ಟಿವಿಯಲ್ಲಿ ‘ಬಿಗ್ ಬಾಸ್ ಓಟಿಟಿ’ (Bigg Boss OTT) ಪ್ರಸಾರ ಆಗುತ್ತಿಲ್ಲ. ವಯಸ್ಕರನ್ನೇ ಟಾರ್ಗೆಟ್ ಆಗಿಟ್ಟುಕೊಂಡಿರುವ ಈ ಕಾರ್ಯಕ್ರಮ ಕೇವಲ ಓಟಿಟಿ (ವೂಟ್) ಮೂಲಕ ಪ್ರಸಾರ ಆಗುತ್ತಿದೆ. ಇದಕ್ಕೀಗ ಸನ್ನಿ ಲಿಯೋನ್ (Sunny Leone) ಎಂಟ್ರಿ ಆಗಿದೆ. ಸ್ಪರ್ಧಿಗಳಿಗೆ ಚಿತ್ರ ವಿಚಿತ್ರವಾದ ಟಾಸ್ಕ್ಗಳನ್ನು ಅವರು ನೀಡಲು ಆರಂಭಿಸಿದ್ದಾರೆ. ಅವರು ಅಖಾಡಕ್ಕೆ ಕಾಲಿಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ. ಈಗ ಅವರು ನೀಡಿದ ಟಾಸ್ಕ್ ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳೇ ಶಾಕ್ ಆಗಿದ್ದಾರೆ. ಕೆಲವರಂತೂ ನಾಚಿಕೊಂಡು ಹಿಂದೆ ಸರಿದಿದ್ದಾರೆ!
ಬಿಗ್ ಬಾಸ್ ಓಟಿಟಿಗೆ ಸದ್ಯಕ್ಕೆ ಸೆನ್ಸಾರ್ನ ಹಂಗಿಲ್ಲ. ಅದರ ಸಂಪೂರ್ಣ ಲಾಭವನ್ನು ಪಡೆಯಲು ಈ ಶೋನ ಆಯೋಜಕರು ತೀರ್ಮಾನಿಸಿದಂತಿದೆ. ಅಷ್ಟಕ್ಕೂ ಸನ್ನಿ ಲಿಯೋನ್ ನೀಡಿದ ಟಾಸ್ಕ್ ಏನು? ಬಿಗ್ ಬಾಸ್ ಮನೆಯಲ್ಲಿ ಕೆಲವು ಜೋಡಿಗಳ ನಡುವೆ ಆಪ್ತತೆ ಬೆಳೆದಿದೆ. ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪರೀಕ್ಷಿಸಲು ಅವರೊಂದು ಟಾಸ್ಕ್ ನೀಡಿದರು. ಅದರ ನಿಯಮ ಹೀಗಿದೆ; ಇಬ್ಬರ ಸ್ಪರ್ಧಿಗಳು ತಬ್ಬಿಕೊಳ್ಳುವಂತೆ ನಿಂತು, ತಮ್ಮಿಬ್ಬರ ದೇಹದ ಮಧ್ಯೆ ತೆಂಗಿನ ಕಾಯಿ ಇಟ್ಟುಕೊಳ್ಳಬೇಕು. ಕೈಗಳನ್ನು ಬಳಸದೇ ಅದನ್ನು ತಮ್ಮ ಮುಖದವರೆಗೆ ತರಬೇಕು. ಈ ಟಾಸ್ಕ್ ತುಂಬ ಬೋಲ್ಡ್ ಆಗಿತ್ತು.
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಬೇಹಾ ಭಾಸಿನ್ ಮುಂತಾದವರು ಈ ಟಾಸ್ಕ್ನಲ್ಲಿ ಭಾಗವಹಿಸಿದರು. ದಿವ್ಯಾ ಅಗರ್ವಾಲ್ ನಾಚಿ ನೀರಾದರು. ದೂರದಿಂದಲೇ ಎಲ್ಲವನ್ನೂ ನೋಡಿ ಅವರು ಕಣ್ಣರಳಿಸಿದರು. ಇನ್ನೂ ಎಷ್ಟು ದಿನಗಳ ಕಾಲ ಸನ್ನಿ ಲಿಯೋನ್ ಇರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ಕಾಲಿಟ್ಟ ಮೇಲಂತೂ ಈ ಶೋನ ಸ್ವರೂಪವೇ ಬದಲಾಗಿರುವುದು ನಿಜ.
ಬಿಗ್ ಬಾಸ್ ಜೊತೆ ಸನ್ನಿಗೆ ಹಳೇ ನಂಟು:
ಸನ್ನಿ ಲಿಯೋನ್ ಅವರಿಗೂ ಬಿಗ್ ಬಾಸ್ ಮನೆಗೂ ತುಂಬ ಹಳೆಯ ಸಂಬಂಧ. ನೀಲಿ ಸಿನಿಮಾ ಲೋಕಕ್ಕೆ ಗುಡ್ಬೈ ಹೇಳಿದ ಬಳಿಕ ಅವರು ಮೊದಲು ಕಾಲಿಟ್ಟಿದ್ದೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ. 2011-12ರಲ್ಲಿ ಪ್ರಸಾರವಾದ ‘ಹಿಂದಿ ಬಿಗ್ ಬಾಸ್ ಸೀಸನ್ 5’ರಲ್ಲಿ ಅವರು ಸ್ಪರ್ಧಿಸಿದ್ದರು. ಆ ಬಳಿಕವೇ ಅವರಿಗೆ ಬಾಲಿವುಡ್ನಲ್ಲಿ ಅವಕಾಶ ಬರಲು ಆರಂಭ ಆದವು. ನಂತರ ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಇನ್ನಷ್ಟು ಫೇಮಸ್ ಆದರು. ಈಗ ಬರೋಬ್ಬರಿ 10 ವರ್ಷಗಳ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವುದು ವಿಶೇಷ.
ಇದನ್ನೂ ಓದಿ:
ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್ ಮಾಡು’ ಎಂದ ಶಮಿತಾ ವಿಡಿಯೋ ವೈರಲ್