AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಗುಡ್​ನ್ಯೂಸ್: 4,500 ಹೊಸ ಬಸ್‌ಗಳ ಖರೀದಿಗೆ ಭೈರತಿ ಸುರೇಶ್ ಸೂಚನೆ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ಸಂಚರಿಸುತ್ತಿದ್ದು, ತೀವ್ರ ಜನಸಂದಣಿ ಉಂಟಾಗುತ್ತಿದೆ. ಈ ನಡುವೆ ನಾಲ್ಕೂ ಸಾರಿಗೆ ನಿಗಮಗಳಿಂದ ಈ ವರ್ಷ ಬರೋಬ್ಬರಿ 6,000 ಹಳೆಯ ಬಸ್‌ಗಳು ಗುಜರಿ ಸೇರಲಿವೆ. ಹೀಗಾಗಿ ಸಾರಿಗೆ ಅಭಾವ ತಪ್ಪಿಸಲು ತಕ್ಷಣವೇ 4,500 ಹೊಸ ಬಸ್‌ಗಳ ಖರೀದಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವ ಭೈರತಿ ಸುರೇಶ್ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಗುಡ್​ನ್ಯೂಸ್: 4,500 ಹೊಸ ಬಸ್‌ಗಳ ಖರೀದಿಗೆ ಭೈರತಿ ಸುರೇಶ್ ಸೂಚನೆ
ಬಿಎಂಟಿಸಿ, ಕೆಎಸ್​ಆರ್​ಟಿಸಿImage Credit source: tv9 kannada
ಕಿರಣ್​ ಸೂರ್ಯ
| Edited By: |

Updated on: Jul 26, 2026 | 9:32 PM

Share

ಬೆಂಗಳೂರು, ಜುಲೈ 26: ಶಕ್ತಿ ಯೋಜನೆ ಆರಂಭವಾದ ಮೇಲೆ ಕೆಎಸ್ಆರ್​​ಟಿಸಿ (KSRTC), ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್​​​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಶ್​​ ಆಗುತ್ತಿದೆ. ಇತ್ತ ಈ ವರ್ಷ 6 ಸಾವಿರ ಹಳೆಯ ಬಸ್​​ಗಳು ಗುಜರಿಗೆ ಹೋಗಲಿವೆ ಎನ್ನಲಾಗುತ್ತಿದೆ. ಹಾಗಾಗಿ ಸಾರಿಗೆ ಸಚಿವ ಭೈರತಿ ಸುರೇಶ್ (Byrathi Suresh)​​ 4500 ಹೊಸ ಬಸ್​ಗಳ ಖರೀದಿಗೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ನಿತ್ಯ 1.80 ಕೋಟಿಯಷ್ಟು ಪ್ರಯಾಣಿಕರು ಸಂಚಾರ

ಶಕ್ತಿ ಯೋಜನೆ ಆರಂಭವಾದ ಮೇಲೆ ಪ್ರತಿದಿನ ನಾಲ್ಕು ನಿಗಮದ ಬಸ್​​ಗಳಲ್ಲಿ 1.50 ಕೋಟಿಯಿಂದ 1.80ಕೋಟಿಯಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್​​ಗಳು ಸಿಗುತ್ತಿಲ್ಲ. ಜೊತೆಗೆ ಪ್ರಯಾಣಿಕರಿಗೆ ಬಸ್​​ಗಳಲ್ಲಿ ಕೂರಲು, ನಿಲ್ಲಲು ಆಗುವುದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ಜನರು ತುಂಬಿರುತ್ತಾರೆ.

ಇದನ್ನೂ ಓದಿ: ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ

ಇನ್ನು ಈ ವರ್ಷ ನಾಲ್ಕು ಸಾರಿಗೆ ನಿಗಮದಿಂದ ಬರೋಬ್ಬರಿ 6000 ಬಸ್​​ಗಳನ್ನು ಗುಜರಿಗೆ ಹಾಕಬೇಕಿರುವ ಹಿನ್ನೆಲೆ, ಸಾರಿಗೆ ಸಚಿವ ಭೈರತಿ ಸುರೇಶ್ ಕೆಎಸ್ಆರ್​ಟಿಸಿ, ಬಿಎಂಟಿಸಿಯ, NWKRTC, KKRTC ನಿಗಮಕ್ಕೆ 4500 ಬಸ್​​ಗಳ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಿ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ‘ಹೊಸ ಬಸ್​ಗಳನ್ನು ಖರೀದಿ ಮಾಡುವುದರಿಂದ ಹಳೆಯ ಗುಜರಿ ಬಸ್​​ಗಳಿಗೆ ಮುಕ್ತಿ ಸಿಗಲಿದೆ’ ಎಂದು ಪ್ರಯಾಣಿಕರಾದ ರಾಜು ಅವರ ಮಾತು.

ಒಂದು ಸಾವಿರ ಹೊಸ ಬಸ್​​ ಖರೀದಿಗೆ ಸರ್ಕಾರ ಅನುಮತಿ 

ಫ್ಲೈ ಬಸ್, ಅಂಬಾರಿ, ಐರಾವತ, ಅಂಬಾರಿ ಡ್ರೀಮ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್, ರಾಜಹಂಸ, ಪಲಕ್ಕಿ ಉತ್ಸವ ಸೇರಿದಂತೆ 3500 ಡೀಸೆಲ್ ಬಸ್​​ಗಳು ಮತ್ತು ರಾಜ್ಯದಲ್ಲಿ ಬಸ್ ಸೇವೆ ಇಲ್ಲದ ಊರುಗಳಿಗೆ, ಒಂದು ಸಾವಿರ ಹೊಸ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಹೊಸ ಬಸ್​​ಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಲಾಗಿದೆ.

ಸರ್ಕಾರ ಕೂಡಲೇ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು: ಸಾರಿಗೆ ನೌಕರರ ಮುಖಂಡ ಜಗದೀಶ್

‘ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದಲ್ಲಿ ಒಟ್ಟು 23,989 ಸಾವಿರ ಬಸ್​​ಗಳಿವೆ. ಅದರಲ್ಲಿ ಈ ವರ್ಷ 6 ಸಾವಿರ ಬಸ್​​​ಗಳು ಗುಜರಿಗೆ ಹೋದರೆ ಸಾರಿಗೆ ನಿಗಮಗಳಲ್ಲಿ 17,989 ಸಾವಿರ ಬಸ್​ಗಳು ಮಾತ್ರ ಸಂಚಾರ ಮಾಡಿಲಿದ್ದು, ಇದರಿಂದ ಪ್ರಯಾಣಿಕರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಲಿದೆ. ಕೂಡಲೇ ಸರ್ಕಾರ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: ಚಂದಾಪುರದಲ್ಲಿ ಅಗ್ನಿ ದುರಂತ: ಏಕಾಏಕಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು

ಒಟ್ಟಿನಲ್ಲಿ ಬಿಎಂಟಿಸಿ, ಕೆಎಸ್ಆರ್​​ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಈ ವರ್ಷ, ಆರು ಸಾವಿರ ಬಸ್​ಗಳು ಗುಜರಿಗೆ ಹೋಗುತ್ತಿರುವುದರಿಂದ ಹೊಸ ಬಸ್​ಗಳ ಅತ್ಯವಶ್ಯಕವಾಗಿದೆ. ಒಂದು ವೇಳೆ ಸರ್ಕಾರ ಹೊಸ ಬಸ್​​​ಗಳ ಖರೀದಿಗೆ ಮುಂದಾಗಲಿಲ್ಲ ಅಂದರೆ ಪ್ರಯಾಣಿಕರು ಪರದಾಡುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ