ಹೊಸ ಪ್ರಾಜೆಕ್ಟ್ ಘೋಷಿಸಿದ ಪ್ರಿಯಾಂಕಾ ಚೋಪ್ರಾ; ‘ಟೈಗರ್’ ಡಾಕ್ಯುಮೆಂಟರಿಗೆ ಧ್ವನಿ ಆದ ನಟಿ

‘ಟೈಗರ್’ ಡಾಕ್ಯುಮೆಂಟರಿಯ ಟೀಸರ್ ಅನಾವರಣಗೊಂಡಿದೆ. ಕಾಡಿನ ಕುರಿತು ಸಿನಿಮಾ ಮಾಡುವ ಬ್ರಿಟಿಷ್ ಬರಹಗಾರ, ನಿರ್ಮಾಪಕ ಹಾಗ ನಿರ್ದೇಶಕ ಮಾರ್ಕ್ ಲೈನ್​ಫೀಲ್ಡ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದಕ್ಕೆ ಧ್ವನಿ ಆಗುತ್ತಿರುವುದಕ್ಕೆ ಪ್ರಿಯಾಂಕಾ ಸಖತ್ ಖುಷಿಯಾಗಿದ್ದಾರೆ.

ಹೊಸ ಪ್ರಾಜೆಕ್ಟ್ ಘೋಷಿಸಿದ ಪ್ರಿಯಾಂಕಾ ಚೋಪ್ರಾ; ‘ಟೈಗರ್’ ಡಾಕ್ಯುಮೆಂಟರಿಗೆ ಧ್ವನಿ ಆದ ನಟಿ
ಪ್ರಿಯಾಂಕಾ
Follow us
ರಾಜೇಶ್ ದುಗ್ಗುಮನೆ
|

Updated on: Apr 02, 2024 | 11:15 AM

ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದರು. ಈಗ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಪೋಸ್ ಕೊಟ್ಟಿದ್ದಾರೆ. ಈಗ ಅವರು ಅಮೆರಿಕಕ್ಕೆ ತೆರಳುತ್ತಿದ್ದಂತೆ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಂತ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಡಿಸ್ನಿ ಪ್ಲಸ್ ಹಾಟ್​​ ಸ್ಟಾರ್​ನಲ್ಲಿ ಪ್ರಸಾರ ಕಾಣಲಿರುವ ‘ಟೈಗರ್’ ಹೆಸರಿನ ಡಾಕ್ಯುಮೆಂಟರಿಗೆ ಅವರು ಧ್ವನಿ ಆಗಿದ್ದಾರೆ.

‘ಟೈಗರ್’ ಡಾಕ್ಯುಮೆಂಟರಿ ಟ್ರೇಲರ್​ನ ಪ್ರಿಯಾಂಕಾ ಚೋಪ್ರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬರುವ ವಿವರಣೆಗಳು ಪ್ರಿಯಾಂಕಾ ಚೋಪ್ರಾ ಧ್ವನಿಯಲ್ಲಿ ಇರಲಿದೆ. ‘ಅತ್ಯದ್ಭುತ ಸ್ಟೋರಿ ಹಾಗೂ ಕಾಡಿನ ಅನ್ವೇಷಣೆ ಮಾಡುವ ಈ ಸಿನಿಮಾಗೆ ನಾನು ಧ್ವನಿ ನೀಡುತ್ತಿರುವುದು ಖುಷಿ ಇದೆ. ಇದಕ್ಕಾಗಿ ಕಾಯುತ್ತಿದ್ದೇನೆ. ನಮ್ಮ ಜೊತೆ ಕಾಡನ್ನು ಎಂಜಾಯ್ ಮಾಡಿ’ ಎಂದು ಪ್ರಿಯಾಂಕಾ ಕೋರಿಕೊಂಡಿದ್ದಾರೆ.

ಹುಲಿಗಳು ಸಖತ್ ವೈಲ್ಡ್. ಅವರಿಗೂ ಮನುಷ್ಯರಂತೆ ಭಾವನೆಗಳಿದೆ, ಸಿಟ್ಟಿದೆ, ಪ್ರೀತಿ ಇದೆ, ಹಸಿವು ಇದೆ. ಹುಲಿಗಳ ಜೀವನವನ್ನು ಈ ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ. ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಹೇಳಲಾಗುತ್ತಿದೆ. ಈ ಸಿನಿಮಾನ ಬರೋಬ್ಬರಿ 8 ವರ್ಷಗಳ ಕಾಲ ಶೂಟ್ ಮಾಡಲಾಗಿದೆ. ಏಪ್ರಿಲ್ 22ರಂದು ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.

‘ಟೈಗರ್’ ಡಾಕ್ಯುಮೆಂಟರಿಯ ಟೀಸರ್ ಅನಾವರಣಗೊಂಡಿದೆ. ಕಾಡಿನ ಕುರಿತು ಸಿನಿಮಾ ಮಾಡುವ ಬ್ರಿಟಿಷ್ ಬರಹಗಾರ, ನಿರ್ಮಾಪಕ ಹಾಗ ನಿರ್ದೇಶಕ ಮಾರ್ಕ್ ಲೈನ್​ಫೀಲ್ಡ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದಕ್ಕೆ ಧ್ವನಿ ಆಗುತ್ತಿರುವುದಕ್ಕೆ ಪ್ರಿಯಾಂಕಾ ಸಖತ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಅಮೆರಿಕದ ಸೊಸೆ ಆದರೂ ಹೋಳಿ ಆಚರಣೆ ಮರೆತಿಲ್ಲ ಪ್ರಿಯಾಂಕಾ ಚೋಪ್ರಾ

ಈ ಡಾಕ್ಯುಮೆಂಟರಿ ಶೂಟ್​ಗೆ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಇದು ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ಮೊದಲು ‘ದಿ ಜಂಗಲ್ ಬುಕ್​’ನ (2016) ಹಿಂದಿ ವರ್ಷನ್​ನ ಕಾ ಹೆಸರಿನ ಪಾತ್ರಕ್ಕೆ ಪ್ರಿಯಾಂಕಾ ಧ್ವನಿ ನೀಡಿದ್ದರು. ಈಗ ಒಂದು ಒಳ್ಳೆಯ ಉದ್ದೇಶಕ್ಕೆ ಪ್ರಿಯಾಂಕಾ ಚೋಪ್ರಾ ಧ್ವನಿ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ