ಪಾಕಿಸ್ತಾನದಲ್ಲೂ ಅಲ್ಲು ಅರ್ಜುನ್ ಹವಾ; ಪುಷ್ಪರಾಜ್ ಸ್ಟೈಲ್ ಮಾಡಿದ ಕರಾಚಿ ಮಂದಿ

2021ರ ಡಿಸೆಂಬರ್​​ನಲ್ಲಿ ‘ಪುಷ್ಪ: ದಿ ರೈಸ್’ ಬಿಡುಗಡೆಯಾಯಿತು. ಜಾಗತಿಕ ಬಾಕ್ಸ್ ಆಫೀಸ್​​ನಲ್ಲಿ ಈ ಚಿತ್ರ 360 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರದ ನಟನೆಗೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಆಗಿರುವುದರಿಂದ ಎರಡನೇ ಪಾರ್ಟ್​ ಬಗ್ಗೆ ಭಾರೀ ನಿರೀಕ್ಷೆಗಳು ಇವೆ.

ಪಾಕಿಸ್ತಾನದಲ್ಲೂ ಅಲ್ಲು ಅರ್ಜುನ್ ಹವಾ; ಪುಷ್ಪರಾಜ್ ಸ್ಟೈಲ್ ಮಾಡಿದ ಕರಾಚಿ ಮಂದಿ
ಅಲ್ಲು ಅರ್ಜುನ್

Updated on: Feb 14, 2024 | 2:05 PM

ತೆಲುಗು ನಟ ಅಲ್ಲು ಅರ್ಜುನ್ (Allu Arjun) ಗ್ಲೋಬಲ್ ಹೀರೋ ಆಗಿದ್ದು ‘ಪುಷ್ಪ’ ಚಿತ್ರದ ಮೂಲಕ. ಪುಷ್ಪರಾಜ್ ಪಾತ್ರದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲೂ ಅವರ ಕ್ರೇಜ್ ಹಬ್ಬಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯಕ್ಕೆ ಪಾಕಿಸ್ತಾನದ ಫ್ಯಾನ್ಸ್ ಮನಸೋತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನದಲ್ಲಿ ಶೂಟ್ ಮಾಡಿದ ವಿಡಿಯೋ ಇದು ಎಂದು ಹೇಳಲಾಗಿದೆ.

ಪಾಕಿಸ್ತಾನದ ಕರಾಚಿಯ ಬೀದಿಗಳಲ್ಲಿ ತೆಲುಗು ಯೂಟ್ಯೂಬರ್‌ ವಿಡಿಯೋ ಮಾಡಿದ್ದಾರೆ. ಈ ವೇಳೆ ಅವರು ಪ್ರಭಾಸ್ ಬಗ್ಗೆ ಕೇಳಿದ್ದಾರೆ. ಆಗ ಅಲ್ಲಿದ್ದವರು ‘ಪುಷ್ಪ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಹೇಳುವ ‘ಜುಕೇಗಾ ನಹೀ’ ಡೈಲಾಗ್​ನ ಅಲ್ಲಿಯವರು ಅನುಕರಿಸಿದ್ದಾರೆ. ಇದರ ಜೊತೆಗೆ ‘ಶ್ರೀ ವಲ್ಲಿ’ ಹಾಡಿನ ಸಾಲುಗಳನ್ನು ಹಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಕುಣಿಯಲಿದ್ದಾರೆ ಬಾಲಿವುಡ್ ಬೆಡಗಿ

‘ಪುಷ್ಪ: ದಿ ರೈಸ್’ 2021ರ ಡಿಸೆಂಬರ್​​ನಲ್ಲಿ ಬಿಡುಗಡೆಯಾಯಿತು. ಜಾಗತಿಕ ಬಾಕ್ಸ್ ಆಫೀಸ್​​ನಲ್ಲಿ ಈ ಚಿತ್ರ 360 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರದ ನಟನೆಗೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಆಗಿರುವುದರಿಂದ ಎರಡನೇ ಪಾರ್ಟ್​ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಚಿತ್ರಕ್ಕೆ ಬೇಡಿಕೆ ಸೃಷ್ಟಿ ಆಗಿದೆ.

ಪಾಕಿಸ್ತಾನದಲ್ಲಿ ಪುಷ್ಪ ಕ್ರೇಜ್

ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಪುಷ್ಪ 2’ ಚಿತ್ರೀಕರಣ ನಡೆಯುತ್ತಿದೆ. 2024ರ ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್​ಗಳು ಪ್ರೇಕ್ಷಕರಲ್ಲಿ ಒಳ್ಳೆಯ ಹೈಪ್ ಕ್ರಿಯೇಟ್ ಮಾಡಿದೆ. ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಟಾಲಿವುಡ್ ಮತ್ತು ಬಾಲಿವುಡ್ ನಿರ್ದೇಶಕರು ಆಸಕ್ತಿ ತೋರಿಸುತ್ತಿದ್ದಾರೆ. ಅವರು ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:04 pm, Wed, 14 February 24