Shaakuntalam: ಸದ್ದಿಲ್ಲದೇ ಒಟಿಟಿಗೆ ಬಂತು ‘ಶಾಕುಂತಲಂ’; ಕನ್ನಡದಲ್ಲೂ ಲಭ್ಯವಿದೆ ಸಮಂತಾ ನಟನೆಯ ಹೊಸ ಸಿನಿಮಾ

|

Updated on: May 11, 2023 | 12:17 PM

Amazon Prime Video: ಚಿತ್ರಮಂದಿರಗಳಲ್ಲಿ ‘ಶಾಕುಂತಲಂ’ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ಸಮಂತಾ ಅಭಿಮಾನಿಗಳಿಗೂ ಈ ಚಿತ್ರ ಇಷ್ಟ ಆಗಿರಲಿಲ್ಲ. ಈಗ ಸೈಲೆಂಟ್​ಗಾಗಿ ಈ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ.

Shaakuntalam: ಸದ್ದಿಲ್ಲದೇ ಒಟಿಟಿಗೆ ಬಂತು ‘ಶಾಕುಂತಲಂ’; ಕನ್ನಡದಲ್ಲೂ ಲಭ್ಯವಿದೆ ಸಮಂತಾ ನಟನೆಯ ಹೊಸ ಸಿನಿಮಾ
ಸಮಂತಾ
Follow us on

ಪೌರಾಣಿಕ ಕಥೆಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಆದರೆ ಪೌರಾಣಿಕ ಕಥಾಹಂದರವನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳು ಕೂಡ ಕೆಲವೊಮ್ಮೆ ಸೋತಿದ್ದುಂಟು. ಸಮಂತಾ ರುತ್​ ಪ್ರಭು (Samantha Ruth Prabhu) ನಟನೆ ‘ಶಾಕುಂತಲಂ’ ಸಿನಿಮಾ ಕೂಡ ಹಾಗೆಯೇ ಆಯಿತು. ಬಹುಕೋಟಿ ರೂಪಾಯಿ ಬಜೆಟ್​ ಸುರಿದು ಈ ಸಿನಿಮಾವನ್ನು ನಿರ್ಮಿಸಲಾಗಿತ್ತು. ಚಿತ್ರಮಂದಿರದಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಪ್ರೇಕ್ಷಕರಿಗೆ ‘ಶಾಕುಂತಲಂ’ (Shaakuntalam) ಸಿನಿಮಾ ಸ್ವಲ್ಪವೂ ಹಿಡಿಸಲಿಲ್ಲ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಸೋತ ಸಿನಿಮಾ ಎಂಬ ಕಾರಣಕ್ಕೋ ಏನೋ ಯಾವುದೇ ಅಬ್ಬರದ ಪ್ರಚಾರ ಇಲ್ಲದೇ ಸೈಲೆಂಟ್​ ಆಗಿ ಈ ಚಿತ್ರವನ್ನು ‘ಅಮೇಜಾನ್​ ಪ್ರೈಂ ವಿಡಿಯೋ’ (Amazon Prime Video) ಮೂಲಕ ಸ್ಟ್ರೀಮ್​ ಮಾಡಲಾಗುತ್ತಿದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿತ್ತು. ಪೌರಾಣಿಕ ಕಥೆಗಳು ಎಲ್ಲ ಪ್ರದೇಶಕ್ಕೂ ಅನ್ವಯ ಆಗುತ್ತವೆ. ಆದ್ದರಿಂದ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಒಟಿಟಿ ಮೂಲಕ ಕೂಡ ಈ ಎಲ್ಲ ಭಾಷೆಯಲ್ಲೂ ‘ಶಾಕುಂತಲಂ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ

ಸಮಂತಾ ರುತ್​ ಪ್ರಭು ಅವರನ್ನು ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅವರ ಸಿನಿಮಾಗೆ ಬಂಡವಾಳ ಹೂಡಿದರೆ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ ಎಂದು ಟಾಲಿವುಡ್​ ಮಂದಿ ಊಹಿಸಿದ್ದರು. ಆದರೆ ‘ಶಾಕುಂತಲಂ’ ಸಿನಿಮಾ ಸೋಲಿನಿಂದ ಆ ಲೆಕ್ಕಾಚಾರ ತಲೆಕೆಳಗಾಯಿತು. ಏಪ್ರಿಲ್​ 14ರಂದು ಬಿಡುಗಡೆ ಆದ ಈ ಸಿನಿಮಾಗೆ ಮೊದಲ ವೀಕೆಂಡ್​ ಕಳೆದರೂ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. 3 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಕೂಡ ಕಲೆಕ್ಷನ್ ಆಗಲಿಲ್ಲ. ಒಟಿಟಿಯಲ್ಲಾದರೂ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆಯೇ ಎಂಬ ಕೌತುಕ ಮೂಡಿದೆ.

‘ಶಾಕುಂತಲಂ’ ಸಿನಿಮಾದಲ್ಲಿ ಪೌರಾಣಿಕ ಕಥಾಹಂದರ ಇದೆ. ಶಕುಂತಲೆಯಾಗಿ ಸಮಂತಾ ರುತ್​ ಪ್ರಭು ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್​ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾಳೆ. ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಗ್ರಾಫಿಕ್ಸ್​ ಮೂಲಕ ಕಟ್ಟಿಕೊಟ್ಟ ದೃಶ್ಯಗಳು ಗಮನ ಸೆಳೆದಿವೆ. ಮೇಕಿಂಗ್​ ಗುಣಮಟ್ಟ ಕೂಡ ಚೆನ್ನಾಗಿದೆ. ಹಾಗಿದ್ದರೂ ಸಹ ಚಿತ್ರಮಂದಿರದಲ್ಲಿ ಈ ಸಿನಿಮಾ ಮೋಡಿ ಮಾಡಲಿಲ್ಲ. ಈ ಸೋಲಿನ ಬೇಸರವನ್ನು ಮರೆತು ಸಮಂತಾ ಅವರು ಮುಂದಿನ ಪ್ರಾಜೆಕ್ಟ್​ಗಳತ್ತ ಗಮನ ಹರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.