ಬಾಕ್ಸ್ ಆಫೀಸ್​ನಲ್ಲಿ ಮಾತ್ರವಲ್ಲ ಒಟಿಟಿ ವೀಕ್ಷಣೆಯಲ್ಲೂ ದಾಖಲೆ ಬರೆದ ‘ಅನಿಮಲ್’ ಸಿನಿಮಾ

|

Updated on: Mar 08, 2024 | 7:28 AM

‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಒಟಿಟಿಯಲ್ಲಿ ರಿಲೀಸ್ ಆಯಿತು. ಜನವರಿ ಮಧ್ಯದ ವೇಳೆಗೆ ಈ ಚಿತ್ರ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟಿತ್ತು. ಈಗ ಸತತ ಆರು ವಾರ ಈ ಚಿತ್ರ ‘ನೆಟ್​ಫ್ಲಿಕ್ಸ್​’ನ ಟಾಪ್ 10 ಲಿಸ್ಟ್​ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಚಿತ್ರವನ್ನು ಜನರು ಒಟಿಟಿಯಲ್ಲೂ ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಬಾಕ್ಸ್ ಆಫೀಸ್​ನಲ್ಲಿ ಮಾತ್ರವಲ್ಲ ಒಟಿಟಿ ವೀಕ್ಷಣೆಯಲ್ಲೂ ದಾಖಲೆ ಬರೆದ ‘ಅನಿಮಲ್’ ಸಿನಿಮಾ
ರಣಬೀರ್
Follow us on

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ದಾಖಲೆಗಳು ಕೇವಲ ಬಾಕ್ಸ್ ಆಫೀಸ್​ಗೆ ಮಾತ್ರ ಸೀಮಿತ ಆಗಿಲ್ಲ. ಒಟಿಟಿಯಲ್ಲೂ ಈ ಚಿತ್ರ ದಾಖಲೆ ಬರೆದಿದೆ. ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆರಂಭಿಸಿರೋ ಈ ಸಿನಿಮಾ ಹಲವು ದಾಖಲೆಗಳನ್ನು ಪುಡಿ ಮಾಡಿದೆ.

‘ಅನಿಮಲ್’ ಡಿಸೆಂಬರ್ 1ರಂದು ಒಟಿಟಿಯಲ್ಲಿ ರಿಲೀಸ್ ಆಯಿತು. ಜನವರಿ ಮಧ್ಯದ ವೇಳೆಗೆ ಸಿನಿಮಾ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟಿತ್ತು. ಈಗ ಸತತ ಆರು ವಾರ ಈ ಚಿತ್ರ ‘ನೆಟ್​ಫ್ಲಿಕ್ಸ್​’ನ ಟಾಪ್ 10 ಲಿಸ್ಟ್​ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಚಿತ್ರವನ್ನು ಜನರು ಒಟಿಟಿಯಲ್ಲೂ ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಮುಗಿಬಿದ್ದು ಜನರು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳಲ್ಲಿ ‘ಅನಿಮಲ್’ ಸಿನಿಮಾ ಅತಿ ಹೆಚ್ಚು ವೀಕ್ಷಣೆ ಕಂಡ ಚಿತ್ರ ಎಂಬ ಖ್ಯಾತಿ ಪಡೆದಿದೆ. ‘ಅನಿಮಲ್’ ಚಿತ್ರಕ್ಕೆ 6.2 ಮಿಲಿಯನ್ ವೀವರ್​ಶಿಪ್ ಸಿಕ್ಕರೆ ‘ಡಂಕಿ’ ಚಿತ್ರಕ್ಕೆ 4.9 ವೀವರ್​ಶಿಪ್​ ಸಿಕ್ಕಿದೆ. ‘ಸಲಾರ್’ ಸಿನಿಮಾ ಕೇವಲ 1.6 ಮಿಲಿಯನ್ ವೀವರ್​ಶಿಪ್ ಪಡೆದಿದೆ. ಈ ಮೂಲಕ ‘ಡಂಕಿ’ ಹಾಗೂ ‘ಸಲಾರ್’ ಚಿತ್ರವನ್ನು ‘ಅನಿಮಲ್’ ಹಿಂದಿಕ್ಕಿದೆ.

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿಯತ್ತ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಾಗಿ, ಅನೇಕ ಒಟಿಟಿ ಸಂಸ್ಥೆಗಳು ಸಿನಿಮಾ ಖರೀದಿಯಲ್ಲಿ ಮುಂದಿವೆ. ನೆಟ್​ಫ್ಲಿಕ್ಸ್ ಇತ್ತೀಚೆಗೆ ಭಾರತದ ಚಿತ್ರಗಳನ್ನು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದೆ. ಆದರೆ, ಅವರು ಕನ್ನಡದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಇದೆ.

ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ತೃಪ್ತಿ ದಿಮ್ರಿ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು?

‘ಅನಿಮಲ್’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದ ಹೊರತಾಗಿಯೂ ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿದೆ. ಈ ಚಿತ್ರವನ್ನು ಕೆಲವರು ಟೀಕಿಸಿದ್ದಾರೆ. ಮಹಿಳೆಯರಿಗೆ ಗೌರವ ನೀಡಿಲ್ಲ ಎನ್ನುವ ಆರೋಪ ಎದುರಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ