ಎರಡು ದಿನಗಳ ಅಂತರದಲ್ಲಿ ರಶ್ಮಿಕಾರ ಎರಡು ಸಿನಿಮಾ ಒಟಿಟಿಗೆ
Rashmika Mandanna: ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಯಶಸ್ವಿ ಮತ್ತು ಬಲು ಬೇಡಿಕೆಯ ನಾಯಕ ನಟಿ. ಒಂದರ ಹಿಂದೊಂದು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಕೇವಲ ಎರಡು ದಿನದ ಅಂತರದಲ್ಲಿ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಯಾವವು?

ರಶ್ಮಿಕಾ ಮಂದಣ್ಣ (Rashmika Mandanna) ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಶ್ಮಿಕಾ ನಟಿಸಿರುವ ಸಿನಿಮಾಗಳು ಒಂದರ ಹಿಂದೊಂದು ಯಶಸ್ಸು ಗಳಿಸುತ್ತಲೇ ಇವೆ. ಇತ್ತೀಚೆಗಷ್ಟೆ ರಶ್ಮಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಮಹಿಳಾ ಪ್ರಧಾನ ಸಿನಿಮಾ ‘ದಿ ಗರ್ಲ್ಫ್ರೆಂಡ್’ ಬಿಡುಗಡೆ ಆಗಿ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ಜೊತೆಗೆ ವಿಮರ್ಶಕರಿಂದಲೂ ಸಿನಿಮಾಕ್ಕೆ ಮತ್ತು ರಶ್ಮಿಕಾರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಒಂದೇ ಭಾರಿಗೆ ಒಟಿಟಿಗೆ ಬರುತ್ತಿವೆ.
ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಮ’ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ ಮತ್ತು ನವಾಜುದ್ಧೀನ್ ಸಿದ್ಧಿಖಿ ಅವರುಗಳು ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಅಕ್ಟೋಬರ್ ತಿಂಗಳ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಹಾರರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಇದು ರಶ್ಮಿಕಾರ ಮೊದಲ ಹಾರರ್ ಸಿನಿಮಾ ಸಹ ಆಗಿದ್ದು ವಿಶೇಷ.
ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ‘ಥಮ’ ಸಿನಿಮಾ ಡಿಸೆಂಬರ್ 02ರಂದು ಒಟಿಟಿಯಲ್ಲಿ ಸ್ಟ್ರೀಮೀಂಗ್ ಆರಂಭಿಸಲಿದೆ. ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾವನ್ನು ಮ್ಯಾಡ್ಲಾಕ್ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದು, ಆದಿತ್ಯ ಸರಪೂರ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ‘ಥಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾನಲ್ಲಿ ಮಲೈಕಾ ಅರೋರಾ, ನೋರಾ ಫತೇಹಿಯ ಐಟಂ ಹಾಡುಗಳ ಸಹ ಇವೆ.
ಇದನ್ನೂ ಓದಿ:ಗೆಳತಿಯೊಟ್ಟಿಗೆ ಕೈ-ಕೈ ಹಿಡಿದು ಸುತ್ತಾಡಿದ ರಶ್ಮಿಕಾ ಮಂದಣ್ಣ
ಇನ್ನು ರಶ್ಮಿಕಾ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದ ‘ದಿ ಗರ್ಲ್ಫ್ಪ್ರೆಂಡ್’ ಸಿನಿಮಾ ಸಹ ಒಟಿಟಿಗೆ ಬರುತ್ತಿದೆ. ಥಮ ಸಿನಿಮಾ ಬಿಡುಗಡೆ ಆಗಿ ಎರಡೇ ದಿನಕ್ಕೆ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಸಹ ಒಟಿಟಿಗೆ ಬರುತ್ತಿದೆ. ‘ದಿ ಗರ್ಲ್ಫ್ರೆಂಡ್’ ಸಿನಿಮಾ ಡಿಸೆಂಬರ್ 05 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಮರ್ಶಕರ ಮನ ಗೆದ್ದ ಸಿನಿಮಾ ಆಗಿದೆ.
ರಶ್ಮಿಕಾ ಮಂದಣ್ಣ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದೂ ಸಹ ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಬಾಲಿವುಡ್ನ ‘ಕಾಕ್ಟೈಲ್ 2’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸೆನನ್ ಸಹ ಇದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಬಾಲಿವುಡ್ನ ಮತ್ತೊಂದು ಹೆಸರಿಡದ ಸಿನಿಮಾ ಒಪ್ಪಿಕೊಂಡಿದ್ದಾರೆ. ತಮಿಳಿನ ಅಜಿತ್ ನಟನೆಯ ಹೊಸ ಸಿನಿಮಾನಲ್ಲೂ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




