ಕನ್ನಡ ಸಿನಿಮಾಗಳು ಒಟಿಟಿ ಪ್ಲಾಟ್ಫಾರ್ಮ್ನಲ್ಲೂ ಶೈನ್ ಆಗುತ್ತಿವೆ. ಪುನೀತ್ ರಾಜ್ಕುಮಾರ್ ಅವರ ‘ಪಿಆರ್ಕೆ ಪ್ರೊಡಕ್ಷನ್ಸ್’ (PRK Productions) ಮೂಲಕ ಹೊರಬಂದ ಹಲವು ಚಿತ್ರಗಳು ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ಪ್ರಸಾರ ಆಗಿವೆ. ಆ ಸಾಲಿಗೆ ಈಗ ಇನ್ನೊಂದು ಚಿತ್ರ ಸೇರ್ಪಡೆ ಆಗುತ್ತಿದೆ. ಡಿ. ಸತ್ಯ ಪ್ರಕಾಶ್ ಅವರು ನಿರ್ದೇಶನ ಮಾಡಿರುವ ‘ಮ್ಯಾನ್ ಆಫ್ ದಿ ಮ್ಯಾಚ್’ (Man of The Match) ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ. ಟೈಟಲ್ ಮೂಲಕವೇ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಶೂಟಿಂಗ್ ನಡೆಯುವಾಗ ಪುನೀತ್ ರಾಜ್ಕುಮಾರ್ ಅವರು ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಚಿತ್ರತಂಡವನ್ನು ಹುರಿದುಂಬಿಸಿದ್ದರು. ‘ಮ್ಯಾನ್ ಆಫ್ ದಿ ಮ್ಯಾನ್’ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಪಕಿ. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 5ರಂದು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಮೂಲಕ ‘ಮ್ಯಾನ್ ಆಫ್ ದಿ ಮ್ಯಾನ್’ ಪ್ರಸಾರ ಆಗಲಿದೆ. ಇಂದು (ಮೇ 2) ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿ ಆಗಿದೆ.
ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳು ಜನಮನ ಗೆದ್ದಿವೆ. ಈಗ ಅವರ ತಂಡದಿಂದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾ ಹೇಗಿದೆ ಎಂಬುದರ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಆಗಿದೆ.
‘ರಾಮಾ ರಾಮಾ ರೇ’ ಸಿನಿಮಾ ಮೂಲಕ ನಟರಾಜ್, ಧರ್ಮಣ್ಣ ಮುಂತಾದ ಕಲಾವಿದರು ಖ್ಯಾತಿ ಪಡೆದರು. ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದಲ್ಲೂ ಅವರು ಗಮನಾರ್ಹ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದ ಕಥೆಯೇ ಸಖತ್ ಡಿಫರೆಂಟ್ ಆಗಿದೆ ಎಂಬುದಕ್ಕೆ ಈ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಒಂದು ಆಡಿಷನ್ ಸಂಗತಿಯನ್ನೇ ಇಟ್ಟುಕೊಂಡು ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರು ಸಿನಿಮಾ ಮಾಡಿದಂತಿದೆ. ಈ ಟ್ರೇಲರ್ನಲ್ಲಿ ಬರುವ ಒಂದು ಡೈಲಾಗ್ ಹೆಚ್ಚು ಗಮನ ಸೆಳೆಯುತ್ತಿದೆ. ‘ಸಿನಿಮಾ ಮಾಡಿ ಪ್ರೊಡ್ಯೂಸರ್ ಲಾಸ್ ಆದ ಅಂದ್ರೆ ಓಕೆ ಗುರು. ಆದ್ರೆ ಆಡಿಷನ್ ಮಾಡಿ ಪ್ರೊಡ್ಯೂಸರ್ ಬೀದಿಗೆ ಬಂದ ಅಂದ್ರೆ ಇತಿಹಾಸ ಆಗಲ್ವಾ?’ ಎಂದು ಧರ್ಮಣ್ಣ ಹೊಡೆಯುವ ಡೈಲಾಗ್ ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ವಾಸುಕಿ ವೈಭವ್, ವೀಣಾ ಸುಂದರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಹೊಸ ಕಲಾವಿದರು ಇದರಲ್ಲಿ ಬಣ್ಣ ಹಚ್ಚಿದ್ದಾರೆ.
(‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಟ್ರೇಲರ್)
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಟ್ರೇಲರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ‘ರಾಮಾ ರಾಮಾ ರೇ’ ಸಿನಿಮಾಗೆ ರಾಜ್ಯ ಪ್ರಶಸ್ತಿ ಹಾಗೂ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು ನಿರ್ದೇಶಕ ಸತ್ಯ ಪ್ರಕಾಶ್ ಅವರ ಹೆಗ್ಗಳಿಕೆ. ಹಾಗಾಗಿ ಅವರು ಮಾಡುವ ಎಲ್ಲ ಸಿನಿಮಾಗಳ ಮೇಲೆ ಸಹಜವಾಗಿಯೇ ನಿರೀಕ್ಷೆ ಇರುತ್ತದೆ. ಮೇ 5ರಂದು ‘ಮ್ಯಾನ್ ಆಫ್ ದಿ ಮ್ಯಾಚ್’ ನೋಡಲು ಪ್ರೇಕ್ಷಕರು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
‘ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
1ನೇ ಸೀಸನ್ಗೆ 40 ಲಕ್ಷ ರೂ, 2ನೇ ಸೀಸನ್ಗೆ 20 ಕೋಟಿ ರೂ. ಸಂಬಳ ಪಡೆದ ‘ಪಾತಾಳ್ ಲೋಕ್’ ನಟ
ಅಮೇಜಾನ್ ಪ್ರೈಮ್ನಿಂದ ಬಂಪರ್ ಆಫರ್; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ