ಸೋನು ಶ್ರೀನಿವಾಸ್ ಮಾಡಿದ ಕೆಲಸದಿಂದ ಕುಂಬಳಕಾಯಿಗೆ ಬಂತು ಭಾರೀ ಬೇಡಿಕೆ

| Updated By: ರಾಜೇಶ್ ದುಗ್ಗುಮನೆ

Updated on: Sep 09, 2022 | 8:59 PM

ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್’ ಮನೆಯಲ್ಲಿ ಕುಂಬಳಕಾಯಿ ಬಳಕೆ ಮಾಡಿಕೊಂಡು ಅಡುಗೆ ಮಾಡಿದ್ದಾರೆ. ಈ ಅಡುಗೆ ಸವಿದು ಮನೆ ಮಂದಿ ಸಖತ್ ಇಷ್ಟಪಟ್ಟಿದ್ದಾರೆ.

ಸೋನು ಶ್ರೀನಿವಾಸ್ ಮಾಡಿದ ಕೆಲಸದಿಂದ ಕುಂಬಳಕಾಯಿಗೆ ಬಂತು ಭಾರೀ ಬೇಡಿಕೆ
ಸೋನು
Follow us on

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಈ ವಾರ ಡೇಂಜರ್​ಜೋನ್​ನಲ್ಲಿ ಇದ್ದಾರೆ. ಈ ಕಾರಣದಿಂದ ಅವರು ಎಲ್ಲರನ್ನೂ ಎಂಟರ್​ಟೇನ್​ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಫಿನಾಲೆ ವಾರ ತಲುಪುವ ಆಲೋಚನೆಯಲ್ಲಿ ಅವರಿದ್ದಾರೆ. ಸುದೀಪ್ (Kichcha Sudeep) ನೀಡಿದ ಎಚ್ಚರಿಕೆ ನಂತರದಲ್ಲಿ ಸೋನು ಅವರು ಕೆಲವು ವಿಚಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಅಡುಗೆ ಮಾಡೋಕೆ ಆಸಕ್ತಿ ತೋರಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. 16 ಜನ ಇದ್ದ ಮನೆಯಲ್ಲಿ 9ಕ್ಕೆ ಇಳಿಕೆ ಆಗಿದೆ. ಈ ಕಾರಣಕ್ಕೆ ಮನೆಯಲ್ಲಿ ಯಾರೂ ಇಲ್ಲ ಎಂಬಂತಹ ಫೀಲ್ ಕೊಡುತ್ತಿದೆ. ಹೀಗಾಗಿ, ಎಲ್ಲರೂ ಎಲ್ಲ ಕೆಲಸ ಮಾಡಬೇಕಿದೆ. ಹೀಗಾಗಿ, ಸೋನು ಶ್ರೀನಿವಾಸ್ ಗೌಡ ಅಡುಗೆ ಮಾಡೋಕೆ ಇಳಿದಿದ್ದಾರೆ. ಇದನ್ನು ನೋಡಿ ಮನೆ ಮಂದಿ ಅಚ್ಚರಿ ಹೊರಹಾಕಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಮೊದಲ ಕೆಲ ವಾರ ಅಡುಗೆ ಮನೆಗೆ ತೆರಳಿರಲಿಲ್ಲ. ನಂತರ ಜನರು ವೋಟ್ ಮಾಡಿದ ಕಾರಣಕ್ಕೆ ಅವರಿಗೆ ಒಮ್ಮೆ ಅಡುಗೆ ಮಾಡಬೇಕಾಗಿ ಬಂದಿತ್ತು. ಆ ಕಾರಣಕ್ಕೆ ಅವರು ಅಡುಗೆ ಮನೆಯತ್ತ ಮುಖ ಮಾಡಿದ್ದರು. ಅವರ ನಳಪಾಕ ಮನೆಯವರಿಗೆ ಇಷ್ಟವಾಗಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅಡುಗೆ ಮಾಡಿದ್ದಾರೆ.

ಇದನ್ನೂ ಓದಿ
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್’ ಮನೆಯಲ್ಲಿ ಕುಂಬಳಕಾಯಿ ಬಳಕೆ ಮಾಡಿಕೊಂಡು ಅಡುಗೆ ಮಾಡಿದ್ದಾರೆ. ಈ ಅಡುಗೆ ಸವಿದು ಮನೆ ಮಂದಿ ಸಖತ್ ಇಷ್ಟಪಟ್ಟಿದ್ದಾರೆ. ಅಡುಗೆ ಮಾಡುವ ವಿಧಾನವನ್ನು ಅವರು ಜನರಿಗೆ ವಿವರಿಸಿದ್ದಾರೆ. ‘ವೀಕ್ಷಕರೇ ನೀವು ಈ ಅಡುಗೆ ಮಾಡಿ. ನನ್ನ ರೆಸಪಿ ಫಾಲೋ ಮಾಡಿ’ ಎಂದು ಕೋರಿದರು ಸೋನು ಶ್ರೀನಿವಾಸ್ ಗೌಡ.

ಇದನ್ನೂ ಓದಿ: ಸುದೀಪ್ ಬೈದರೂ ಬದಲಾಗಿಲ್ಲ ಸೋನು ಶ್ರೀನಿವಾಸ್ ಗೌಡ ನಡವಳಿಕೆ; ಮತ್ತೆ ‘ಥೂ’ ಎಂದು ಬೈದ ವೈರಲ್ ಹುಡುಗಿ

ಇದಾದ ಬೆನ್ನಲ್ಲೇ ಮನೆಯ ಮಂದಿ ಸೋನು ಅವರನ್ನು ಕಾಲೆಳೆಯೋಕೆ ಆರಂಭಿಸಿದರು. ‘ಸೋನು ಕುಂಬಳಕಾಯಿ ಅಡುಗೆ ಮಾಡಿ ಇವತ್ತು ರಾಜ್ಯದ ಎಲ್ಲ ವೀಕ್ಷಕರ ಮನೆಯಲ್ಲೂ ಇದೇ ಅಡುಗೆ ಮಾಡ್ತಾರೆ. ಹೀಗಾಗಿ, ಕುಂಬಳಕಾಯಿಗೆ ಸಖತ್ ಬೇಡಿಕೆ ಬರುತ್ತದೆ’ ಎಂದರು ಆರ್ಯವರ್ಧನ್​.