‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?  

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಾಮ್ ಸೋ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು. 46 ದಿನಗಳ ಯಶಸ್ವಿ ಪ್ರದರ್ಶನದ ನಂತರ ಒಟಿಟಿಗೆ ಬಿಡುಗಡೆಯಾದರೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಲೇ ಇದೆ. ಇದು ಸಿನಿಮಾದ ಜನಪ್ರಿಯತೆ ಮತ್ತು ಪ್ರೇಕ್ಷಕರ ಆಸಕ್ತಿಯನ್ನು ತೋರಿಸುತ್ತದೆ.

‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?  
ಸು ಫ್ರಮ್ ಸೋ

Updated on: Sep 10, 2025 | 7:32 AM

ಕೆಲವು ಸಿನಿಮಾಗಳು ಒಟಿಟಿಗೆ ಬರೋ ಮೊದಲೇ ಥಿಯೇಟರ್​ನಿಂದ ಕಾಲ್ಕಿತ್ತಿರುತ್ತವೆ. ಕಲೆಕ್ಷನ್ ಕೂಡ ಸಂಪೂರ್ಣವಾಗಿ ನಿಂತು ಹೋಗಿರುತ್ತದೆ. ಆದರೆ, ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ (Su From So) ಇದಕ್ಕೆ ಭಿನ್ನ. ಈ ಚಿತ್ರ ಸೆಪ್ಟೆಂಬರ್ 9ರಂದು ಒಟಿಟಿಗೆ ಕಾಲಿಟ್ಟಿದೆ. ಆದಾಗ್ಯೂ ಚಿತ್ರ ಥಿಯೇಟರ್​​ನಲ್ಲಿ ಕಲೆಕ್ಷನ್ ಮಾಡೋದನ್ನು ಮುಂದುವರಿಸಿದೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ಇದು ಸಿನಿಮಾದ ಜನಪ್ರಿಯತೆಯನ್ನು ಸೂಚಿಸುತ್ತದೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಸುಮಾರು 46 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರದಲ್ಲಿ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಈ ಸಿನಿಮಾ ಒಂದೇ ದಿನ 6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಈಗ ಚಿತ್ರ ಸೆಪ್ಟೆಂಬರ್ 9ರಂದು ಒಟಿಟಿಗೆ ಕಾಲಿಟ್ಟಿದೆ. ಆದರೆ, ಸಿನಿಮಾದ ಕಲೆಕ್ಷನ್ ಮಾತ್ರ ತಗ್ಗಿಲ್ಲ.

ಇದನ್ನೂ ಓದಿ:  ‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್ ಮಾಡಿದ ಕಲರ್ಸ್; 45ನೇ ದಿನವೂ ಅಬ್ಬರದ ಕಲೆಕ್ಷನ್

ಇದನ್ನೂ ಓದಿ
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ
ಅತ್ತೆಯ ಒತ್ತಾಯಕ್ಕೆ ಲಿವ್-ಇನ್ ರಿಲೇಶನ್​ಶಿಪ್​ನಲ್ಲಿ ಇದ್ದ ಅಕ್ಷಯ್ ಕುಮಾರ್
‘ಅದು ನಾನು ಜೀವನದಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರ’; ಮರುಗಿದ ಚಂದನ್
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್

‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ 9ರಂದು 5 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಒಟಿಟಿಗೆ ಬಂದ ಹೊರತಾಗಿಯೂ ಥಿಯೇಟರ್​ನಲ್ಲಿ ಸಾಕಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಅನೇಕರಿಗೆ ಸಿನಿಮಾ ಒಟಿಟಿಗೆ ಕಾಲಿಟ್ಟ ವಿಚಾರ ತಿಳಿದಿಲ್ಲದೇ ಇರಬಹುದು. ಹೀಗಾಗಿ, ದುಡ್ಡು ಕೊಟ್ಟು ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾಗೆ ರಾಜ್​ ಬಿ ಶೆಟ್ಟಿ ನಿರ್ಮಾಣ ಇದೆ. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದಲ್ಲಿ ಲಾಭ ಕಂಡಿದ್ದಾರೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 122.34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸಿನಿಮಾದ ಅಂತಿಮ ಕಲೆಕ್ಷನ್ ಎಂದೇ ಹೇಳಬಹುದು. ಈ ಚಿತ್ರದ ಭಾರತದಲ್ಲಿ 107.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ವಿದೇಶದಿಂದ 15 ಕೋಟಿ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಒಟಿಟಿ ವರ್ಷನ್​ನಲ್ಲಿ ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ

‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಈ ಸಿನಿಮಾಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಹಲವು ಸ್ಥಳೀಯ ಕಲಾವಿದರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.