AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ವಿಶ್ವವೇ ಮೆಚ್ಚಿದ್ದ ‘ಸ್ಕ್ವಿಡ್ ಗೇಮ್ಸ್’: ಆಟ ಅದೇ, ಆಟಗಾರರು ಬದಲು

2021 ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದ ಸ್ಕ್ವಿಡ್ ಗೇಮ್ಸ್ ದಾಖಲೆಗಳನ್ನು ಬರೆದಿತ್ತು. ಅತಿ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿಗಳಲ್ಲಿ ಒಂದಾಗಿತ್ತು ಈ ಶೋ. ಈಗ ಮತ್ತೆ ಸ್ಕ್ವಿಡ್ ಗೇಮ್ಸ್ ಸೀಸನ್ 2 ಬಿಡುಗಡೆ ಆಗುತ್ತಿದೆ. ಶೋನ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಮತ್ತೆ ಬರುತ್ತಿದೆ ವಿಶ್ವವೇ ಮೆಚ್ಚಿದ್ದ ‘ಸ್ಕ್ವಿಡ್ ಗೇಮ್ಸ್’: ಆಟ ಅದೇ, ಆಟಗಾರರು ಬದಲು
ಮಂಜುನಾಥ ಸಿ.
|

Updated on:Nov 03, 2024 | 7:52 AM

Share

ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಂದಿ ನೋಡಿದ ಶೋ ಎನಿಸಿಕೊಂಡಿತ್ತು ಕೊರಿಯಾದ ‘ಸ್ಕ್ವಿಡ್ ಗೇಮ್ಸ್’ ನೆಟ್​ಫ್ಲಿಕ್ಸ್​ನಲ್ಲಿ ಮೊದಲ ಬಾರಿ ಬಿಡುಗಡೆ ಆದಾಗ ವಿಶ್ವದಾಖಲೆಯನ್ನು ಬರೆದಿತ್ತು ಈ ಶೋ. ಬಹುತೇಕ ಎಲ್ಲರೂ ತಮ್ಮ ಸಣ್ಣ ವಯಸ್ಸಿನಲ್ಲಿ ಆಡಿರುವ ಆಟಗಳನ್ನೇ ಸ್ಪರ್ಧಿಗಳಿಗೆ ಆಡಿಸಿ ಅವರಿಗೆ ಭಾರಿ ದೊಡ್ಡ ಮೊತ್ತದ ಬಹುಮಾನದ ಮೊತ್ತವನ್ನು ನೀಡುವ ರಿಯಾಲಿಟಿ ಶೋ ಇದು. ಆದರೆ ಇಲ್ಲಿ ಸೋತವನು ಮನೆಗೆ ಹೋಗುವುದಿಲ್ಲ ಬದಲಿಗೆ ಸತ್ತೇ ಹೋಗುತ್ತಾನೆ. ಎಲ್ಲ ಆಟ ಆಡಿ ಗೆದ್ದು ಕೊಲೆಯಲ್ಲಿ ಉಳಿಯುವ ಒಬ್ಬ ವ್ಯಕ್ತಿ ವಿಜೇತನಾಗುತ್ತಾನೆ ಅವನಿಗೆ ಕೋಟ್ಯಂತರ ರೂಪಾಯಿ ಬಹುಮಾನ ನೀಡಲಾಗುತ್ತದೆ.

‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ 2021 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ವಿಶ್ವದಾದ್ಯಂತ ಭಾರಿ ಸಂಖ್ಯೆಯ ಜನ ಈ ಶೋ ಅನ್ನು ನೋಡಿದ್ದರು. ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು ‘ಸ್ಕ್ವಿಡ್ ಗೇಮ್ಸ್’ ಮಾತ್ರವಲ್ಲದೆ ನೆಟ್​ಫ್ಲಿಕ್ಸ್​ಗೆ ಭಾರಿ ಲಾಭ ಮಾಡಿಕೊಟ್ಟ ಶೋ ಎಂಬ ಖ್ಯಾತಿಯನ್ನೂ ಪಡೆದುಕೊಂಡಿತ್ತು. ಆ ಸಮಯದಲ್ಲಿಯೇ ಈ ವೆಬ್ ಸರಣಿಯ ಎರಡನೇ ಸೀಸನ್ ಘೋಷಿಸಲಾಗಿತ್ತು. ಈಗ ಮೂರು ವರ್ಷದ ಬಳಿಕ ಈ ವೆಬ್ ಸರಣಿಯ ಎರಡನೇ ಸೀಸನ್ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಹಾಲಿವುಡ್ ಭಾರಿ ಬಜೆಟ್ ವೆಬ್ ಸರಣಿಯಲ್ಲಿ ಟಬು, ವಾವ್ ಎಂದ ನೆಟ್ಟಿಗರು

‘ಸ್ಕ್ವಿಡ್ ಗೇಮ್ಸ್’ ಸೀಸನ್ 2ರ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಮೊದಲ ಸೀಸನ್​ನ ವಿಜೇತ ಸಾಂಗ್ ಜಿ ಹುನ್ ಈಗ ಎರಡನೇ ಸೀಸನ್​ನಲ್ಲಿ ಮತ್ತೆ ಆಟ ಆಡಲು ಹೋಗಿದ್ದಾನೆ. ಆದರೆ ಮೊದಲ ಬಾರಿ ಆತ ಆಡಿದ ಆಟಗಳೇ ಈ ಬಾರಿಯೂ ಇವೆ, ಹಾಗಾಗಿ ಯಾರೂ ಸಾಯದಂತೆ ಎಲ್ಲರೂ ಗೆಲ್ಲುವಂತೆ ಆಟ ಆಡಿಸಲು ತಾನೇ ನೇತೃತ್ವ ವಹಿಸಿದ್ದಾನೆ. ಆದರೆ ಆತನ ಮಾತು ಕೇಳದ ಕೆಲವರು ಆಟದಲ್ಲಿ ಸೋತು ಸಾವನ್ನಪ್ಪಿದ್ದಾರೆ. ಆಟ ಆಡಿಸುವಾತನ ಎಲ್ಲರನ್ನೂ ಕೊಲ್ಲುವ ಪ್ರಯತ್ನದಲ್ಲಿದ್ದಾ ಆಟ ಆಡುತ್ತಿರುವ ಸಾಂಗ್ ಜಿ ಹುನ್ ಎಲ್ಲರನ್ನೂ ಬದುಕಿಸುವ ಪ್ರಯತ್ನದಲ್ಲಿದ್ದಾನೆ. ಇಬ್ಬರಲ್ಲಿ ಯಾರಿಗೆ ಗೆಲುವಾಗುತ್ತದೆ ಎಂಬ ಕುತೂಹಲವನ್ನು ಈಗ ಬಿಡುಗಡೆ ಆಗಿರುವ ಟ್ರೈಲರ್ ಮೂಡಿಸಿದೆ.

ಇನ್ನು ಮೊದಲ ಸೀಸನ್​ನಲ್ಲಿದ್ದ ಇದ್ದ ರೀತಿಯಲ್ಲಿಯೇ ಆಟಗಾರರ ಸಮವಸ್ತ್ರ, ಆಟ ಆಡಿಸುವವರ ಮುಖ ಕಾಣಿಸದ ಸಮವಸ್ತ್ರಗಳಿವೆ. ಈ ಬಾರಿ ಆಟ ಆಡಿಸುವ ಮುಖ್ಯ ವಿಲನ್​ ಯಾರೆಂದು ಸಹ ತೋರಿಸಲಾಗಿದೆ. ಆದರೆ ಮೊದಲ ಸೀಸನ್​ನಲ್ಲಿ ಇದನ್ನು ತೋರಿಸಿರಲಿಲ್ಲ. ‘ಸ್ಕ್ವಿಡ್ ಗೇಮ್’ ಸೀಸನ್ 2 ಡಿಸೆಂಬರ್ 26ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಮೊದಲ ಸೀಸನ್ ನಿರ್ದೇಶನ ಮಾಡಿದ್ದ ಕೊರಿಯಾದ ಹ್ವಾಂಗ್ ಡಾಕ್ ಹ್ಯುಕ್ ಅವರೇ ಎರಡನೇ ಸೀಸನ್ ಸಹ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:49 am, Sun, 3 November 24