AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಕನ್ನಡದ ‘ಶೋಧ’ ವೆಬ್ ಸರಣಿ? ಏನಿದೆ? ಏನಿಲ್ಲ?

Shodha Web Series: ಜೀ5 ವೆಬ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿರುವ 'ಶೋಧ' ಕನ್ನಡ ವೆಬ್ ಸರಣಿಯು ಪವನ್ ಕುಮಾರ್ ಅವರ ಅತ್ಯುತ್ತಮ ಅಭಿನಯವನ್ನು ಒಳಗೊಂಡಿದೆ. ರೋಹಿತ್ ಎಂಬ ವಕೀಲನ ಕಥೆಯನ್ನು ಹೊಂದಿರುವ ಈ ಸರಣಿಯು ಅನೇಕ ಟ್ವಿಸ್ಟ್‌ಗಳನ್ನು ಹೊಂದಿದ್ದು, ಕಥಾವಸ್ತುವಿನಲ್ಲಿ ಅನಿರೀಕ್ಷಿತ ತಿರುವುಗಳಿವೆ.

ಹೇಗಿದೆ ಕನ್ನಡದ ‘ಶೋಧ’ ವೆಬ್ ಸರಣಿ? ಏನಿದೆ? ಏನಿಲ್ಲ?
ಶೋಧ
ರಾಜೇಶ್ ದುಗ್ಗುಮನೆ
|

Updated on: Sep 01, 2025 | 1:03 PM

Share

ಪರಭಾಷೆಯವರು ವೆಬ್ ಸರಣಿ ನಿರ್ಮಾಣದಲ್ಲಿ ತುಂಬಾನೇ ಮುಂದೆ ಹೋಗಿವೆ. ಕನ್ನಡದಲ್ಲಿ ಈ ರೀತಿಯ ಕಂಟೆಂಟ್​ಗಳು ಕಡಿಮೆ. ಈಗ ಜೀ5ನಲ್ಲಿ ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ‘ಅಯ್ಯನಮನೆ’ ಬಳಿಕ ‘ಶೋಧ’ (Shodha) ಸರಣಿ ಬಿಡುಗಡೆ ಕಂಡಿದೆ. ಈ ವೆಬ್​ ಸೀರಿಸ್​​​ನ ಸುನಿಲ್ ಮೈಸೂರು ನಿರ್ದೇಶನ ಮಾಡಿದರೆ ಪವನ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಕೆಆರ್​ಜಿ ಸ್ಟುಡಿಯೋ ನಿರ್ಮಾಣ ಮಾಡಿದೆ. ಆ ಸರಣಿ ಬಗ್ಗೆ ಇಲ್ಲಿದೆ ವಿವರ.

ರೋಹಿತ್ ಓರ್ವ ಅತ್ಯುತ್ತಮ ವಕೀಲ. ಪ್ರಕರಣವನ್ನು ಯಾವ ರೀತಿಯಲ್ಲಿ ತಿರುಚಬೇಕು ಎಂಬುದರ ವಿಚಾರ ಆತನಿಗೆ ಗೊತ್ತಿದೆ. ಈತ ತನ್ನ ಬರ್ತ್​​ಡೇಗಾಗಿ ಮಡಿಕೇರಿಗೆ ಬರುತ್ತಾನೆ. ಅಲ್ಲಿ ಪತ್ನಿ ಕಾಣೆ ಆಗುತ್ತಾಳೆ. ಪೊಲೀಸರ (ಅರುಣ್ ಸಾಗರ್) ಬಳಿ ದೂರು ಕೂಡ ನೀಡುತ್ತಾನೆ. ಹೀಗಿರುವಾಗಲೇ ಅವನಿಗೆ ಅಪಘಾತ ಆಗುತ್ತದೆ. ಆಗ ಪತ್ನಿ (ಸಿರಿ ರವಿಕುಮಾರ್) ಬರುತ್ತಾಳೆ. ಆದರೆ, ಆಕೆ ತನ್ನ ಪತ್ನಿಯೇ ಅಲ್ಲ ಎನ್ನುತ್ತಾನೆ ರೋಹಿತ್. ನಿಜಕ್ಕೂ ರೋಹಿತ್​ನ ಪತ್ನಿ ಅವಳಲ್ಲವಾ? ಅವಳ ಹಿನ್ನೆಲೆ ಎನು? ರೋಹಿತ್ ಯಾರು ಎಂಬಿತ್ಯಾದಿ ವಿಚಾರಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ.

‘ಶೋಧ’ ಸರಣಿಯಲ್ಲಿ ಹಲವು ಟ್ವಿಸ್ಟ್​ಗಳಿವೆ. ಕೆಲವು ಟ್ವಿಸ್ಟ್​ಗಳು ಊಹಿಸಬಹುದಾಗಿದೆ. ಇನ್ನೂ ಕೆಲವು ಟ್ವಿಸ್ಟ್​ಗಳು ಸರ್​ಪ್ರೈಸ್ ನೀಡುತ್ತವೆ. ಮೊದಲ ಎರಡು ಎಪಿಸೋಡ್​ಗಳು ನಾರ್ಮಲ್ ಆಗಿ ಸಾಗಿದರೆ, ಮೂರನೇ ಎಪಿಸೋಡ್​ನಲ್ಲಿ ದೊಡ್ಡದೊಂದು ಟ್ವಿಸ್ಟ್ ತೆರೆದುಕೊಳ್ಳುತ್ತದೆ. ಅಲ್ಲಿಂದ, ಕಥೆ ಬೇರೆಯದೇ ರೀತಿಯಲ್ಲಿ ಸಾಗುತ್ತದೆ. ಕೊನೆಯ ಎಪಿಸೋಡ್​ನಲ್ಲಿ ಎಲ್ಲ ಕುತೂಹಲಕ್ಕೆ ತೆರೆ ಬೀಳುತ್ತದೆ.

ಇದನ್ನೂ ಓದಿ
Image
‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ’; ಸಲ್ಮಾನ್
Image
‘ಸು ಫ್ರಮ್ ಸೋ ಅಬ್ಬರ’; 38ನೇ ದಿನ ದೊಡ್ಡ ಮೊತ್ತ ಬಾಚಿದ ಸಿನಿಮಾ
Image
‘ಕಡಿಮೆ ಬೆಲೆ ಎಂದು ಮುಸ್ಲಿಮರು ಗೋಮಾಂಸ ಸೇವಿಸುತ್ತಾರೆ, ನಾನು ತಿಂದೇ ಇಲ್ಲ’
Image
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್

‘ಶೋಧ’ ಸರಣಿ ನೋಡಿದ ಅನೇಕರು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸರಣಿಯಲ್ಲಿ ಪವನ್ ಕುಮಾರ್ ಪಾತ್ರ ತುಂಬಾನೇ ಹೈಲೈಟ್. ಅವರ ಬುದ್ಧಿವಂತಿಕೆಯನ್ನು ಅನೇಕರು ‘ಮನಿ ಹೇಸ್ಟ್​ನ ಪ್ರೊಫೆಸರ್​ಗೆ ಹೋಲಿಕೆ ಮಾಡಿದ್ದಾರೆ. ಇನ್ನೂ ಕೆಲವರು ಸರಣಿ ಇಷ್ಟ ಆಗಿಲ್ಲ ಎಂದಿದ್ದಾರೆ. ‘ಶೋಧ’ ಸರಣಿ ಎವರೇಜ್ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಶೋಧ’ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಪಡೆದ ‘ಸರಿಗಮಪ’ ದಿಯಾ ಹೆಗ್ಡೆ

ಇನ್ನು, ಕೆಲವರು ಡೈಲಾಗ್​ ಬಗ್ಗೆ ಅಪಸ್ವರ ತೆಗೆದಿದ್ದಾರೆ. ‘ನ, ಣ, ಲ,ಳ’ ಉಚ್ಚಾರಣೆ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಹರಿಸಿಲ್ಲ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.