The Romantics: ಶಾರುಖ್​ ಖಾನ್​ ಮನೆಗೆ ಶೂಟಿಂಗ್​ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ

Smriti Mundhra | Shah Rukh Khan: ‘ಶಾರುಖ್​ ಖಾನ್​ ಅವರು ಎಂತಹ ವ್ಯಕ್ತಿ ಎಂಬುದನ್ನು ಈ ಘಟನೆ ವಿವರಿಸುತ್ತದೆ. ನಾವು ಇರುವ ರೂಮಿನ ಒಳಗೆ ಅವರು ಬಂದಾಗ ನನಗೆ ಅಚ್ಚರಿ ಕಾದಿತ್ತು’ ಎಂದು ನಿರ್ದೇಶಕಿ ಸ್ಮೃತಿ ಮುಂದ್ರಾ ಹೇಳಿದ್ದಾರೆ.

The Romantics: ಶಾರುಖ್​ ಖಾನ್​ ಮನೆಗೆ ಶೂಟಿಂಗ್​ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ
ಸ್ಮೃತಿ ಮುಂದ್ರಾ, ಶಾರುಖ್ ಖಾನ್

Updated on: Feb 27, 2023 | 3:50 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ಕಮ್​ ಬ್ಯಾಕ್​ ಸಿನಿಮಾ ‘ಪಠಾಣ್​’ ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಬೀಗುತ್ತಿದೆ. ಈ ನಡುವೆ ಶಾರುಖ್​ ಖಾನ್​ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಲಾಗುತ್ತಿದೆ. ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ‘ದಿ ರೊಮ್ಯಾಂಟಿಕ್ಸ್​’ (The Romantics) ಸೀರಿಸ್​ ಬಿಡುಗಡೆ ಆಗಿದೆ. ಇದರಲ್ಲಿ ಬಾಲಿವುಡ್​ನ ಅನೇಕರ ಸಂದರ್ಶನ ಇದೆ. ಸ್ಮೃತಿ ಮುಂದ್ರಾ (Smriti Mundhra) ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​, ಅಮಿತಾಭ್​ ಬಚ್ಚನ್​, ಮಾಧುರಿ ದೀಕ್ಷಿತ್​, ಆಮಿರ್​ ಖಾನ್​ ಮುಂತಾದವರನ್ನು ಸಂದರ್ಶಿಸುವ ಅವಕಾಶ ಅವರಿಗೆ ಸಿಕ್ಕಿದೆ. ಈ ಅನುಭವದ ಕುರಿತು ಅವರು ಅನೇಕ ಕಡೆಗಳಲ್ಲಿ ಮಾತನಾಡುತ್ತಿದ್ದಾರೆ. ವಿಶೇಷವಾಗಿ, ಶಾರುಖ್​ ಖಾನ್​ ಮನೆಗೆ ಹೋದಾಗ ಏನಾಯಿತು ಎಂಬುದನ್ನು ಸ್ಮೃತಿ ಮುಂದ್ರಾ ವಿವರಿಸಿದ್ದಾರೆ.

ಮುಂಬೈನಲ್ಲಿ ಶಾರುಖ್​ ಖಾನ್ ಅವರ ಐಷಾರಾಮಿ ಬಂಗಲೆ ಇದೆ. ಇದಕ್ಕೆ ‘ಮನ್ನತ್​’ ಎಂದು ಹೆಸರು. ‘ಮನ್ನತ್​’ಗೆ ಬರುವ ಎಲ್ಲ ಅತಿಥಿಗಳನ್ನು ಶಾರುಖ್ ಖಾನ್​ ಅವರು ತುಂಬ ಆತ್ಮೀಯವಾಗಿ ಉಪಚರಿಸುತ್ತಾರೆ. ಅದರ ಅನುಭವ ಹಲವರಿಗೆ ಆಗಿದೆ. ಈಗ ‘ದಿ ರೊಮ್ಯಾಂಟಿಕ್ಸ್​’ ನಿರ್ದೇಶಕಿ ಸ್ಮೃತಿ ಮುಂದ್ರಾ ಕೂಡ ಆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Pathaan: ‘ಪಠಾಣ್​ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್​ ಖಾನ್​

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

‘ಶಾರುಖ್​ ಖಾನ್​ ಅವರು ಎಂತಹ ವ್ಯಕ್ತಿ ಎಂಬುದನ್ನು ಈ ಘಟನೆ ವಿವರಿಸುತ್ತದೆ. ಅವರು ನೀಡಿದ ಆತಿಥ್ಯ ಅತ್ಯುನ್ನತವಾಗಿತ್ತು. ತಮ್ಮ ತಂಡದಲ್ಲಿ ತುಂಬ ಜನರು ಇದ್ದೆವು. ಎಲ್ಲರಿಗೂ ಶಾರುಖ್​ ಖಾನ್​ ಮನೆಯಲ್ಲಿ ಚಹ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ನಾವು ಇರುವ ರೂಮಿನ ಒಳಗೆ ಅವರು ಬಂದರು. ಆಗ ನನಗೆ ಅಚ್ಚರಿ ಕಾದಿತ್ತು. ನಮ್ಮ ತಂಡದ ಪ್ರತಿಯೊಬ್ಬರ ಹೆಸರನ್ನೂ ಶಾರುಖ್​ ಖಾನ್​ ತಿಳಿದುಕೊಂಡಿದ್ದರು. ಎಲ್ಲರ ಹೆಸರು ಕರೆದು ಮಾತನಾಡಿಸಿದರು. ಪ್ರತಿಯೊಬ್ಬರ ಕೆಲಸ ಮತ್ತು ಸಮಯಕ್ಕೆ ಗೌರವ ನೀಡಿದರು’ ಎಂದು ಸ್ಮೃತಿ ಮುಂದ್ರಾ ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್​ ಖಾನ್​ ಅಭಿಮಾನಿಗಳು

ಹಿಂದಿ ಚಿತ್ರರಂಗದ ಪ್ರತಿಷ್ಠಿಯ ನಿರ್ಮಾಣ ಸಂಸ್ಥೆಯಾದ ‘ಯಶ್​ ರಾಜ್​ ಫಿಲ್ಮ್ಸ್​’ ಸಲುವಾಗಿ ‘ದಿ ರೊಮ್ಯಾಂಟಿಕ್ಸ್​’ ಸೀರಿಸ್​ ಸಿದ್ಧಪಡಿಸಲಾಗಿದೆ. ಈ ಬ್ಯಾನರ್​ನಲ್ಲಿ ನಟಿಸಿದ ಹಲವು ನಟ-ನಟಿಯರ ಸಂದರ್ಶನ ಇದರಲ್ಲಿ ಇದೆ. ಹಿಂದಿ ಚಿತ್ರರಂಗದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ.

ಹಲವು ಡ್ಯಾಕ್ಯುಮೆಂಟರಿಗಳನ್ನು ಮಾಡಿದ ಅನುಭವ ಸ್ಮೃತಿ ಮುಂದ್ರಾ ಅವರಿಗೆ ಇದೆ. ಈಗ ಅವರು ಮಾಡಿರುವ ‘ದಿ ರೊಮ್ಯಾಂಟಿಕ್ಸ್​’ ಸೀರಿಸ್​ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್​ನ ಅನೇಕ ಸೂಪರ್​ ಸ್ಟಾರ್​ಗಳನ್ನು ಸಂದರ್ಶಿಸುವ ಅವಕಾಶ ಅವರಿಗೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us