Pushpa 2 Twitter Review: ‘ಪಾರ್ಟಿ ಇದೆ ಪುಷ್ಪ’; ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ನೋಡಿ ಪ್ರತಿಕ್ರಿಯಿಸಿದ ಫ್ಯಾನ್ಸ್

‘ಪುಷ್ಪ’ ಚಿತ್ರದಲ್ಲಿ ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಪಾತ್ರಗಳ ಮಧ್ಯೆ ಕಿತ್ತಾಟ ಇತ್ತು. ಈಗ ಎರಡನೇ ಪಾರ್ಟ್​​ನಲ್ಲಿಯೂ ಅದು ಮುಂದುವರಿದಿದೆ. ಇಡೀ ಸಿನಿಮಾದ ಹೈಲೈಟ್ ಇದುವೇ ಆಗಿದೆ. ಸಿನಿಮಾ ನೋಡಿದ ಅನೇಕರು ‘ಪಾರ್ಟಿ ಇದೆ ಪುಷ್ಪ’ ಎಂದು ಬರೆದುಕೊಳ್ಳುತ್ತಿದ್ದಾರೆ.

Pushpa 2 Twitter Review: ‘ಪಾರ್ಟಿ ಇದೆ ಪುಷ್ಪ’; ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ನೋಡಿ ಪ್ರತಿಕ್ರಿಯಿಸಿದ ಫ್ಯಾನ್ಸ್
ಅಲ್ಲು ಅರ್ಜುನ್

Updated on: Dec 05, 2024 | 7:23 AM

‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 5) ವಿಶ್ವಾದ್ಯಂತ ರಿಲೀಸ್ ಆಗಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಡಿಸೆಂಬರ್ 4ರಂದು ‘ಪುಷ್ಪ 2’ ತಂಡದವರು ಪ್ರೀಮಿಯರ್ ಆಯೋಜನೆ ಮಾಡಿದ್ದರು. ಎಲ್ಲ ಕಡೆಗಳಲ್ಲಿ ಹಲವು ಶೋಗಳನ್ನು ಹಾಕಲಾಗಿತ್ತು. ಮಧ್ಯರಾತ್ರಿಯೇ ಸಿನಿಮಾ ನೋಡಿದವರು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಹೇಗಿದೆ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇಂಡಸ್ಟ್ರಿ ಹಿಟ್ ಎಂದು ಕರೆದಿದ್ದಾರೆ.

‘ಪುಷ್ಪ’ ಚಿತ್ರದಲ್ಲಿ ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಪಾತ್ರಗಳ ಮಧ್ಯೆ ಕಿತ್ತಾಟ ಇತ್ತು. ಈಗ ಎರಡನೇ ಪಾರ್ಟ್​​ನಲ್ಲಿಯೂ ಅದು ಮುಂದುವರಿದಿದೆ. ಇಡೀ ಸಿನಿಮಾದ ಹೈಲೈಟ್ ಇದುವೇ ಆಗಿದೆ. ಮೊದಲ ಭಾಗದಲ್ಲಿ ‘ಪಾರ್ಟಿ ಲೇದಾ ಪುಷ್ಪ’ (ಪಾರ್ಟಿ ಇಲ್ವ ಪುಷ್ಪ) ಎಂಬ ಡೈಲಾಗ್ ಹೈಲೈಟ್ ಆಗಿತ್ತು. ಈಗ ಸಿನಿಮಾ ನೋಡಿದ ಅನೇಕರು ‘ಪಾರ್ಟಿ ಇದೆ ಪುಷ್ಪ’ ಎಂದು ಬರೆದುಕೊಳ್ಳುತ್ತಿದ್ದಾರೆ.

ಕೆಲವರು ‘ಪುಷ್ಪ 2’ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಎಂಟ್ರಿಯನ್ನು ಮೆಚ್ಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಎಂಟ್ರಿ ಸೂಪರ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಸಿನಿಮಾದ ಉದ್ದಕ್ಕೂ ಇರುವ ಅಲ್ಲು ಅರ್ಜುನ್ ಅವರ ಮಾಸ್ ಎಂಟ್ರಿಯನ್ನು ಕೊಂಡಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎಂದು ಕರೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್​ಗಳು ವೈರಲ್ ಆಗುತ್ತಿವೆ. ಕೆಲವರು ಈ ಚಿತ್ರವನ್ನು ‘ಫುಲ್ ಮ್ಯಾಜಿಕ್’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಹೇಗಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರ? ಇಲ್ಲಿದೆ ಮೊದಲಾರ್ಧದ ಹೈಲೈಟ್

ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದಲ್ಲಿ ಹಿಟ್ ತಂದುಕೊಡುವ ಸೂಚನೆಯನ್ನು ‘ಪುಷ್ಪ 2’ ಸಿನಿಮಾ ನೀಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸಿದ್ದಾರೆ. ಮೂರನೇ ಭಾಗಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.