ಗಣರಾಜ್ಯೋತ್ಸವದ ಪ್ರಯುಕ್ತ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ

ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ‘ಅನಿಮಲ್​’ ಸಿನಿಮಾವನ್ನು ವಿಶ್ವಾದ್ಯಂತ ಇರುವ ಪ್ರೇಕ್ಷಕರು ನೋಡಬಹುದಾಗಿದೆ. ಒಟಿಟಿಯಲ್ಲಿ ನೋಡುವ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ರಣಬೀರ್​ ಕಪೂರ್​ ಅವರು ಕಾದಿದ್ದಾರೆ. ಈ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ವಿಮರ್ಶಕರಿಂದ ತುಂಬ ಟೀಕೆ ವ್ಯಕ್ತವಾಗಿತ್ತು.

ಗಣರಾಜ್ಯೋತ್ಸವದ ಪ್ರಯುಕ್ತ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ
ಅನಿಮಲ್​ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jan 25, 2024 | 7:32 PM

ಚಿತ್ರಮಂದಿರಗಳಲ್ಲಿ ಡಿಸೆಂಬರ್​ 1ರಂದು ತೆರೆಕಂಡು ಸೂಪರ್​ ಹಿಟ್​ ಆದ ‘ಅನಿಮಲ್​’ ಸಿನಿಮಾ (Animal Movie) ಯಾವಾಗ ಒಟಿಟಿಗೆ ಬರಲಿದೆ ಎಂದು ಸಿನಿಪ್ರಿಯರು ಕೇಳುತ್ತಲೇ ಇದ್ದರು. ಈಗ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿರ್ಮಾಪಕರ ಕಡೆಯಿಂದ ‘ಅನಿಮಲ್’​ ಸಿನಿಮಾದ ಒಟಿಟಿ ರಿಲೀಸ್ (Animal OTT Release)​ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜನವರಿ 26ರಂದು ‘ಅನಿಮಲ್​’ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗುತ್ತಿದೆ. ನೆಟ್​ಫ್ಲಿಕ್ಸ್​ (Netflix) ಮೂಲಕ ಈ ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗುತ್ತಿದೆ. ರಣಬೀರ್​ ಕಪೂರ್​ ಅವರಿಗೆ ಈ ಚಿತ್ರದಿಂದ ಬಹು ದೊಡ್ಡ ಯಶಸ್ಸು ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರ ಚಾರ್ಮ್​ ಕೂಡ ಹೆಚ್ಚಾಗಿದೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರ ಡಿಮ್ಯಾಂಡ್​ ಡಬಲ್​ ಆಗಿದೆ.

‘ಅನಿಮಲ್​’ ಸಿನಿಮಾ ಭಾರತದ ಬಾಕ್ಸ್​ ಆಫೀಸ್​ನಲ್ಲಿ 555 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ವಿಶ್ವ ಬಾಕ್ಸ್​ ಆಫೀಸ್​ನ ಲೆಕ್ಕವೂ ಸೇರಿದರೆ 900 ಕೋಟಿ ರೂಪಾಯಿ ಮೀರುತ್ತದೆ. ಈ ಸಿನಿಮಾ ಇಷ್ಟೆಲ್ಲ ಸದ್ದು ಮಾಡಲು ಹಲವು ಕಾರಣಗಳಿವೆ. ಬಿಡುಗಡೆ ಆದ ದಿನದಿಂದಲೇ ಈ ಸಿನಿಮಾ ವಿವಾದದ ಸುಳಿಗೆ ಸಿಲುಕಿತ್ತು. ಆದರೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

ನೆಟ್​ಫ್ಲಿಕ್ಸ್​ ಮೂಲಕ ‘ಅನಿಮಲ್​’ ಸಿನಿಮಾವನ್ನು ವಿಶ್ವಾದ್ಯಂತ ಇರುವ ಪ್ರೇಕ್ಷಕರು ನೋಡಬಹುದಾಗಿದೆ. ಒಟಿಟಿಯಲ್ಲಿ ನೋಡುವ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ರಣಬೀರ್​ ಕಪೂರ್​ ಅವರು ಕಾದಿದ್ದಾರೆ. ಈ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ವಿಮರ್ಶಕರಿಂದ ತುಂಬ ಟೀಕೆ ವ್ಯಕ್ತವಾಗಿದೆ. ಇದನ್ನು ಸ್ತ್ರೀ ವಿರೋಧಿ ಪಾತ್ರ ಎಂದು ಕೂಡ ಅನೇಕರು ಖಂಡಿಸಿದ್ದುಂಟು.

ಇದನ್ನೂ ಓದಿ: ಕಪ್ಪು-ಬಿಳುಪಿನ ಫೋಟೋದಲ್ಲೂ ಪಳಪಳನೆ ಹೊಳೆದ ‘ಅನಿಮಲ್​’ ಸುಂದರಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ ನಿರ್ಮಾಪಕರು ಮತ್ತು ಸಹ-ನಿರ್ಮಾಪಕರ ನಡುವೆ ಕಾನೂನಿನ ಸಮರ ನಡೆಯುತ್ತಿದ್ದರಿಂದ ಒಟಿಟಿ ರಿಲೀಸ್​ ತಡವಾಯಿತು. ಈಗ ಅಂತಿಮವಾಗಿ ಈ ಸಿನಿಮಾ ಒಟಿಟಿಗೆ ಅಂಗಳಕ್ಕೆ ಎಂಟ್ರಿ ನೀಡುತ್ತಿದೆ. ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಇದೆ. ಜೊತೆಗೆ ವೀಕೆಂಡ್​ ಕೂಡ ಬರುತ್ತಿದೆ. ಹಾಗಾಗಿ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾಗೆ ದಾಖಲೆ ಪ್ರಮಾಣದಲ್ಲಿ ವೀವ್ಸ್​ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ