Varun Dhawan: ‘ಕೆಟ್ಟ ಸಿನಿಮಾ ಒಟಿಟಿಯಲ್ಲೂ ಉಳಿಯಲ್ಲ’: ನೇರವಾಗಿ ಮಾತನಾಡಿದ ನಟ ವರುಣ್ ಧವನ್
Bawaal Movie: ‘ಬವಾಲ್’ ಸಿನಿಮಾಗೆ ನಿತೀಶ್ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅವರು ಜೋಡಿಯಾಗಿ ನಟಿಸಿದ್ದಾರೆ.
ನಟ ವರುಣ್ ಧವನ್ (Varun Dhawan) ಅವರಿಗೆ ಬಾಲಿವುಡ್ನಲ್ಲಿ ಡಿಮ್ಯಾಂಡ್ ಇದೆ. ಅನೇಕ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರ ಹೊಸ ಸಿನಿಮಾ ‘ಬವಾಲ್’ (Bawaal Movie) ನೇರವಾಗಿ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಿಗೆ, ಒಟಿಟಿ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಜುಲೈ 21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಅಮೇಜಾನ್ ಪ್ರೈಂ ವಿಡಿಯೋ (Amazon Prime Video) ಮೂಲಕ ಬಿಡುಗಡೆ ಆಗುತ್ತಿರುವ ‘ಬವಾಲ್’ ಸಿನಿಮಾದಲ್ಲಿ ವರುಣ್ ಧವನ್ ಜೊತೆ ಜಾನ್ವಿ ಕಪೂರ್ ನಟಿಸಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಗೆ ಬರುತ್ತಿರುವ ಬಗ್ಗೆ ವರುಣ್ ಧವನ್ ಮಾತನಾಡಿದ್ದಾರೆ. ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ.
‘ನಿಮ್ಮ ಸಿನಿಮಾ ತುಂಬ ಚೆನ್ನಾಗಿದೆ ಎಂಬುದನ್ನು ನೀವು ಖಚಿತ ಪಡಿಸಿಕೊಳ್ಳಬೇಕು. ಯಾಕೆಂದೆರೆ ಒಟಿಟಿಯಲ್ಲಿ ಕೆಟ್ಟ ಸಿನಿಮಾಗಳು ಉಳಿಯುವುದಿಲ್ಲ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯ. ಜನರಿಗೆ ಇಲ್ಲಿ ಆಯ್ಕೆ ಇದೆ’ ಎಂದು ವರುಣ್ ಧವನ್ ಹೇಳಿದ್ದಾರೆ. ‘ಬವಾಲ್’ ಸಿನಿಮಾಗೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ.
‘ಬವಾಲ್’ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ‘ದಂಗಲ್’, ‘ಚಿಚೋರೆ’ ಮುಂತಾದ ಸಿನಿಮಾಗಳನ್ನು ಮಾಡಿ ಗಮನ ಸೆಳೆದ ಅವರು ಈಗ ‘ಬವಾಲ್’ ಚಿತ್ರದ ಮೂಲಕ ಒಂದು ಡಿಫರೆಂಟ್ ಆದ ಲವ್ ಸ್ಟೋರಿಯನ್ನು ಜನರ ಎದುರು ತರುತ್ತಿದ್ದಾರೆ. ಸ್ಟಾರ್ ನಿರ್ದೇಶಕನಾದರೂ ಕೂಡ ತಮ್ಮ ಸಿನಿಮಾವನ್ನು ಅವರು ಥಿಯೇಟರ್ ಬದಲಿಗೆ ಒಟಿಟಿಯಲ್ಲಿ ರಿಲೀಸ್ ಮಾಡುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕೆಲವು ಬಾಲಿವುಡ್ ಸಿನಿಮಾಗಳು ಚಿತ್ರಮಂದಿರದಲ್ಲಿ ಸೋಲು ಕಂಡಿವೆ. ಆ ಹಿನ್ನೆಲೆಯಲ್ಲಿ ಅವರು ಒಟಿಟಿ ಮಾರ್ಗ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ವರುಣ್ ಧವನ್ ಅವರ ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅವರು ನಟಿಸಿದ್ದ ‘ಕೂಲಿ ನಂ.1’ ಸಿನಿಮಾ ಕೂಡ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಅದು ಕೂಡ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಪ್ರಸಾರವಾಗಿತ್ತು. ಸದ್ಯ ವರುಣ್ ಧವನ್ ಅವರು ‘ಸಿಟಾಡೆಲ್’ ವೆಬ್ ಸರಣಿಯ ಇಂಡಿಯನ್ ವರ್ಷನ್ನಲ್ಲಿ ಅಭಿನಯಿಸುತ್ತಿದ್ದಾರೆ. ಅದು ಸಹ ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲೇ ಪ್ರಸಾರ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.