಜ್ ತ್ರಿಪಾಠಿ, ಮನೋಜ್ ಬಾಜ್ಪಾಯಿ ಮೊದಲಾದವರು ಇದ್ದಾರೆ. ಅವರ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ.
ನವಾಜುದ್ದೀನ್ ಸಿದ್ಧಿಕಿ
ಬಾಲಿವುಡ್ನ ಸ್ಟಾರ್ ಹೀರೋಗಳಲ್ಲಿ ನವಾಜುದ್ದೀನಿ ಸಿದ್ಧಿಕಿ ಕೂಡ ಒಬ್ಬರು. ಅವರು ‘ಸೆಕ್ರೇಡ್ ಗೇಮ್’ ಸೀರಿಸ್ನಲ್ಲಿ ಗಣೇಶ್ ಗಾಯ್ತೊಂಡೆ ಹೆಸರಿನ ಪಾತ್ರ ಮಾಡಿದ್ದರು. ಎರಡು ಸೀಸನ್ನಲ್ಲಿ ಪ್ರಸಾರ ಕಂಡ ಈ ಸೀರಿಸ್ಗಾಗಿ ಅವರು 10 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು.
ಪಂಕಜ್ ತ್ರಿಪಾಠಿ
‘ಮಿರ್ಜಾಪುರ್’ ಸರಣಿಯಲ್ಲಿ ಪಂಕಜ್ ತ್ರಿಪಾಠಿ ಮಾಡಿರುವ ಕಾಲೀಮ್ ಭಯ್ಯಾ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಈ ಸರಣಿಯಲ್ಲಿ ನಟಿಸೋಕೆ ಬರೋಬ್ಬರಿ 12 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ‘ಸೇಕ್ರೆಡ್ ಗೇಮ್ಸ್’ ಸರಣಿಯಲ್ಲೂ ನಟಿಸಿರುವ ಅವರು ಅದಕ್ಕಾಗಿ 10 ಕೋಟಿ ರೂಪಾಯಿ ಪಡೆದಿದ್ದರು. ಸಿನಿಮಾಗಳ ಮೂಲಕ ಪಂಕಜ್ ಗಮನ ಸೆಳೆಯುತ್ತಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಒಟಿಟಿ ಸೀಸನ್ 2’ ನಡೆಸಿಕೊಟ್ಟಿದ್ದರು. ಪ್ರತಿ ಎಪಿಸೋಡ್ ನಿರೂಪಣೆಗೆ ಅವರು ಪಡೆಯೋದು 12 ಕೋಟಿ ರೂಪಾಯಿ ಎನ್ನಲಾಗಿದೆ.
ಶಾಹಿದ್ ಕಪೂರ್
ರಾಜ್ ಹಾಗೂ ಡಿಕೆ ನಿರ್ದೇಶನದಲ್ಲಿ ‘ಫರ್ಜಿ’ ಸರಣಿ ಮೂಡಿ ಬಂದಿತ್ತು. ಈ ಸರಣಿಯಲ್ಲಿ ಶಾಹಿದ್ ಕಪೂರ್ ಅವರು ನಟಿಸಿದ್ದಾರೆ. ಇದಕ್ಕಾಗಿ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಸೈಫ್ ಅಲಿ ಖಾನ್
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರೋ ಸೈಫ್ ಅಲಿ ಖಾನ್ ಅವರು ‘ಸೇಕ್ರೆಡ್ ಗೇಮ್ಸ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ಸೀರಿಸ್ನಲ್ಲಿ ನಟಿಸೋಕೆ ಅವರು 15 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಇನ್ಸ್ಪೆಕ್ಟರ್ ಸರ್ತಾಜ್ ಸಿಂಗ್ ಪಾತ್ರದಲ್ಲಿ ನಟಿಸಿದ್ದರು ಅವರು.
ಮನೋಜ್ ಬಾಜ್ಪಾಯಿ
ಭಾರತೀಯ ವೆಬ್ ಸೀರಿಸ್ಗಳಲ್ಲೇ ಗಮನ ಸೆಳೆಯೋ ಸೀರಿಸ್ ಎಂದರೆ ಅದು ಮನೋಜ್ ಬಾಜ್ಪಾಯಿ ಅವರ ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್. ಮನೋಜ್ ಬಾಜ್ಪಾಯಿ ಅವರು ಶ್ರೀಕಾಂತ್ ತಿವಾರಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಈ ಸೀರಿಸ್ಗಾಗಿ ಅವರು 10 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಸ್ಟಾರ್ ಹೀರೋಗಳಷ್ಟು ಸಂಭಾವನೆ ಸಿಗೋದಿಲ್ಲ ಎಂದು ಈ ಮೊದಲು ನೇರವಾಗಿ ಹೇಳಿದ್ದರು.
ವಿಜಯ್ ಸೇತುಪತಿ
ವಿಜಯ್ ಸೇತುಪತಿ ಅವರು ‘ಫರ್ಜಿ’ ಮೂಲಕ ಒಟಿಟಿಗೆ ಕಾಲಿಟ್ಟರು. ಅವರು ಈ ಸರಣಿಯಲ್ಲಿ ನಟಿಸಲು 7 ಕೋಟಿ ರೂಪಾಯಿ ಪಡೆದಿದ್ದರು. ಪೊಲೀಸ್ ಪಾತ್ರದಲ್ಲಿ ಅವರು ನಟಿಸಿದ್ದರು.
ಸಮಂತಾ
ನಟಿ ಸಮಂತಾ ಅವರಿಗೆ ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿ ಮೂಲಕ ಒಟಿಟಿ ಜೊತೆ ನಂಟು ಬೆಳೆಯಿತು. ಅವರು ಈ ಸರಣಿಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ರಾಜಲಕ್ಷ್ಮಿ ಶೇಖರನ್ ಅಲಿಯಾಸ್ ರಾಜಿ ಆಗಿ ಅವರು ಮಿಂಚಿದ್ದರು. ಈ ಸರಣಿಗಾಗಿ ಅವರು 4 ಕೋಟಿ ರೂಪಾಯಿ ಪಡೆದಿದ್ದರು. ಅದೇ ರೀತಿ ಇಂಗ್ಲಿಷ್ನ ‘ಸಿಟಾಡೆಲ್’ ಸೀರಿಸ್ನ ಇಂಡಿಯನ್ ವರ್ಷನ್ನಲ್ಲಿ ಅವರು ನಟಿಸಿದ್ದರು.
ಅಜಯ್ ದೇವಗನ್
ಅಜಯ್ ದೇವಗನ್ ಅವರು ‘ರುದ್ರ’ ಸರಣಿಯಿಂದ ಒಟಿಟಿ ಜೊತೆ ನಂಟು ಬೆಳೆಸಿಕೊಂಡರು. ಅವರು ಡಿಸಿಪಿ ರುದ್ರವೀರ್ ಪ್ರತಾಪ್ ಸಿಂಗ ಪಾತ್ರ ಮಾಡಿದರು. ಈ ಸರಣಿಗಾಗಿ ಅವರು 18 ಕೋಟಿ ರೂಪಾಯಿ ಪಡೆದಿದ್ದಾರೆ.
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ ಅವರು ಒಟಿಟಿ ಸರಣಿಗಳಲ್ಲಿ ನಟಿಸಿದ್ದಾರೆ. ಅವರು ‘ಸೆಕ್ರೆಡ್ ಗೇಮ್ಸ್’ ಸರಣಿಯಲ್ಲಿ ನಟಿಸಿದ್ದರು. ಇದಕ್ಕಾಗಿ ಅವರು ಚಾರ್ಜ್ ಮಾಡಿದ್ದು 4 ಕೋಟಿ ರೂಪಾಯಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ