ಒಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳು ಪ್ರತಿ ವಾರ ರಿಲೀಸ್ ಆಗುತ್ತಲೇ ಇರುತ್ತವೆ. ಈ ಪೈಕಿ ಕೆಲವು ಗಮನ ಸೆಳೆದರೆ ಇನ್ನೂ ಕೆಲವು ಗಮನ ಸೆಳೆಯಲು ವಿಫಲವಾಗುತ್ತವೆ. ‘ಪ್ರಾವಿನ್ಕೂಡು ಶಾಪು’ (Pravinkoodu Shappu) ಚಿತ್ರ ಜನವರಿ 16ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ಯಾವಾಗ ಸಿನಿಮಾ ಒಟಿಟಿಯಲ್ಲಿ ಲಭ್ಯ? ಯಾವ ರೀತಿಯ ಚಿತ್ರ ಇದು ಎಂಬಿತ್ಯಾದಿ ವಿಚಾರಗಳನ್ನು ಈ ಸ್ಟೋರಿಯಲ್ಲಿ ವಿವರಿಸುತ್ತಿದ್ದೇವೆ.
‘ಪ್ರಾವಿನ್ಕೂಡು ಶಾಪು’ ಚಿತ್ರದಲ್ಲಿ ಸೌಬಿನ್ ಶಾಹಿರ್, ಬಸಿಲ್ ಜೊಸೆಫ್ ಮೊದಲಾದವರು ನಟಿಸಿದ್ದಾರೆ. ಇದು ಮಲಯಾಳಂ ಭಾಷೆಯ ಸಿನಿಮಾ. ಇದರಲ್ಲಿ ಬಸಿಲ್ ಜೊಸೆಫ್ ಅವರು ಸಬ್ ಇನ್ಸ್ಪೆಕ್ಟರ್ ಪಾತ್ರ ಮಾಡಿದರೆ, ಸೌಬಿನ್ ಅವರು ಮಾಜಿ ಮ್ಯಾಜಿಶಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಾರ್ಕ್ ಮಾಮಿಡಿ ರೂಪದಲ್ಲಿ ಮೂಡಿ ಬಂದಿದೆ. ಜೊತೆಗೆ ಥ್ರಿಲ್ಲರ್ ಅಂಶ ಕೂಡ ಈ ಸಿನಿಮಾದಲ್ಲಿ ಇದೆ.
ಸೋನಿ ಲಿವ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಏಪ್ರಿಲ್ 11ರಿಂದ ಈ ಚಿತ್ರ ಲಭ್ಯವಾಗಲಿದೆ. ಈ ಬಗ್ಗೆ ಸೋನಿಲಿವ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ‘ನಿಮ್ಮ ತಲೆಯನ್ನು ಹಾಳು ಮಾಡಲು ಈ ಸಿನಿಮಾ ಬರುತ್ತಿದೆ’ ಎಂದು ಸೋನಿ ಲಿವ್ನಲ್ಲಿ ಬರೆಯಲಾಗಿದೆ. ಬಸಿಲ್ ಅವರು ಈ ಮೊದಲು ಹಲವು ಪರ್ಫಾರ್ಮೆನ್ಸ್ಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ‘ಸೂಕ್ಷ್ಮದರ್ಶಿನಿ’ ಚಿತ್ರದಲ್ಲಿ ಅವರ ನಟನೆ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಈ ವಾರ ಹೊಸದಾಗಿ ರಿಲೀಸ್ ಆದ ಈ ಎರಡು ಸಿನಿಮಾಗಳನ್ನು ತಪ್ಪದೇ ನೋಡಿ
ಶಾಪ್ ಒಂದರಲ್ಲಿ ಕೊಲೆ ನಡೆಯುತ್ತದೆ. ಆ ದಿನ 11 ಜನರು ಕುಡಿಯುತ್ತಾ ಕಾರ್ಡ್ಸ್ ಆಡುತ್ತಾ ಇರುತ್ತಾರೆ. ಹವಾಮಾನ ಸರಿ ಇಲ್ಲ ಎಂಬ ಕಾರಣಕ್ಕೆ ಆಟ ನಿಲ್ಲಿಸಲಾಗುತ್ತದೆ. ಆದರೆ, ಮುಂಜಾನೆ ನೋಡಿದಾಗ ಶಾಪ್ ಮಾಲೀಕ ಕೊಂಬಣ್ ಬಾಬು ನೇಣು ಹಾಕಿಕೊಂಡಿರುತ್ತಾರೆ. ಇದನ್ನು ಸಂತೋಶ್ (ಬಸಿಲ್ ಜೋಸೆಫ್) ವಿಚಾರಣೆ ಮಾಡುತ್ತಾರೆ. ಅನ್ವರ್ ರಶೀದ್ ಇದನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.