ದೀಪಾವಳಿಗೆ ಒಟಿಟಿಗೆ ಬಂದಿವೆ ಹಲವು ಹೊಸ ಸಿನಿಮಾಗಳು

OTT Release This Week: ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಲಿವೆ. ಕನ್ನಡದಲ್ಲಿ ‘ಬಘೀರ’ ಸಿನಿಮಾ ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಮಾತ್ರವೇ ಅಲ್ಲದೆ ಒಟಿಟಿಯಲ್ಲಿಯೂ ಸಹ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ.

ದೀಪಾವಳಿಗೆ ಒಟಿಟಿಗೆ ಬಂದಿವೆ ಹಲವು ಹೊಸ ಸಿನಿಮಾಗಳು
Follow us
ಮಂಜುನಾಥ ಸಿ.
|

Updated on: Oct 31, 2024 | 6:32 PM

ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಕನ್ನಡದಲ್ಲಿ ಶ್ರೀಮುರಳಿ ನಟನೆಯ ‘ಬಘೀರ’ ಬಿಡುಗಡೆ ಆಗಿದೆ. ತೆಲುಗಿನಲ್ಲಿ ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಮತ್ತು ‘ಕ’, ತಮಿಳಿನಲ್ಲಿ ‘ಅಮರನ್’, ಹಿಂದಿಯ ‘ಸಿಂಘಂ ಅಗೇನ್’ ಮತ್ತು ‘ಭೂಲ್ ಭುಲಯ್ಯ 3’ ಸಿನಿಮಾಗಳು ಬಿಡುಗಡೆ ಆಗಲಿದೆ. ಚಿತ್ರಮಂದಿರದಲ್ಲಿ ಮಾತ್ರವಲ್ಲ ಒಟಿಟಿಯಲ್ಲಿಯೂ ಸಹ ದೀಪಾವಳಿಗೆ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ.

‘ಮೂರು ಕಾಸಿನ ಕುದುರೆ’

ಕನ್ನಡದ ‘ಮೂರು ಕಾಸಿನ ಕುದುರೆ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸೋಷಿಯಲ್ ಡ್ರಾಮಾ ಶೈಲಿಯ ಕತೆ ಇದೆ. ವಿಶೇಷವೆಂದರೆ ಈ ಸಿನಿಮಾ ಚಿತ್ರಮಂದಿರದಲ್ಲಿ ಇನ್ನೂ ಬಿಡುಗಡೆ ಆಗಿಲ್ಲ. ಅಷ್ಟರಲ್ಲೇ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ರೆಂಟಲ್​ಗೆ ಲಭ್ಯವಿದೆ. ಗಿರೀಶ್ ಅವರು ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ.

‘ತಂಗಲಾನ್’

ಚಿಯಾನ್ ವಿಕ್ರಂ ನಟಿಸಿ ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಲಾನ್’ ಸಿನಿಮಾ ಕೊನೆಗೂ ಈ ದೀಪಾವಳಿಗೆ ಒಟಿಟಿಗೆ ಬಂದಿದೆ. ‘ತಂಗಲಾನ್’ ಈ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಇನ್ನೂ ಬೇಗನೆ ಒಟಿಟಿಗೆ ಬರಬೇಕಿತ್ತು, ಆದರೆ ಸಿನಿಮಾ ಮೇಲೆ ಪ್ರಕರಣ ದಾಖಲಾದ ಕಾರಣ ಬಿಡುಗಡೆ ತಡವಾಗಿದೆ. ಈ ಸಿನಿಮಾ ಅಕ್ಟೋಬರ್ 28ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿದ್ದವು, ಸಿನಿಮಾ ಹಿಟ್ ಆಗಿತ್ತು.

‘ಮಿಥ್ಯ’

ಹುಮಾ ಖುರೇಶಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಮಿಥ್ಯ’ ನವೆಂಬರ್ 1 ಕ್ಕೆ ಜೀ5 ನಲ್ಲಿ ಬಿಡುಗಡೆ ಆಗುತ್ತಿದೆ. ‘ಮಿಥ್ಯ’ ಸಿನಿಮಾ ಅಲ್ಲ ಬದಲಿಗೆ ವೆಬ್ ಸರಣಿ ಆಗಿದ್ದು, ಬಿಡುಗಡೆಗೆ ಮುಂಚೆಯೇ ವೆಬ್ ಸರಣಿ ಸಾಕಷ್ಟು ಕುತೂಹಲ ಕೆರಳಿಸಿದೆ. ‘ಬ್ಲಫ್​ಮಾಸ್ಟರ್’, ‘ಧಂ ಮಾರೋ ಧಂ’, ‘ನೌಟಂಕಿ ಸಾಲ’ ಸಿನಿಮಾಗಳನ್ನು ನಿರ್ದೇಶಿಸಿರುವ ರೋಹನ್ ಸಿಪ್ಪಿ ಇದನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಕನ್ನಡದ ‘ಮೂರು ಕಾಸಿನ ಕುದುರೆ’ ಸಿನಿಮಾ

‘ಮೀಯಳಗನ್’

ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿರುವ, ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿರುವ ‘ಮೀಯಳಗನ್’ ತಮಿಳು ಸಿನಿಮಾ ಸಹ ದೀಪಾವಳಿ ವಿಶೇಷವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಫೈಟ್, ಐಟಂ ಹಾಡುಗಳು ಇಲ್ಲದ ಫೀಲ್ ಗುಡ್ ಸಿನಿಮಾ ಆಗಿರುವ ಮೀಯಳಗನ್ ಸಿನಿಮಾ ಅಕ್ಟೋಬರ್ 27ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬಂದಿದೆ. ಸಿನಿಮಾದಲ್ಲಿ ಕಾರ್ತಿ ಮತ್ತು ಅರವಿಂದ ಸ್ವಾಮಿ ಒಟ್ಟಿಗೆ ನಟಿಸಿದ್ದಾರೆ.

‘ಜೋಕರ್’

2019 ರಲ್ಲಿ ಬಿಡುಗಡೆ ಆಗಿದ್ದ ಆಸ್ಕರ್ ವಿಜೇತ ‘ಜೋಕರ್’ ಸಿನಿಮಾ ಸೀಕ್ವೆಲ್ ‘ಜೋಕರ್:ಫಾಲಿ ಡೆಲ್ಯುಕ್ಸ್’ ಸಿನಿಮಾ ಅಕ್ಟೋಬರ್ 31 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಈಗ ಒಟಿಟಿಗೆ ಬಂದಿದೆ.

ಡೆಸ್ಪಿಸಿಬಲ್ 4

ಹಾಲಿವುಡ್​ನ ಜನಪ್ರಿಯ ಕಾರ್ಟೂನ್ ಸಿನಿಮಾಗಳಲ್ಲಿ ‘ಡೆಸ್ಪಿಸಿಬಲ್’ ಸಹ ಒಂದು. ಈ ಸಿನಿಮಾದ ನಾಲ್ಕನೇ ಭಾಗ ನವೆಂಬರ್ 5 ರಂದು ಜಿಯೋ ಪ್ರೀಮಿಯಂನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಜುಲೈ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ಒಟಿಟಿಗೆ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ