Sonu Gowda: ಸೋನು ಗೌಡ ಮುಖ ನೋಡಿ ಕುಸಿದು ಬಿದ್ದ ಗುರೂಜಿ; ಅಸಲಿಗೆ ಅಲ್ಲಿ ನಡೆದಿದ್ದು ಏನು?

| Updated By: ಮದನ್​ ಕುಮಾರ್​

Updated on: Aug 28, 2022 | 8:43 PM

Aryavardhan Guruji | Bigg Boss Kannada OTT: ಬಾತ್​ ರೂಮ್​ನಲ್ಲಿ ಆರ್ಯವರ್ಧನ್​ ಗುರೂಜಿ ಕುಸಿದು ಬಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಒಂದಷ್ಟು ನಿಮಿಷಗಳ ಕಾಲ ಆತಂಕದ ವಾತಾವರಣ ನಿರ್ಮಾಣ ಆಯಿತು.

Sonu Gowda: ಸೋನು ಗೌಡ ಮುಖ ನೋಡಿ ಕುಸಿದು ಬಿದ್ದ ಗುರೂಜಿ; ಅಸಲಿಗೆ ಅಲ್ಲಿ ನಡೆದಿದ್ದು ಏನು?
ಸೋನು ಗೌಡ
Follow us on

‘ಬಿಗ್​ ಬಾಸ್​ ಒಟಿಟಿ’ (Bigg Boss Kannada OTT) ಶೋ ಹಲವು ಇಂಟರೆಸ್ಟಿಂಗ್​ ಘಟನೆಗಳಿಗೆ ಸಾಕ್ಷಿ ಆಗುತ್ತಿದೆ. ಆರ್ಯವರ್ಧನ್​ ಗುರೂಜಿ ಅವರು ನಿರೀಕ್ಷೆಗೂ ಮೀರಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ನೈಜ ಸ್ವಭಾವದಿಂದ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಪ್ರತಿ ವಾರದ ಎಲಿಮಿನೇಷನ್​ನಲ್ಲಿ ಅವರು ಬಚಾವ್​ ಆಗುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಆರ್ಯವರ್ಧನ್​ ಗುರೂಜಿ (Aryavardhan Guruji) ಅವರಿಗೆ ದೆವ್ವ ಎಂದರೆ ಸಖತ್​ ಭಯ. ಆ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಆ ಭಯವನ್ನೇ ಟಾರ್ಗೆಟ್​ ಮಾಡಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಅವರನ್ನು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ದೆವ್ವದ ರೀತಿಯಲ್ಲಿ ಮೇಕಪ್​ ಮಾಡಿಕೊಂಡು ಹೆದರಿಸಿದ್ದಾರೆ. ನಂತರ ಆಗಿದ್ದು ನಿಜಕ್ಕೂ ಶಾಕಿಂಗ್​ ಘಟನೆ. ಈ ಬಗ್ಗೆ ಕಿಚ್ಚ ಸುದೀಪ್​ ಅವರು ವಾರದ ಪಂಚಾಯಿತಿಯಲ್ಲಿ ಮಾತುಕಥೆ ಮಾಡಿದ್ದಾರೆ.

ಆರ್ಯವರ್ಧನ್​ ಗುರೂಜಿ ಅವರನ್ನು ಹೆದರಿಸಬೇಕು ಎಂದು ಸೋನು ಶ್ರೀನಿವಾಸ್​ ಗೌಡ ಹಾಗೂ ಅಕ್ಷತಾ ಕುಕ್ಕಿ ಅವರು ಪ್ಲ್ಯಾನ್​ ಮಾಡಿದ್ದರು. ಆ ಪ್ಲ್ಯಾನ್​ನಲ್ಲಿ ರಾಕೇಶ್​ ಅಡಿಗ ಕೂಡ ಇದ್ದರು. ಆದರೆ ಅವರು ಉಲ್ಟಾ ಹೊಡೆದರು. ಸೋನು ಮತ್ತು ಅಕ್ಷತಾ ಮಾಡಿದ ಪ್ಲ್ಯಾನ್​ ಬಗ್ಗೆ ಗುರೂಜಿಗೆ ರಾಕೇಶ್​ ಮೊದಲೇ ಮಾಹಿತಿ ಲೀಕ್​ ಮಾಡಿದರು. ಆದರೂ ಕೂಡ ಎಡವಟ್ಟು ನಡೆಯಿತು!

ಆರ್ಯವರ್ಧನ್​ ಅವರು ಬಾತ್​ ರೂಮ್​ನಲ್ಲಿ ಇದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು. ಕೆಳಗಿ ಬಿದ್ದು ಪ್ರಜ್ಞೆ ತಪ್ಪಿದ ಅವರನ್ನು ರೂಪೇಶ್​ ಮತ್ತು ರಾಕೇಶ್​ ಸೇರಿ ಎತ್ತಿಕೊಂಡು ಬಂದರು. ಇಡೀ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಯಿತು.

ಇದನ್ನೂ ಓದಿ
Sonu Srinivas Gowda: ‘ಸೋನು ಗೌಡ ಇದ್ದಲ್ಲಿ ಮಜಾ ಇರತ್ತೆ’; ಬಿಗ್​ ಬಾಸ್​ ಸ್ಪರ್ಧಿಗಳು ಹೀಗೆ ಹೇಳೋಕೆ ಕಾರಣ ಏನು?
Sonu Srinivas Gowda: ‘ಹುಡುಗರನ್ನು ಮನೆಯಿಂದ ಹೊರಗೆ ಕಳಿಸಬೇಕು’; ಬಿಗ್​ ಬಾಸ್​​ನಲ್ಲಿ ಸೋನು ಶ್ರೀನಿವಾಸ್​ ಗೌಡ ಪ್ಲ್ಯಾನ್​
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಆರ್ಯವರ್ಧನ್​ ಅವರಿಗೆ ಹಾರ್ಟ್​ ಅಟ್ಯಾಕ್​ ಆಗಿರಬಹುದು ಎಂದು ಎಲ್ಲರೂ ಭಯಪಟ್ಟರು. ‘ನಾನೆಲ್ಲೋ ಇದು ಜೋಕ್​ ಅಂದುಕೊಂಡೆ. ದೇವರಾಣೆ ಜೋಕ್​ ಅಲ್ಲ’ ಎಂದು ರೂಪೇಶ್​ ಆತಂಕ ಹೊರಹಾಕಿದರು. ನಂತರ ಗುರೂಜಿಯನ್ನು ಸಮಾಧಾನ ಮಾಡುವ ಕೆಲಸ ಎಲ್ಲರಿಂದ ಆಯಿತು. ‘ನಿಜಕ್ಕೂ ದೆವ್ವ ಅಂತ ಹೆದರಿಕೊಂಡೆ’ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ. ಬಾತ್​ ರೂಮ್​ನಲ್ಲಿ ಅವರು ಬಿದ್ದಿದ್ದ ರೀತಿಯನ್ನು ನೆನಪಿಸಿಕೊಂಡು ಅಕ್ಷತಾ ಕುಕ್ಕಿ ಅತ್ತರು.

ಈ ಎಲ್ಲ ವಿಚಾರ ‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಚರ್ಚೆಗೆ ಬಂದಿದೆ. ಆರ್ಯವರ್ಧನ್​ ಗುರೂಜಿಗೆ ಕಿಚ್ಚ ಸುದೀಪ್​ ಸಮಾಧಾನ ಮಾಡಿದ್ದಾರೆ. ‘ಬಾತ್​ ರೂಮ್​ನಲ್ಲಿ ದೆವ್ವ ಇಲ್ಲ. ನಿಮ್ಮ ಸುತ್ತ-ಮುತ್ತ 300 ತಂತ್ರಜ್ಞರು ಇದ್ದಾರೆ. ನಿಮಗೆ ತೊಂದರೆ ಆದ್ರೆ ತಕ್ಷಣ ಸಹಾಯಕ್ಕೆ ಬರುತ್ತಾರೆ’ ಎಂದು ಸುದೀಪ್​ ಅಭಯ ನೀಡಿದ್ದಾರೆ.

‘ನಾನು ದೆವ್ವಕ್ಕೆ ಹೆದರುತ್ತೇನೆ. ರಾತ್ರಿ ಸಿನಿಮಾ ನೋಡಿಕೊಂಡು ಬಂದಾಗ ನಮ್ಮ ಮನೆಯಲ್ಲಿ ಯಾರಾದರೂ ನನ್ನನ್ನು ಲಿಫ್ಟ್​ವರೆಗೆ ಬಿಟ್ಟು ಹೋಗಬೇಕು. ಅಷ್ಟು ಹೆದರುತ್ತೇನೆ’ ಎಂದು ಗುರೂಜಿ ಅವರು ಹೇಳಿದ್ದಾರೆ. ದೊಡ್ಮನೆಯಲ್ಲಿ ಪ್ರ್ಯಾಂಕ್​ ಮಾಡುವವರಿಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ. ‘ನೋಡಿಕೊಂಡು ತಮಾಷೆ ಮಾಡಿ. ಕೆಲವರಿಗೆ ದೊಡ್ಡ ಹಾನಿ ಆಗಬಹುದು. ಅದರಿಂದ ಜೀವನವಿಡೀ ಪಶ್ಚಾತ್ತಾಪ ಪಡುವಂತೆ ಆಗಬಾರದು’ ಎಂದು ಸೋನು ಶ್ರೀನಿವಾಸ್​ ಗೌಡ ಅವರಿಗೆ ಸುದೀಪ್​ ಕಿವಿಮಾತು ಹೇಳಿದ್ದಾರೆ.

Published On - 8:43 pm, Sun, 28 August 22