AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಸಿಕ್ತು ‘ಆದಿಪುರುಷ್​’ ಚಿತ್ರದ ಸೆನ್ಸಾರ್​ ಸರ್ಟಿಫಿಕೇಟ್​; ಅಬ್ಬಬ್ಬಾ ಈ ಸಿನಿಮಾದ ಅವಧಿ ಇಷ್ಟೊಂದಾ?

Adipurush run time: ‘ಆದಿಪುರುಷ್​’ ಚಿತ್ರದ ಅವಧಿ ಬಹಳ ದೀರ್ಘವಾಗಿ ಇರುವುದರಿಂದ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಆಗಬಹುದು. ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

Adipurush: ಸಿಕ್ತು ‘ಆದಿಪುರುಷ್​’ ಚಿತ್ರದ ಸೆನ್ಸಾರ್​ ಸರ್ಟಿಫಿಕೇಟ್​; ಅಬ್ಬಬ್ಬಾ ಈ ಸಿನಿಮಾದ ಅವಧಿ ಇಷ್ಟೊಂದಾ?
‘ಆದಿಪುರುಷ್​’ ಚಿತ್ರದ ಸೆನ್ಸಾರ್​ ಸರ್ಟಿಫಿಕೇಟ್​
ಮದನ್​ ಕುಮಾರ್​
|

Updated on: Jun 09, 2023 | 7:00 AM

Share

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅವರ ಅಭಿಮಾನಿಗಳು ‘ಆದಿಪುರುಷ್​’ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಜೂನ್​ 16ರಂದು ವಿಶ್ವಾದ್ಯಂತ ಈ ಸಿನಿಮಾ ಅಬ್ಬರಿಸಲಿದೆ. 3ಡಿ ವರ್ಷನ್​ನಲ್ಲಿ ತೆರೆಕಾಣುತ್ತಿರುವುದರಿಂದ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ಓಂ ರಾವತ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ‘ಆದಿಪುರುಷ್​’ (Adipurush) ಚಿತ್ರವು ಸೆನ್ಸಾರ್​ ಪರೀಕ್ಷೆಯಲ್ಲಿ ಪಾಸ್​ ಆಗಿದೆ. ಸೆನ್ಸಾರ್​ ಮಂಡಳಿಯಲ್ಲಿ ಈ ಸಿನಿಮಾಗೆ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, ವಯಸ್ಸಿನ ಮಿತಿ ಇಲ್ಲದೇ ಯಾರು ಬೇಕಿದ್ದರೂ ಈ ಸಿನಿಮಾವನ್ನು ನೋಡಬಹುದು. ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ‘ಯು’ ಪ್ರಮಾಣಪತ್ರ ಬಹಳ ಮುಖ್ಯ ಆಗುತ್ತದೆ. ಇನ್ನು ಈ ಸಿನಿಮಾದ ಅವಧಿ (Adipurush duration) ಬರೋಬ್ಬರಿ 3 ಗಂಟೆ ಇದೆ ಎಂಬುದು ಗಮನಿಸಬೇಕಾದ ಅಂಶ.

‘ಆದಿಪುರುಷ್​’ ಚಿತ್ರದ ಹಿಂದಿ ಅವತರಣಿಕೆಯ ಸೆನ್ಸಾರ್​ ಸರ್ಟಿಫಿಕೇಟ್​ ಲಭ್ಯವಾಗಿದೆ. ಇದರಲ್ಲಿ ಚಿತ್ರದ ಅವಧಿ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ, ಈ ಸಿನಿಮಾದ ಅವಧಿ ಬರೋಬ್ಬರು 2 ಗಂಟೆ 59 ನಿಮಿಷಗಳು. ಅಂದರೆ, 3 ಗಂಟೆಗೆ ಒಂದು ನಿಮಿಷ ಮಾತ್ರ ಬಾಕಿ. ಮಧ್ಯಂತರದ ಸಮಯವನ್ನೂ ಸೇರಿಸಿದರೆ ಈ ಸಿನಿಮಾದ ಪ್ರದರ್ಶನಕ್ಕೆ 3 ಗಂಟೆ 15 ನಿಮಿಷ ಬೇಕು. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಬಹುದು. ಕೆಲವೊಮ್ಮೆ ಇದರಿಂದ ಸಿನಿಮಾಗೆ ಹಿನ್ನಡೆ ಆಗಲೂಬಹುದು. ಹಾಗಂತ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. 3 ಗಂಟೆ ಅವಧಿ ಇರುವ ಸಿನಿಮಾಗಳು ಸೂಪರ್​ ಹಿಟ್​ ಉದಾಹರಣೆ ಕೂಡ ಇದೆ.

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿದ್ಧವಾಗಿದೆ. ಆದ್ದರಿಂದ ಜನರಿಗೆ ಮತ್ತು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ಭಾವನೆ ಮೂಡಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದು, ಸೀತೆ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಿದ್ದಾರೆ. ಮೊದಲ ದಿನ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಮೂಡಿದೆ. ಈ ನಡುವೆ ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್​ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್​ ಕಪೂರ್​ ಅವರು ಬರೋಬ್ಬರಿ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?

‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್​ವಾಲ್ ಅವರು ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ‘ಆದಿಪುರುಷ್ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕಾದ ಸಿನಿಮಾ. ಇದನ್ನು ಎಲ್ಲರೂ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ತೆಲಂಗಾಣದಾದ್ಯಂತ ಇರುವ ಸರ್ಕಾರಿ ಶಾಲೆಗಳು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ. ಜೈ ಶ್ರೀರಾಮ್ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?