ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ

Weekend With Ramesh: ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ ರಾಜಕೀಯ ಮಾಡಿ ಬಂದ ಡಿಕೆ ಶಿವಕುಮಾರ್, ಜನರಲ್ ಹಾಸ್ಟೆಲ್ ದಿನಗಳನ್ನು ಸಣ್ಣದಾಗಿ ವೀಕೆಂಡ್ ವಿತ್ ರಮೇಶ್​ ನಲ್ಲಿ ನೆನಪಿಸಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ
ಡಿಕೆ ಶಿವಕುಮಾರ್
Follow us
ಮಂಜುನಾಥ ಸಿ.
|

Updated on: Jun 10, 2023 | 11:01 PM

ಡಿಕೆ ಶಿವಕುಮಾರ್ (DK Shivakumar) ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ, ಬುದ್ಧಿಬಲದ ರಾಜಕೀಯ ಮಾಡಿ ಬಂದವರು. ರಾಜಕೀಯದಲ್ಲಿ ವರ್ಷಗಳು ಕಳೆಯುತ್ತಾ ಕಾಲಕ್ಕೆ ತಕ್ಕಂತೆ ತಮ್ಮ ರಾಜಕೀಯ ನೀತಿಗಳನ್ನು, ಪದ್ಧತಿಗಳನ್ನು ಬದಲಿಸಿಕೊಂಡಿದ್ದಾರಾದರೂ ಆರಂಭದ ದಿನಗಳಲ್ಲಿ ಆಗಿನ ಸಂದರ್ಭಕ್ಕೆ ಅನುಸಾರವಾಗಿ ಶಕ್ತಿ-ಸಾಮರ್ಥ್ಯದ ರಾಜಕೀಯ ಮಾಡಿದ್ದಾರೆ ಅದನ್ನು ಅವರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದೀಗ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಿದ್ದ ಡಿಕೆ ಶಿವಕುಮಾರ್, ವಿದ್ಯಾರ್ಥಿ ಸಂಘಟನೆ (Student Election), ಚುನಾವಣೆ ಬಗ್ಗೆ ಮಾತನಾಡುತ್ತಾ ಜನರಲ್ ಹಾಸ್ಟೆಲ್ (General Hostle) ದಿನಗಳನ್ನು ಬಹಳ ಚುಟುಕಾಗಿ ನೆನಪು ಮಾಡಿಕೊಂಡರು.

ಕರ್ನಾಟಕದ ರಾಜಕೀಯಕ್ಕೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೂ ಬೆಂಗಳೂರಿನ ಜನರಲ್ ಹಾಸ್ಟೆಲ್​ಗೂ ಬಹಳ ಗಾಢವಾದ ನಂಟಿದೆ. ಡಿಕೆ ಶಿವಕುಮಾರ್ ಸಹ ಅದೇ ಜನರಲ್ ಹಾಸ್ಟೆಲ್​ನಲ್ಲಿ ಇದ್ದು ರಾಜಕೀಯದ ಪಟ್ಟುಗಳನ್ನು ಕಲಿತವರು. ವೀಕೆಂಡ್ ವಿತ್ ರಮೇಶ್​ನಲ್ಲಿ ಜನರಲ್ ಹಾಸ್ಟೆಲ್​ನ ಉಲ್ಲೇಖ ಬಂದಿದ್ದು ಡಿಕೆ ಶಿವಕುಮಾರ್​ ಅವರಿಗಾಗಿ ಬರುತ್ತಿದ್ದ ಊಟದ ಕಾರಣಕ್ಕೆ.

ಹಾಸ್ಟೆಲ್​ನಲ್ಲಿದ್ದಾಗ ಡಿಕೆ ಶಿವಕುಮಾರ್ ಅವರಿಗಾಗಿ ದೊಡ್ಡ ಕ್ಯಾರಿಯರ್​ಗಳಲ್ಲಿ ಪುಲಾವ್, ಚಿಕನ್ ಇನ್ನಿತರೆ ಐಟಂಗಳು ಬರುತ್ತಿದ್ದವಂತೆ. ಡಿಕೆಶಿ ಜೊತೆ ಅವರ ಗೆಳೆಯರೆಲ್ಲರೂ ಸೇರಿ ಊಟ ಮಾಡುತ್ತಿದ್ದರಂತೆ. ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಆಗ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್, ಮೆಜೆಸ್ಟಿಕ್​ನ ಪ್ರಮುಖ ಹೋಟೆಲ್​ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡಬೇಕು ಎಂದು ಆಗ್ರಹಿಸಿದ್ದರಂತೆ. ಅಂತೆಯೇ ಆಗಿನ ಪ್ರಮುಖ ಹೋಟೆಲ್​ಗಳು ಬಹಳ ಕಡಿಮೆ ದರಕ್ಕೆ ವಿದ್ಯಾರ್ಥಿಗಳಿಗೆ ಊಟ ಕೊಡುತ್ತಿದ್ದರಂತೆ. ಡಿಕೆ ಶಿವಕುಮಾರ್ ಸಹ ಆಗಾಗ್ಗೆ ಹೋಟೆಲ್​ಗಳಿಗೆ ಹೋಗುತ್ತಿದ್ದರಂತೆ ಅವರು ಹೋದರೆ ಅವರೊಡನೆ ಸುಮಾರು 20 ಜನ ಜೊತೆಗೆ ಹೋಗುತ್ತಿದ್ದರಂತೆ. ಅದರಿಂದ ಹೋಟೆಲ್​ಗೆ ಬರುವ ಇತರೆ ಗ್ರಾಹಕರಿಗೆ ಸಮಸ್ಯೆ ಆಗುತ್ತದೆಂದು ಹೋಟೆಲ್ ನವರೇ ಹಾಸ್ಟೆಲ್​ಗೆ ಕ್ಯಾರಿಯರ್​ನಲ್ಲಿ ಊಟ ಕಳಿಸುತ್ತಿದ್ದರಂತೆ. ಆಗಲೇ ಆ ಮಾದರಿಯ ಹವಾ ಇಟ್ಟಿದ್ದರು ಡಿ.ಕೆ.ಶಿವಕುಮಾರ್.

ಇದನ್ನು ಓದಿ:‘ವೀಕೆಂಡ್ ವಿತ್ ರಮೇಶ್’ನಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್​

ಇನ್ನು ಅದೇ ಕಾರ್ಯಕ್ರಮದಲ್ಲಿ, ತಾವೊಮ್ಮೆ ಚುನಾವಣೆ ಗೆದ್ದಾಗ ಇಡೀಯ ಮೆಜೆಸ್ಟಿಕ್ ಏರಿಯಾವನ್ನೇ ಬಂದ್ ಮಾಡಿಬಿಟ್ಟಿದ್ದರು ಎಂಬುದನ್ನು ಡಿ.ಕೆ.ಸುರೇಶ್ ನೆನಪು ಮಾಡಿಕೊಂಡಿದ್ದಾರೆ. ಆಗೆಲ್ಲ ನನ್ನ ಬಗ್ಗೆ ಭಕ್ತಿಗಿಂತಲೂ ಭಯವೇ ಹೆಚ್ಚಿಗಿತ್ತು ಎಂದು ಸೂಚ್ಯವಾಗಿ ತಮ್ಮ ಅಂದಿನ ದಿನದ ಖದರ್ ಬಗ್ಗೆ ಶಿವಕುಮಾರ್ ಹೇಳಿದರು.

ಬಹಳ ಸಣ್ಣ ವಯಸ್ಸಿನಿಂದಲೇ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿ.ಕೆ.ಶಿವಕುಮಾರ್, ತಮ್ಮ ಏಳನೇ ವಯಸ್ಸಿನಲ್ಲಿಯೇ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಂತೆ. ವಿದ್ಯಾರ್ಥಿ ಜೀವನದಲ್ಲಿಯೇ ಸಾಕಷ್ಟು ಚುನಾವಣೆಗಳನ್ನು ಎದುರಿಸಿ ಗೆದ್ದ ಡಿ.ಕೆ.ಶಿವಕುಮಾರ್, ತಮಗೆ ಚುನಾವಣೆ ಗೆಲ್ಲುವ ತಂತ್ರಗಳ ಅರಿವು ಆಗಿನಿಂದಲೂ ಇತ್ತು ಚುನಾವಣೆ ಗೆಲ್ಲುವ ಕಲೆ ಕರಗತವಾಗಿತ್ತು ಎಂದಿದ್ದಾರೆ.‘

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ