‘ಶೋಧ’ ವೆಬ್ ಸರಣಿಯಲ್ಲಿ ಸಸ್ಪೆನ್ಸ್​ ಮಾಲೆ; ಗಮನ ಸೆಳೆದ ಟ್ರೇಲರ್

ಜೀ5 ಒಟಿಟಿಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಶೋಧ’ ವೆಬ್ ಸೀರಿಸ್​ನ ಟ್ರೇಲರ್ ರಿಲೀಸ್ ಆಗಿದೆ. ಪವನ್ ಕುಮಾರ್, ಸಿರಿ ರವಿಕುಮಾರ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿದೆ. ಕೆಆರ್ಜಿ ಸ್ಟುಡಿಯೋಸ್ ನಿರ್ಮಿಸಿರುವ ಈ ಸರಣಿ ಆಗಸ್ಟ್ 22ರಿಂದ ವೀಕ್ಷಣೆಗೆ ಲಭ್ಯವಾಗಲಿದೆ.

‘ಶೋಧ’ ವೆಬ್ ಸರಣಿಯಲ್ಲಿ ಸಸ್ಪೆನ್ಸ್​ ಮಾಲೆ; ಗಮನ ಸೆಳೆದ ಟ್ರೇಲರ್
ಶೋಧ ಸರಣಿ

Updated on: Aug 14, 2025 | 8:35 AM

ಪರಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸೀರಿಸ್​​ಗಳು ನಿರ್ಮಾಣ ಆಗಿದ್ದು ಕಡಿಮೆಯೇ. ಈಗ ಜೀ5 ಈ ರೀತಿಯ ವೆಬ್ ಸರಣಿಗಳಿಗೆ ವೇದಿಕೆ ಆಗುತ್ತಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್​ ಸರಣಿಯನ್ನು ಪ್ರಸಾರ ಮಾಡಿತ್ತು. ಈಗ ‘ಶೋಧ’ (Shodha) ಹೆಸರಿನ ವೆಬ್ ಸೀರಿಸ್ ರಿಲೀಸ್ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್ ಬಿಡುಗಡೆ ಕಂಡಿದ್ದು, ಸಸ್ಪೆನ್ಸ್ ಮೂಲಕ ಗಮನ ಸೆಳೆದಿದೆ.

ಕನ್ನಡದಲ್ಲಿ ಹಲವು ಸದಭಿರುಚಿ ಸಿನಿಮಾಗಳನ್ನು ನೀಡಿದ  ‘ಕೆಆರ್​ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನ ಸೆಳೆದವರು ಪವನ್ ಕುಮಾರ್. ಈ ಮೊದಲು ಅವರು ‘ಪಂಚರಂಗಿ’, ‘ಗುಲ್ಟೂ’ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ‘ಶೋಧ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿರಿ ರವಿಕುಮಾರ್, ಸಪ್ತಮಿ ಗೌಡ ಮೊದಲಾದವರು ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದ ‘ಸು ಫ್ರಮ್ ಸೋ’
‘ಸತ್ಯ ಎಲ್ಲಕ್ಕಿಂತ ದೊಡ್ಡದು, ನ್ಯಾಯ ಸಿಗುತ್ತದೆ’; ಪವಿತ್ರಾ ಗೌಡ
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?

ಶೋಧ ಟ್ರೇಲರ್

ಪವನ್ ಕುಮಾರ್ ಅವರು ಪೊಲೀಸ್ ಠಾಣೆಗೆ ಬಂದು ಪತ್ನಿ ಕಳೆದು ಹೋಗಿದ್ದಾರೆ ಎಂದು ದೂರು ನೀಡುತ್ತಾರೆ. ಸಿರಿ ಅವರು ಪವನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸಿರಿ ಪತ್ನಿ ಎಂಬುದನ್ನು ಪವನ್ ಒಪ್ಪಿಕೊಳ್ಳುವುದೇ ಇಲ್ಲ. ಈ ಸರಣಿಯಲ್ಲಿ ಅರುಣ್ ಸಾಗರ್ ಪೊಲೀಸ್ ಪಾತ್ರ ಮಾಡಿದ್ದಾರೆ. ಆಗಸ್ಟ್ 22ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: ‘ಶೋಧ’ ವೆಬ್ ಸರಣಿಯಲ್ಲಿ ಪವನ್ ಕುಮಾರ್ ನಟನೆ: ಜೀ5 ಜತೆ ಕೈ ಜೋಡಿಸಿದ ಕೆಆರ್​ಜಿ

‘ಅಯ್ಯನ ಮನೆ’ ಸರಣಿಯು ಪಕ್ಕಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿತ್ತು. ಇದನ್ನು ಜನರು ಸಾಕಷ್ಟು ಇಷ್ಟಪಟ್ಟರು. ಈಗ ‘ಶೋಧ’ ಸರಣಿಯ ಟ್ರೇಲರ್ ಭರವಸೆ ಮೂಡಿಸಿದ್ದು, ಗೆಲ್ಲುವ ಭರವಸೆಯಲ್ಲಿ ತಂಡ ಇದೆ. ಈ ಸರಣಿ ಕೂಡ ಗೆಲುವು ಕಂಡರೆ ಕನ್ನಡದಲ್ಲಿ ಮತ್ತಷ್ಟು ವೆಬ್ ಸರಣಿಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ಸಿಕ್ಕಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.