ಪದೇಪದೇ ಅದೇ ತಪ್ಪು ಮಾಡುತ್ತಿದ್ದಾರೆ ಸಲ್ಮಾನ್​ ಖಾನ್​; ಬೇಸರ ಹೊರ ಹಾಕಿದ ಫ್ಯಾನ್ಸ್​

| Updated By: ರಾಜೇಶ್ ದುಗ್ಗುಮನೆ

Updated on: Sep 11, 2021 | 7:24 PM

‘ರಾಧೆ’ ಸಿನಿಮಾ ರಿಲೀಸ್ ಆಗುವಾಗ ದೇಶದ ಬಹುತೇಕ ಕಡೆಗಳಲ್ಲಿ ಚಿತ್ರಮಂದಿರಗಳು ಕ್ಲೋಸ್ ಇದ್ದವು. ಈ ಕಾರಣಕ್ಕೆ ಚಿತ್ರತಂಡ ಒಟಿಟಿ ಮೊರೆ ಹೋಗಿತ್ತು. ಸಂಪ್ರದಾಯ ಬ್ರೇಕ್​ ಮಾಡಬಾರದು ಎನ್ನುವ ಕಾರಣಕ್ಕೆ ಚಿತ್ರಮಂದಿರದಲ್ಲೂ ಸಲ್ಲು ಸಿನಿಮಾ ರಿಲೀಸ್ ಆಗಿತ್ತು.

ಪದೇಪದೇ ಅದೇ ತಪ್ಪು ಮಾಡುತ್ತಿದ್ದಾರೆ ಸಲ್ಮಾನ್​ ಖಾನ್​; ಬೇಸರ ಹೊರ ಹಾಕಿದ ಫ್ಯಾನ್ಸ್​
Follow us on

ಸಲ್ಮಾನ್​ ಖಾನ್​ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತದೆ. ಸಲ್ಲು ಸಿನಿಮಾ ವಿಮರ್ಶೆಯಲ್ಲಿ ಸೋತ ಹೊರತಾಗಿಯೂ ನೂರು ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಸಾಕಷ್ಟಿದೆ. ‘ರಾಧೆ: ಯುವರ್​ ಮೋಸ್ಟ್ ವಾಂಟೆಡ್​ ಭಾಯ್​’ ಚಿತ್ರದ ವಿಚಾರದಲ್ಲಿ ಸಲ್ಮಾನ್ ಖಾನ್​ ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ಸಿನಿಮಾ ಒಟ್ಟಿಗೆ ರಿಲೀಸ್​ ಮಾಡಿದ್ದರು. ಇದರಿಂದಾಗಿ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ತೀವ್ರಗತಿಯಲ್ಲಿ ಕುಸಿದಿತ್ತು. ಆದರೆ, ಈಗ ಸಲ್ಲು ಮತ್ತದೇ ತಪ್ಪು ಮಾಡುತ್ತಿದ್ದಾರೆ.

‘ರಾಧೆ’ ಸಿನಿಮಾ ರಿಲೀಸ್ ಆಗುವಾಗ ದೇಶದ ಬಹುತೇಕ ಕಡೆಗಳಲ್ಲಿ ಚಿತ್ರಮಂದಿರಗಳು ಕ್ಲೋಸ್ ಇದ್ದವು. ಈ ಕಾರಣಕ್ಕೆ ಚಿತ್ರತಂಡ ಒಟಿಟಿ ಮೊರೆ ಹೋಗಿತ್ತು. ಸಂಪ್ರದಾಯ ಬ್ರೇಕ್​ ಮಾಡಬಾರದು ಎನ್ನುವ ಕಾರಣಕ್ಕೆ ಚಿತ್ರಮಂದಿರದಲ್ಲೂ ಸಲ್ಲು ಸಿನಿಮಾ ರಿಲೀಸ್ ಆಗಿತ್ತು. ಈಗ ಕೊವಿಡ್​ ಕಡಿಮೆ ಆಗಿದ್ದು ದೇಶದ ಬಹುತೇಕ ಕಡೆ ಚಿತ್ರಮಂದಿರ ಓಪನ್​ ಆಗಿದೆ. ಆದಾಗ್ಯೂ ಸಲ್ಲು, ಮತ್ತದೇ ಹಳೆಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಈ ಸಿನಿಮಾ ಜೀ 5ನಲ್ಲಿ ಪ್ರೀಮಿಯರ್​ ಆಗಲಿದೆ ಎನ್ನಲಾಗುತ್ತಿದೆ. ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ.  ಕೊವಿಡ್ ಕಾರಣದಿಂದ ಮಹಾರಾಷ್ಟ್ರದಲ್ಲಿ ಇನ್ನೂ ಚಿತ್ರಮಂದಿರ ತೆರೆದಿಲ್ಲ. ಹೀಗಾಗಿ, ಒಟಿಟಿ ರಿಲೀಸ್​ಗೆ ಸಲ್ಲು ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈ ಮೂಲಕ ಹೆಚ್ಚು ಜನರನ್ನು ತಲುಪೋ ಆಲೋಚನೆ ಅವರದ್ದು. ಇನ್ನು, ಚಿತ್ರಮಂದಿರಗಳಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

‘ಅಂತಿಮ್​-ದಿ ಫೈನಲ್​ ಟ್ರುತ್​’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇನ್ನು, ಸಲ್ಲು ಸಿನಿಮಾ ಎಂದರೆ ಅಲ್ಲಿ, ಆ್ಯಕ್ಷನ್​ಗೆ ಯಾವುದೇ ಕೊರತೆ ಇರುವುದಿಲ್ಲ. ಆದರೆ, ಈ ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ರಿಲೀಸ್​ ಆಗುತ್ತಿರುವುದರಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ಬೀಳಲಿದೆ. ಈ ಬಗ್ಗೆ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

ಸಲ್ಮಾನ್ ಖಾನ್ ‘ಹಿಟ್​ ಆಂಡ್ ರನ್’ ಪ್ರಕರಣವನ್ನು ಹೋಲುವ ‘ಸೆಲ್ಮೋನ್ ಭಾಯಿ’ ಗೇಮ್​ಗೆ ಕೋರ್ಟ್ ತಡೆ; ಏನಿದು ಪ್ರಕರಣ?