ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಿಂದ ರಾಜಮೌಳಿ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ತುಂಬಾನೇ ದೊಡ್ಡದು. ಈ ದಾಖಲೆಗಳನ್ನು ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಈ ಮಧ್ಯೆ ರಾಜಮೌಳಿ ಅವರು ಒಂದು ಅಚ್ಚರಿಯ ಅಪ್ಡೇಟ್ ನೀಡಿದ್ದಾರೆ. ‘ಬಾಹುಬಲಿ’ ಹೆಸರಲ್ಲಿ ಸೀರಿಸ್ ಘೋಷಣೆ ಮಾಡಿದ್ದಾರೆ. ಇದರ ಟ್ರೇಲರ್ ಕೂಡ ಶೀಘ್ರವೇ ರಿಲೀಸ್ ಆಗಲಿದೆಯಂತೆ.
‘ಬಾಹುಬಲಿ’ ಸಿನಿಮಾ ಮಾಡಿದ ಮೇಲೆ ಅದನ್ನು ಸೀರಿಸ್ ಮಾಡೋದು ಏಕೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಇದು ಅನಿಮೇಟೆಡ್ ಸೀರಿಸ್. ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಎಂದು ಸರಣಿಗೆ ಹೆಸರಿಡಲಾಗಿದೆ. ರಿಲೀಸ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ಬಾಹುಬಲಿ.. ಬಾಹುಬಲಿ ಎಂಬ ಘೋಷ ಕೇಳುತ್ತಿದೆ. ಇದು ಸಾಕಷ್ಟು ಕುತೂಹಲ ಮೂಡಿಸುತ್ತದೆ.
ಇದನ್ನೂ ಓದಿ: ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್ ಬಾಬು ಲುಕ್ ಬಹಿರಂಗ
ಈ ಬಗ್ಗೆ ರಾಜಮೌಳಿ ಮಾಹಿತಿ ನೀಡಿದ್ದಾರೆ. ‘ಮಾಹಿಷ್ಮತಿಯ ಜನರು ಅವನ ಹೆಸರನ್ನು ಜಪಿಸಿದಾಗ, ಬ್ರಹ್ಮಾಂಡದ ಯಾವುದೇ ಶಕ್ತಿಯು ಅವನ ಹಿಂತಿರುಗಿವುಕೆಯನ್ನು ತಡೆಯಲು ಸಾಧ್ಯವಿಲ್ಲ. ಬಾಹುಬಲಿ: ಕ್ರೌನ್ ಆಫ್ ಬ್ಲಡ್ ಅನಿಮೇಟೆಡ್ ಸರಣಿ ಶೀಘ್ರವೇ ಬರಲಿದೆ’ ಎಂದಿದ್ದಾರೆ ರಾಜಮೌಳಿ. ರಾಜಮೌಳಿ ಅವರೇ ಇದನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಇದು ‘ಬಾಹುಬಲಿ’ ಸಿನಿಮಾ ಕಥೆಯನ್ನೇ ಹೊಂದಿರಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
When the people of Mahishmati chant his name, no force in the universe can stop him from returning.
Baahubali: Crown of Blood, an animated series trailer, arrives soon! pic.twitter.com/fDJ5FZy6ld
— rajamouli ss (@ssrajamouli) April 30, 2024
‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ. ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 1 May 24