AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suhana Khan: ಶಾರುಖ್​ ಖಾನ್​ ಪುತ್ರಿಯ ಮೊದಲ ಸಿನಿಮಾ ಟ್ರೇಲರ್​ ರಿಲೀಸ್​; ಇದು ಅಪ್ಪ-ಮಗಳು ಮತ್ತು ಸ್ನೇಹಿತರ ಕಥೆ

The Archies Trailer: ಶಾರುಖ್​ ಖಾನ್ ಅವರ ಪುತ್ರಿ ಸುಹಾನಾ ಖಾನ್​ ಅವರು ಈಗಾಗಲೇ ಅನೇಕ ಫೋಟೋಶೂಟ್​ಗಳ ಮೂಲಕ ಮಿಂಚಿದ್ದಾರೆ. ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆ ಆದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ. ಈ ಸಿನಿಮಾದಲ್ಲಿ ಖುಷಿ ಕಪೂರ್​ ಕೂಡ ನಟಿಸಿದ್ದಾರೆ.

Suhana Khan: ಶಾರುಖ್​ ಖಾನ್​ ಪುತ್ರಿಯ ಮೊದಲ ಸಿನಿಮಾ ಟ್ರೇಲರ್​ ರಿಲೀಸ್​; ಇದು ಅಪ್ಪ-ಮಗಳು ಮತ್ತು ಸ್ನೇಹಿತರ ಕಥೆ
ಸುಹಾನಾ ಖಾನ್​
ಮದನ್​ ಕುಮಾರ್​
|

Updated on: Nov 09, 2023 | 12:45 PM

Share

ನಟ ಶಾರುಖ್​ ಖಾನ್​ (Shah Rukh Khan) ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಅವರು ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿ ನೀಡುವ ಸಮಯ. ಈ ಮೊದಲೇ ಸುದ್ದಿ ಆದಂತೆ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಕೂಡ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ‘ದಿ ಆರ್ಚೀಸ್​’ (The Archies) ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ. ಜೋಯಾ ಅಖ್ತರ್​ ನಿರ್ದೇಶನ ಮಾಡಿರುವ ಈ ಸಿನಿಮಾದ ಟ್ರೇಲರ್ ಈಗ ಬಿಡುಗಡೆ ಆಗಿದೆ. ಸಿನಿಮಾ ಕಥೆ ಏನು ಎಂಬುದರ ಬಗ್ಗೆ ಇದರಲ್ಲಿ ಸುಳಿವು ಸಿಕ್ಕಿದೆ. ಸುಹಾನಾ ಖಾನ್ (Suhana khan)​ ಅವರ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಡಿಸೆಂಬರ್​ 7ರಂದು ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ‘ದಿ ಆರ್ಚೀಸ್​’ ಸಿನಿಮಾ ರಿಲೀಸ್​ ಆಗಲಿದೆ.

ಬಾಲಿವುಡ್​ನಲ್ಲಿ ನೆಪೋಟಿಸಂ ಹಾವಳಿ ಜಾಸ್ತಿ ಆಗಿದೆ ಎಂಬುದು ಅನೇಕರ ಆರೋಪ. ಹಾಗಿದ್ದರೂ ಕೂಡ ಸ್ಟಾರ್​ ಕಿಡ್​ಗಳು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದು ಕಡಿಮೆ ಆಗಿಲ್ಲ. ‘ದಿ ಆರ್ಚೀಸ್​’ ಸಿನಿಮಾದದಲ್ಲಿ ಶಾರುಖ್​ ಖಾನ್​ ಪುತ್ರಿ ಸುನಾನಾ ಖಾನ್​ ಮಾತ್ರವಲ್ಲದೇ, ಅಮಿತಾಭ್ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ, ಶ್ರೀದೇವಿಯ ಎರಡನೇ ಮಗಳು ಖುಷಿ ಕಪೂರ್​ ಸೇರಿದಂತೆ ಹಲವರು ನಟಿಸಿದ್ದಾರೆ. ನೆಪೋಟಿಸಂ ಕಾರಣಕ್ಕಾಗಿ ಈ ಸಿನಿಮಾ ಟೀಕೆಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Suhana Khan: ಜೊತೆಯಾಗಿ ಸಿನಿಮಾ ಮಾಡ್ತಾರೆ ಶಾರುಖ್​ ಖಾನ್​-ಸುಹಾನಾ ಖಾನ್​? ತಂದೆ-ಮಗಳ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಒಂದೇ ಶಾಲೆಯಲ್ಲಿ ಓದುತ್ತಿರುವ ಹದಿಹರೆಯದ ಸ್ನೇಹಿತರ ಗುಂಪಿನ ಕಥೆ ಇದು. ಅವರೆಲ್ಲರಿಗೂ ಪಾರ್ಕ್​ ಎಂದರೆ ಇಷ್ಟ. ಆದರೆ ಅವರ ಪೈಕಿ ಓರ್ವ ಹುಡುಗಿಯ ತಂದೆ ಅದೇ ಪಾರ್ಕ್​ನ ಜಾಗದಲ್ಲಿ ಬೇರೆ ಕಟ್ಟಡಗಳನ್ನು ಕಟ್ಟಲು ಮುಂದಾಗುತ್ತಾರೆ. ಆಗ ಸ್ನೇಹಿತರ ಗುಂಪಿನಲ್ಲಿ ಬಿರುಕು ಮೂಡುತ್ತದೆ. ಪಾರ್ಕ್​ ಉಳಿಸಿಕೊಳ್ಳಲು ಆ ಹುಡುಗಿಯ ತಂದೆಯ ವಿರುದ್ಧ ಎಲ್ಲರೂ ಹೋರಾಟ ಮಾಡುತ್ತಾರೆ. ಕುಟುಂಬ, ಸ್ನೇಹ, ಪರಿಸರ ಪ್ರೇಮ ಮುಂತಾದ ಅಂಶಗಳು ಈ ಟ್ರೇಲರ್​ನಲ್ಲಿ ಬೆರೆತಿದೆ. ಈ ಸಿನಿಮಾದಿಂದ ಸ್ಟಾರ್​ ಕಿಡ್​ಗಳಿಗೆ ಸಖತ್​ ಸ್ಕೋಪ್​ ಸಿಗಲಿದೆ.

‘ದಿ ಆರ್ಚೀಸ್​’ ಸಿನಿಮಾದ ಟ್ರೇಲರ್:

ಸುಹಾನಾ ಖಾನ್​ ಅವರು ಈಗಾಗಲೇ ಅನೇಕ ಫೋಟೋಶೂಟ್​ಗಳ ಮೂಲಕ ಮಿಂಚಿದ್ದಾರೆ. ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆ ಆದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ. ಅದೇ ರೀತಿ, ಶ್ರೀದೇವಿ-ಬೋನಿ ಕಪೂರ್​ ಅವರ ಪುತ್ರಿ ಖುಷಿ ಕಪೂರ್​ ಕೂಡ ಈ ಸಿನಿಮಾದಿಂದ ಜನಪ್ರಿಯತೆ ಪಡೆಯಲಿದ್ದಾರೆ. 150 ದೇಶಗಳಲ್ಲಿ ನೆಟ್​ಫ್ಲಿಕ್ಸ್​ ಮೂಲಕ ಈ ಸಿನಿಮಾ ಸ್ಟ್ರೀಮ್​ ಆಗಲಿದೆ. ಆದ್ದರಿಂದ ಈ ಸ್ಟಾರ್​ ಕಿಡ್​​ಗಳು ಸಖತ್​ ಎಗ್ಸೈಟ್​ ಆಗಿದ್ದಾರೆ. ಚಿತ್ರಮಂದಿರಗಳಲ್ಲೂ ಈ ಸಿನಿಮಾ ಬಿಡುಗಡೆ ಆದರೆ ಚೆನ್ನಾಗಿರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ