
ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡ ‘ಡಿಸಿ’ ಸಿನಿಮಾ ಒಟಿಟಿಗೆ ಬಂದಿದೆ. ಈ ಸಿನಿಮಾದ ಹಿನ್ನೆಲೆ ಸಂಗೀತವನ್ನು ಭಾರಿ ವೈರಲ್ ಆಗಿದೆ. ಲೋಕೇಶ್ ಕನಗರಾಜ್ ಮತ್ತು ವಮಿಕಾ ಗಬ್ಬಿ ನಟನೆಯ ಈ ಸಿನಿಮಾವನ್ನು ಸೋನಿ ಲಿವ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಊರ್ವಶಿ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಆಶಾ’ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾನಲ್ಲಿ ಜೋಜು ಜಾರ್ಜ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಇದಾಗಿದೆ.
ಕರಣ್ ಜೋಹರ್ ನಡೆಸಿಕೊಡುವ ಬಲು ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್’ನ ಒಂಬತ್ತನೇ ಸೀಸನ್ ಈ ವಾರ ಪ್ರಾರಂಭ ಆಗಿದೆ. ಮೊದಲ ಎಪಿಸೋಡಿನ ಅತಿಥಿಯಾಗಿ ಸಲ್ಮಾನ್ ಖಾನ್ ಮತ್ತು ಕರಿಶ್ಮಾ ಕಪೂರ್ ಬಂದಿದ್ದು, ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಆಗುತ್ತಿದೆ.
ದಶಕಗಳಿಂದಲೂ ಹಾರರ್ ಸಿನಿಮಾ ಜಾನರ್ನಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ‘ಈವಿಲ್ ಡೆಡ್’ ಸಿನಿಮಾ ಸರಣಿಯ ಹೊಸ ಸಿನಿಮಾ ‘ಈವಿಲ್ ಡೆಡ್ ಬರ್ನ್’ ಈ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಮೌಂಟ್ ಎವೆರೆಸ್ಟ್ ಮೊದಲ ಬಾರಿ ಹತ್ತಿದ ಎಡ್ಮಂಡ್ ಹಿಲರಿ ಮತ್ತು ಟೆನ್ಜಿಂಗ್ ಅವರ ಕತೆಯನ್ನು ಸಿನಿಮಾ ಆಗಿ ನಿರ್ಮಾಣ ಮಾಡಿದ್ದು, ‘ಟೆನ್ಜಿಂಗ್’ ಹೆಸರಿನ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದ್ದು, ಸಿನಿಮಾ ಅನ್ನು ಆಪಲ್ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.
ಬಾಕ್ಸಿಂಗ್ ಲೋಕದ ಲಿಜೆಂಡ್ ಮೈಕ್ ಟೈಸನ್ ಜೀವನ ಆಧರಿಸಿದ ಡಾಕ್ಯುಮೆಂಟರಿ ‘ಟೈಸನ್’ ಈ ವಾರ ಒಟಿಟಿಗೆ ಬಂದಿದೆ. ಟೈಸನ್ ಜೀವನದ ಹಲವು ಮುಖ್ಯ ವಿಷಯಗಳನ್ನು ಒಳಗೊಂಡಿರುವ ಈ ವೆಬ್ ಸರಣಿ ನೆಟ್ಫ್ಲಿಕ್ಸ್ನಲ್ಲಿ ಈ ವಾರ ಬಿಡುಗಡೆ ಆಗಿದೆ.
‘ಅವೇಂಜರ್ಸ್’ ಹೀರೋಗಳಲ್ಲಿ ಒಂದಾಗಿರುವ ವಿಶನ್ ಕುರಿತಾಗಿ ಪ್ರತ್ಯೇಕ ವೆಬ್ ಸರಣಿಯನ್ನು ಮಾರ್ವೆಲ್ ನಿರ್ಮಾಣ ಮಾಡಿದ್ದು, ‘ವಿಶನ್ ಕ್ವೆಸ್ಟ್’ ಹೆಸರಿನ ವೆಬ್ ಸರಣಿ ಈ ವಾರ ಜಿಯೋ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ.