AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ

Allu Aravind about OTT: ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ
Allu Aravind
ಮಂಜುನಾಥ ಸಿ.
|

Updated on:Jun 03, 2026 | 7:08 PM

Share

ಕೋವಿಡ್ (Covid) ಬಳಿಕ ಚಿತ್ರರಂಗದಲ್ಲಿ ಭಾರಿ ದೊಡ್ಡ ಬದಲಾವಣೆಗಳನ್ನು ಈ ಒಟಿಟಿಗಳು (OTT) ತಂದಿವೆ. ಸಿನಿಮಾ ನಿರ್ಮಾಪಕರಿಗೆ ಭಾರಿ ದೊಡ್ಡ ನಿರಾಳತೆಯನ್ನು ಒಟಿಟಿಗಳು ನೀಡಿದ್ದು, ಕೇವಲ ಬಾಕ್ಸ್ ಆಫೀಸ್, ಆಡಿಯೋ ರೈಟ್ಸ್ ಮತ್ತು ಟಿವಿ ರೈಟ್ಸ್ ಮೇಲೆ ನಿರ್ಭರವಾಗಿದ್ದ ನಿರ್ಮಾಪಕರಿಗೆ ಮತ್ತೊಂದು ದೊಡ್ಡ ಆದಾಯದ ದಾರಿಯನ್ನು ಈ ಒಟಿಟಿಗಳು ತೆರೆದು ಕೊಟ್ಟಿವೆ. ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ತೆಲುಗು ಚಿತ್ರರಂಗದ ವೃತ್ತಿಪರ ಸಿನಿಮಾ ನಿರ್ಮಾಪಕ ಎಂದು ಹೆಸರಾಗಿರುವವರು. ತೆಲುಗು ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ಲೆಕ್ಕಾಚಾರದಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಅಲ್ಲು ಅರವಿಂದ್ ಇದೀಗ ಒಟಿಟಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವುದು ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲ್ಲು ಅರವಿಂದ್, ‘ಒಟಿಟಿಗಳಿಂದ ಸಿನಿಮಾ ನಿರ್ಮಾಣ ವೆಚ್ಚದ ಅರ್ಧ ಹಣ ಬಂದುಬಿಡುತ್ತದೆ ಎಂಬ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಒಟಿಟಿಗಳ ಕಾಲ ಮುಗಿದಿದೆ. ಒಟಿಟಿಗಳು ಈಗ ಬಹಳ ಚ್ಯೂಸಿ ಆಗಿಬಿಟ್ಟಿವೆ. ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಅವರು ತಯಾರಿಲ್ಲ. ಅವರು ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಒಟಿಟಿಗಳ ಮೇಲೆ ಆಸೆಯನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದಿದ್ದಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

‘ಯಾರೋ ಕೆಲವು ನಿರ್ದೇಶಕರು ಮತ್ತು ಕೆಲವು ನಟರ ಸಿನಿಮಾಗಳನ್ನಷ್ಟೆ ಒಟಿಟಿಗಳು ಹಿಂದೆ-ಮುಂದೆ ನೋಡದೆ ಖರೀದಿ ಮಾಡುತ್ತಿದೆ. ಆದರೆ ಮುಂಚಿನಂತೆ ಎಲ್ಲ ಸಿನಿಮಾಗಳಿಗೂ ಉತ್ತಮ ಮೌಲ್ಯವನ್ನು ಅವು ನೀಡುತ್ತಿಲ್ಲ. ಈಗ ಒಟಿಟಿಗಳು ಸಾಕಷ್ಟು ಬದಲಾಗಿವೆ. ನಾನು ಸಹ ಈಗ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹಾಗೂ ಇತರೆ ಎಕ್ಸಿಕ್ಯೂಟಿವ್​​ಗಳಿಗೆ ಈ ಬಗ್ಗೆ ಎಚ್ಚರಿಸಿಬಿಟ್ಟಿದ್ದೇನೆ. ಚಿತ್ರಮಂದಿರದಲ್ಲಿ ಹಿಟ್ ಆಗುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರವೇ ಬಂಡವಾಳ ಹೂಡುವಂತೆ ಹೇಳಿದ್ದೇನೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಚಿತ್ರಮಂದಿರಗಳಲ್ಲಿ ವರ್ಕೌಟ್ ಆಗದ ಸಿನಿಮಾಗಳು ಇನ್ಯಾವುದೇ ಫ್ಲ್ಯಾಟ್​​ಫಾರ್ಮ್​​ನಲ್ಲಿ ಸಹ ವರ್ಕೌಟ್ ಆಗುವುದಿಲ್ಲ. ಅದು ಖಾತ್ರಿ. ಚಿತ್ರಮಂದಿರದಲ್ಲಿ ಹಿಟ್ ಆದರೆ ಬೇರೆಲ್ಲ ಫ್ಲ್ಯಾಟ್​​ಫಾರ್ಮ್​​ನಲ್ಲೂ ಸಿನಿಮಾ ವರ್ಕೌಟ್ ಆಗುತ್ತದೆ. ಒಟಿಟಿ, ಟಿವಿ ಏನೇ ಇದ್ದರು, ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗುವುದು ಕಡ್ಡಾಯ’ ಎಂದಿದ್ದಾರೆ ಅವರು.

ಅಂದಹಾಗೆ ಅಲ್ಲು ಅರವಿಂದ್ ಅವರು ಖುದ್ದು ಒಂದು ಒಟಿಟಿಯ ಮಾಲೀಕರಾಗಿದ್ದಾರೆ. ಅವರು ತೆಲುಗಿನ ‘ಆಹಾ’ ಒಟಿಟಿಯ ಮಾಲೀಕರಾಗಿದ್ದು, ಆಹಾ ಒಟಿಟಿಯಲ್ಲಿ ಕೆಲವು ಒಳ್ಳೆಯ ತೆಲುಗು ಮತ್ತು ತಮಿಳು ಶೋ ಹಾಗೂ ಸಿನಿಮಾಗಳನ್ನು ಸ್ಟ್ರೀಂ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Wed, 3 June 26

Follow Us
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು