Prabhas: ‘ಆದಿಪುರುಷ್​’ ಬಿಡುಗಡೆ ದಿನ ಪ್ರಭಾಸ್​ ಭಾರತದಲ್ಲಿ ಇರಲ್ಲ? ಅಮೆರಿಕಕ್ಕೆ ತೆರಳಿದ ಪ್ಯಾನ್​ ಇಂಡಿಯಾ ಸ್ಟಾರ್​

|

Updated on: Jun 11, 2023 | 7:41 AM

Adipurush Movie: ಪ್ರಭಾಸ್​ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ. ಅಮೆರಿಕದ ಹಲವು ಸೆಂಟರ್​ಗಳಲ್ಲಿ ‘ಆದಿಪುರುಷ್​’ ಬಿಡುಗಡೆ ಆಗುತ್ತಿದೆ.

Prabhas: ‘ಆದಿಪುರುಷ್​’ ಬಿಡುಗಡೆ ದಿನ ಪ್ರಭಾಸ್​ ಭಾರತದಲ್ಲಿ ಇರಲ್ಲ? ಅಮೆರಿಕಕ್ಕೆ ತೆರಳಿದ ಪ್ಯಾನ್​ ಇಂಡಿಯಾ ಸ್ಟಾರ್​
ಪ್ರಭಾಸ್​
Follow us on

ನಟ ಪ್ರಭಾಸ್​ (Prabhas) ಅವರು ‘ಆದಿಪುರುಷ್​’ ಸಿನಿಮಾದಿಂದ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರ ಅಭಿಮಾನಿಗಳು ಈ ಸಿನಿಮಾಗಾಗಿ ಸಾಕಷ್ಟು ತಿಂಗಳಿಂದ ಕಾದಿದ್ದಾರೆ. ದೊಡ್ಡ ಪರದೆಯಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಜೂನ್​ 16ರಂದು ವಿಶ್ವಾದ್ಯಂತ ‘ಆದಿಪುರುಷ್​’ ಸಿನಿಮಾ (Adipurush Movie) ಬಿಡುಗಡೆ ಆಗಲಿದೆ. ಆದರೆ ಈ ಸಂದರ್ಭದಲ್ಲಿ ಪ್ರಭಾಸ್​ ಅವರು ಭಾರತದಲ್ಲಿ ಇರುವುದಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ಅವರು ಅಮೆರಿಕಕ್ಕೆ (America) ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸ್ಟಾರ್​ ನಟರು ತಮ್ಮ ಸಿನಿಮಾ ಬಿಡುಗಡೆ ಆದಾಗ ಅಭಿಮಾನಿಗಳ ಜೊತೆ ಕುಳಿತು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಎಂಜಾಯ್​ ಮಾಡುತ್ತಾರೆ. ಆದರೆ ‘ಆದಿಪುರುಷ್​’ ರಿಲೀಸ್​ ದಿನವೇ ಪ್ರಭಾಸ್​ ಅವರು ಭಾರತದಲ್ಲಿ ಇರುವುದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.

ಪ್ರಭಾಸ್​ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ. ‘ಬಾಹುಬಲಿ’ ಸಿನಿಮಾ ರಿಲೀಸ್​ ಆದ ನಂತರ ಅವರಿಗೆ ಈ ಪರಿ ಜನಪ್ರಿಯತೆ ಸಿಕ್ಕಿತು. ಅಮೆರಿಕದ ಹಲವು ಸೆಂಟರ್​ಗಳಲ್ಲಿ ‘ಆದಿಪುರುಷ್​’ ಬಿಡುಗಡೆ ಆಗುತ್ತಿದೆ. ಹಾಗಾಗಿ ಅಲ್ಲಿಯೂ ಕೂಡ ಪ್ರಚಾರ ಮಾಡಬೇಕು ಎಂಬುದು ಚಿತ್ರತಂಡದ ಉದ್ದೇಶ. ಹಾಗಾಗಿ ಪ್ರಭಾಸ್​ ಅವರು ಅಮೆರಿಕಕ್ಕೆ ತೆರಳಿ ಅಲ್ಲಿನ ಕೆಲವು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಅಲ್ಲದೇ ಕೆಲವು ಅಭಿಮಾನಿಗಳನ್ನು ಕೂಡ ಭೇಟಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ranbir Kapoor: ಬಡ ಮಕ್ಕಳಿಗಾಗಿ ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ ಉಚಿತವಾಗಿ ನೀಡಲು ಮುಂದಾದ ನಟ ರಣಬೀರ್​ ಕಪೂರ್​

‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದು, ಸೀತೆ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್​ ಅಭಿನಯಿಸಿದ್ದಾರೆ. ರಾವಣನ ಪಾತ್ರವನ್ನು ಸೈಫ್​ ಅಲಿ ಖಾನ್​ ಮಾಡಿದ್ದಾರೆ. ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಎಲ್ಲರ ಮನದಲ್ಲೂ ಮೂಡಿದೆ.

ಇದನ್ನೂ ಓದಿ: Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?

‘ಆದಿಪುರುಷ್​’ ಚಿತ್ರದ ಹಿಂದಿ ಅವತರಣಿಕೆಯ ಸೆನ್ಸಾರ್​ ಸರ್ಟಿಫಿಕೇಟ್​ ಲಭ್ಯವಾಗಿದೆ. ಇದರಲ್ಲಿ ಚಿತ್ರದ ಅವಧಿ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ, ಈ ಸಿನಿಮಾದ ಅವಧಿ ಬರೋಬ್ಬರು 2 ಗಂಟೆ 59 ನಿಮಿಷಗಳು. ಅಂದರೆ, 3 ಗಂಟೆಗೆ ಒಂದು ನಿಮಿಷ ಮಾತ್ರ ಬಾಕಿ. ಮಧ್ಯಂತರದ ಸಮಯವನ್ನೂ ಸೇರಿಸಿದರೆ ಈ ಸಿನಿಮಾದ ಪ್ರದರ್ಶನಕ್ಕೆ 3 ಗಂಟೆ 15 ನಿಮಿಷ ಬೇಕು. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಬಹುದು. ಕೆಲವೊಮ್ಮೆ ಇದರಿಂದ ಸಿನಿಮಾಗೆ ಹಿನ್ನಡೆ ಆಗಲೂಬಹುದು. ಹಾಗಂತ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. 3 ಗಂಟೆ ಅವಧಿ ಇರುವ ಸಿನಿಮಾಗಳು ಸೂಪರ್​ ಹಿಟ್​ ಉದಾಹರಣೆ ಕೂಡ ಇದೆ.

ಇದನ್ನೂ ಓದಿ: Prabhas: ಮೊದಲ ದಿನ ‘ಆದಿಪುರುಷ್​’ 100 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ? ಇಲ್ಲಿದೆ ಬಾಕ್ಸ್​ ಆಫೀಸ್​ ತಜ್ಞರ ಅಂದಾಜು ಲೆಕ್ಕ

ಕರ್ನಾಟಕದಲ್ಲಿ ‘ಆದಿಪುರುಷ್​’ ಸಿನಿಮಾದ ವಿತರಣೆ ಹಕ್ಕುಗಳು ‘ಕೆಆರ್​ಜಿ ಸ್ಟುಡಿಯೋಸ್​’ ಸಂಸ್ಥೆಯ ಪಾಲಾಗಿದೆ. ‘ನಮಗೆ ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.