ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ ಬಂತು ಈ ಥ್ರಿಲ್ಲರ್ ಚಿತ್ರ

ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆದರೂ ಒಟಿಟಿಯಲ್ಲಿ ಬಂದಾಗ ನೋಡಿಕೊಳ್ಳೋಣ ಎಂಬ ಮನಸ್ಥಿತಿಯವರೇ ಈಗ ಹೆಚ್ಚಿದ್ದಾರೆ. ಹೀಗಿರುವಾಗ ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ ಬರುತ್ತದೆ ಎಂದರೆ ಯಾರು ತಾನೇ ಸಿನಿಮಾ ನೋಡಲು ಥಿಯೇಟರ್ಗೆ ಹೋಗುತ್ತಾರೆ ಹೇಳಿ. ಈಗ ಅಂಥದ್ದೇ ಒಂದು ಘಟನೆ ನಡೆಯುತ್ತಿದೆ.

ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ ಬಂತು ಈ ಥ್ರಿಲ್ಲರ್ ಚಿತ್ರ
ಡಿಎನ್​ಎ

Updated on: Jul 18, 2025 | 7:03 AM

ಥ್ರಿಲ್ಲರ್ ಸಿನಿಮಾಗಳನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ? ಅನೇಕ ಥ್ರಿಲ್ಲರ್ ಸಿನಿಮಾಗಳು ಅಭಿಮಾನಿಗಳ ಮೆಚ್ಚುಗೆ ಪಡೆದ ಉದಾಹರಣೆ ಇದೆ. ಈಗ ಈ ಸಾಲಿಗೆ ‘ಡಿಎನ್​ಎ’ ಸಿನಿಮಾ ಕೂಡ ಸೇರಿದೆ. ವಿಶೇಷ ಎಂದರೆ ಈ ಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ (OTT) ಬರುತ್ತಿದೆ. ನೆಲ್ಸನ್ ವೆಂಕಟೇಶನ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಥರ್ವ ಮುರುಳಿ ಹಾಗೂ ನಿಮಿಷಾ ಸಜಯನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಒಂದೇ ದಿನಕ್ಕೆ ಈ ಚಿತ್ರ ಒಟಿಟಿಗೆ ಬರೋಕೆ ಕಾರಣವೇನು? ಆ ಪ್ರಶ್ನೆಗೂ ಉತ್ತರವಿದೆ. ಅಸಲಿಗೆ ಈ ಸಿನಿಮಾದ ಮೂಲ ಭಾಷೆ ತಮಿಳು. ಈ ಚಿತ್ರ ಕಳೆದ ತಿಂಗಳು ತಮಿಳಿನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾ ತೆಲುಗಿನಲ್ಲಿ ಇಂದು (ಜುಲೈ 18) ತೆರೆ ಕಾಣುತ್ತಿದೆ. ಶನಿವಾರ (ಜುಲೈ 19)  ಸಿನಿಮಾ ಒಟಿಟಿಗೆ ಬರಲಿದೆ.

‘ಡಿಎನ್​ಎ’ ಚಿತ್ರವನ್ನು ಎಲ್ಲಾ ಭಾಷೆಗಳಲ್ಲಿ ಒಟ್ಟಿಗೆ ರಿಲೀಸ್ ಮಾಡುವ ಆಲೋಚನೆ ಇತ್ತು. ಆದರೆ, ತೆಲುಗು ಸಿನಿಮಾ ರಿಲೀಸ ಮುಂದಕ್ಕೆ ಹೋಯಿತು. ಈ ಚಿತ್ರದ ಒಟಿಟಿ ಬಿಡುಗಡೆ ಜುಲೈ 25ಕ್ಕೆ ಆಗಬೇಕಿತ್ತು. ಆದರೆ, ನಿರ್ಮಾಪಕರು ಇದನ್ನು ಆರು ದಿನ ಹಿಂದಕ್ಕೆ ತಂದಿದ್ದಾರೆ. ಈ ಚಿತ್ರದ ತೆಲುಗು ವರ್ಷನ್ ಕಳೆದ ವಾರವರೇ ಬಿಡುಗಡೆ ಕಾಣಬೇಕಿತ್ತು. ಆದರೆ, ಅದನ್ನು ಒಂದು ವಾರ ಮುಂದಕ್ಕೆ ಹಾಕಲಾಯಿತು. ಈ ಎಲ್ಲಾ ಕಲಸುಮೇಲೋಗರದಿಂದ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ ಬರುತ್ತಿದೆ.

ಇದನ್ನೂ ಓದಿ
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
ಪವನ್ ಕಲ್ಯಾಣ್ ಚಿತ್ರ ‘ಹರಿ ಹರ ವೀರ ಮಲ್ಲು’ಗೆ ಶುರುವಾಗಿದೆ ಕರ್ನಾಟಕದ ಭಯ
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ಇದನ್ನೂ ಓದಿ:  ಈ ವಾರ ಒಟಿಟಿಗೆ ಬಂದಿವೆ ಬೊಂಬಾಟ್ ಸಿನಿಮಾಗಳು

ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಆದರೂ ಒಟಿಟಿಯಲ್ಲಿ ಬಂದಾಗ ನೋಡಿಕೊಳ್ಳೋಣ ಎಂಬ ಮನಸ್ಥಿತಿಯವರೇ ಈಗ ಹೆಚ್ಚಿದ್ದಾರೆ. ಹೀಗಿರುವಾಗ ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ಒಟಿಟಿಗೆ ಬರುತ್ತದೆ ಎಂದರೆ ಯಾರು ತಾನೇ ಸಿನಿಮಾ ನೋಡಲು ಥಿಯೇಟರ್​ಗೆ ಹೋಗುತ್ತಾರೆ ಹೇಳಿ. ಹೀಗಾಗಿ, ಈ ಚಿತ್ರ ಥಿಯೇಟರ್​ನಲ್ಲಿ ಹೆಚ್ಚು ಕಲೆಕ್ಷನ್ ಮಾಡೋದು ಅನುಮಾನ ಎಂದೇ ಹೇಳಲಾಗುತ್ತಿದೆ. ತೆಲುಗು ಮಂದಿ ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.