Shah Rukh Khan: ‘ಪಠಾಣ್​’ ಚಿತ್ರದ ಪ್ರೇಕ್ಷಕರಿಗೆ ಒಟಿಟಿಯಲ್ಲಿ ಕಾದಿದೆ ಅಚ್ಚರಿ; ಮಾ.22ರಂದು ಡಿಲಿಟೆಡ್​​ ದೃಶ್ಯಗಳ ದರ್ಶನ?

| Updated By: ರಾಜೇಶ್ ದುಗ್ಗುಮನೆ

Updated on: Mar 16, 2023 | 7:30 AM

Pathaan Movie OTT Release: ‘ಪಠಾಣ್​’ ಚಿತ್ರದ ಡಿಲಿಟೆಡ್​ ಸೀನ್​ಗಳನ್ನು ಒಟಿಟಿ ವರ್ಷನ್​ನಲ್ಲಿ ಸೇರಿಸಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

Shah Rukh Khan: ‘ಪಠಾಣ್​’ ಚಿತ್ರದ ಪ್ರೇಕ್ಷಕರಿಗೆ ಒಟಿಟಿಯಲ್ಲಿ ಕಾದಿದೆ ಅಚ್ಚರಿ; ಮಾ.22ರಂದು ಡಿಲಿಟೆಡ್​​ ದೃಶ್ಯಗಳ ದರ್ಶನ?
ದೀಪಿಕಾ ಪಡುಕೋಣೆ, ಶಾರುಖ್ ಖಾನ್
Follow us on

ಈ ವರ್ಷದ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ‘ಪಠಾಣ್​’ ಚಿತ್ರ (Pathaan Movie) ಅಗ್ರಸ್ಥಾನ ಪಡೆದುಕೊಂಡಿದೆ. ವಿಶ್ವ ಮಾರುಕಟ್ಟೆಯಲ್ಲಿ ಈ ಸಿನಿಮಾಗೆ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಥಿಯೇಟರ್​ನಲ್ಲಿ ಈ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ‘ಪಠಾಣ್​’ ಒಟಿಟಿ ರಿಲೀಸ್​ ದಿನಾಂಕ ಕೂಡ ಬಹಿರಂಗ ಆಗಿದೆ. ಮಾರ್ಚ್​ 22ರಂದು ‘ಅಮೇಜಾನ್​ ಪ್ರೈಂ ವಿಡಿಯೋ’ (Amazon Prime Video) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ನೋಡಿದ ಸಿನಿಮಾವನ್ನು ಮತ್ತೆ ಯಾಕೆ ಒಟಿಟಿಯಲ್ಲಿ ನೋಡಬೇಕು ಅಂತ ಕೆಲವರು ನಿರ್ಲಕ್ಷ್ಯ ಮಾಡಬಹುದು. ಆದರೆ ‘ಪಠಾಣ್​’ ವಿಚಾರದಲ್ಲಿ ಹಾಗೆ ಮಾಡುವಂತಿಲ್ಲ. ಶಾರುಖ್​ ಖಾನ್​ ಅಭಿಮಾನಿಗಳಿಗೆ ಒಟಿಟಿಯಲ್ಲಿ ಅಚ್ಚರಿ ಇರಲಿದೆ. ಒಟಿಟಿ ವರ್ಷನ್​ನಲ್ಲಿ ಪಠಾಣ್ ಸಿನಿಮಾದ ಡಿಲಿಟೆಡ್​ ದೃಶ್ಯಗಳನ್ನು (Pathaan Deleted Scenes) ಸೇರಿಸಲಾಗುವುದು ಎಂಬ ಮಾತು ಕೇಳಿಬಂದಿದೆ.

ಚಿತ್ರದ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ದೃಶ್ಯಗಳನ್ನು ಕಟ್​ ಮಾಡಲಾಗಿರುತ್ತದೆ. ಆ ದೃಶ್ಯಗಳನ್ನು ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇರುತ್ತದೆ. ‘ಪಠಾಣ್​’ ವಿಚಾರದಲ್ಲೂ ಹಾಗೆಯೇ ಆಗಿದೆ. ಕೆಲವು ಡಿಲಿಟೆಡ್​ ಸೀನ್​ಗಳನ್ನು ಒಟಿಟಿ ವರ್ಷನ್​ನಲ್ಲಿ ಸೇರಿಸಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಕಾರಣದಿಂದ ‘ಪಠಾಣ್’ ಚಿತ್ರದ ಒಟಿಟಿ ರಿಲೀಸ್​ ಬಗ್ಗೆ ಕೌತಕ ಹೆಚ್ಚಿದೆ.

ಇದನ್ನೂ ಓದಿ: Jawan: ತಡವಾಗುತ್ತಾ ‘ಜವಾನ್​’ ಬಿಡುಗಡೆ? ಶಾರುಖ್​ ಖಾನ್ ಚಿತ್ರದ ರಿಲೀಸ್​ ದಿನಾಂಕದ ಬಗ್ಗೆ ಹಬ್ಬಿದೆ ಗಾಸಿಪ್​

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

‘ಪಠಾಣ್​’ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ, ಆಶುತೋಷ್​ ರಾಣಾ, ಪ್ರಕಾಶ್​ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಇದನ್ನೂ ಓದಿ: The Romantics: ಶಾರುಖ್​ ಖಾನ್​ ಮನೆಗೆ ಶೂಟಿಂಗ್​ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ

ಜನವರಿ 25ರಂದು ‘ಪಠಾಣ್​’ ಚಿತ್ರ ಅದ್ದೂರಿಯಾಗಿ ತೆರೆ ಕಂಡಿತು. ಮೊದಲ ದಿನವೇ ಭರ್ಜರಿ ಕಲೆಕ್ಷನ್​ (57 ಕೋಟಿ ರೂಪಾಯಿ) ಮಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಈಗ ಈ ಚಿತ್ರ 50 ದಿನಗಳನ್ನು ಪೂರೈಸಿರುವುದು ಶಾರುಖ್​ ಖಾನ್​ ಅಭಿಮಾನಿಗಳಿಗೆ ಖುಷಿ ನೀಡಿದೆ. 50 ದಿನ ಕಳೆದಿದ್ದರೂ ಕೂಡ 20 ದೇಶಗಳಲ್ಲಿ ಇಂದಿಗೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೇರೆ ಸ್ಟಾರ್​ ನಟರ ಹೊಸ ಸಿನಿಮಾಗಳು ಬಂದು ಪೈಪೋಟಿ ನೀಡಿದರೂ ಕೂಡ ಶಾರುಖ್​ ಖಾನ್​ ಚಿತ್ರಕ್ಕೆ ಹಿನ್ನಡೆ ಆಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.