
ವೀಕೆಂಡ್ ಬಂತೆಂದರೆ ಯಾವ ಸಿನಿಮಾ ನೋಡಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಕೊರೆಯುತ್ತದೆ. ಒಂದು ವರ್ಗದ ಜನರು ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿದರೆ ಇನ್ನೊಂದು ವರ್ಗದ ಜನರಿಗೆ ಕ್ರೈಮ್ ಥ್ರಿಲ್ಲರ್ ಸಿನಿಮಾ ಇಷ್ಟ ಆಗುತ್ತದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಒಂದೊಳ್ಳೆಯ ಕ್ರೈಮ್ ಥ್ರಿಲ್ಲರ್ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಹೆಸರು ‘ಇಲವೆನ್’ (Eleven Movie). ತೆಲುಗು ಸಿನಿಮಾ ಇದಾಗಿದ್ದು, ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.
ಸಿನಿಮಾ ನೋಡೋದಕ್ಕೂ ಮೊದಲು ಐಎಂಡಿಬಿಯಲ್ಲಿ ಒಮ್ಮೆ ರೇಟಿಂಗ್ ಚೆಕ್ ಮಾಡಿಕೊಳ್ಳೋದನ್ನು ಅನೇಕರು ಮಾಡುತ್ತಾರೆ. 7+ ಇದ್ದರೆ ಸಿನಿಮಾನ ಒಮ್ಮೆ ನೋಡಲು ಯಾವುದೇ ಸಮಸ್ಯೆ ಇಲ್ಲ ಎಂದರ್ಥ. ‘ಇಲವೆನ್’ ಚಿತ್ರಕ್ಕೆ ಐಎಂಡಿಬಿಯಲ್ಲಿ 7.5 ರೇಟಿಂಗ್ ಸಿಕ್ಕಿದೆ. ಇದು ಪಕ್ಕಾ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ನವೀನ್ ಚಂದ್ರ ಅವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅದೊಂದು ನಗರ. ಅಲ್ಲಿ ಸರಣಿ ಕೊಲೆಗಳು ಆಗುತ್ತವೆ. ನಡೆದು ಸಾಗುತ್ತಿರುವ ವ್ಯಕ್ತಿಗಳು ಇದ್ದಕ್ಕಿದ್ದಂತೆ ಕಾಣೆ ಆಗಿ ಬಿಡುತ್ತಾರೆ. ಈ ಕೊಲೆ ಜಾಡು ಹಿಡಿದು ಹೋಗುವ ಪೊಲೀಸ್ ಒಬ್ಬನ ಕೊಲೆಯೂ ಆಗುತ್ತದೆ. ಕೊಲೆ ಮಾಡುವ ವ್ಯಕ್ತಿ ಮುಖಕ್ಕೆ ವಿಚಿತ್ರ ಮುಖವಾಡ ಧರಿಸಿರುತ್ತಾನೆ. ಕೊಲೆ ಮಾಡೋ ವ್ಯಕ್ತಿ ಯಾರು? ಪೊಲೀಸರು ಇದನ್ನು ಹೇಗೆ ಕಂಡು ಹಿಡಿಯುತ್ತಾರೆ ಅನ್ನೋದು ಸಿನಿಮಾದ ಕಥೆ.
ಇದನ್ನೂ ಓದಿ: ಏಕಕಾಲಕ್ಕೆ 70 ಹೊಸ ಪ್ರಾಜೆಕ್ಟ್ ಘೋಷಿಸಿದ ಅಮೇಜಾನ್ ಪ್ರೈಮ್ ವಿಡಿಯೋ; ಒಟಿಟಿ ಪ್ರಿಯರಿಗೆ ಹಬ್ಬ
‘ಇಲವೆನ್’ ಚಿತ್ರವನ್ನು ಲೋಕೇಶ್ ಅಜಿಲ್ಸ್ ನಿರ್ದೇಶನ ಮಾಡಿದ್ದಾರೆ. ಅಜ್ಮಲ್ ಖಾನ್, ರೆಯಾ ಹರಿ, ಮೊದಲಾದವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಜೆಟ್ 4 ಕೋಟಿ ರೂಪಾಯಿ. ಈ ಸಿನಿಮಾದ ಗಳಿಕೆ 6.8 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಸಿನಿಮಾ ತೆಲುಗು ಒಟಿಟಿ ಪ್ಲಾಟ್ಫಾರ್ಮ್ ‘ಆಹ’ ಹಾಗೂ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಅನೇಕರು ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ವೀಕೆಂಡ್ನಲ್ಲಿ ಟೈಮ್ಪಾಸ್ ಮಾಡಲು ನಿಮಗೆ ಒಂದೊಳ್ಳೆಯ ಸಿನಿಮಾ ಇದಾಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.