ಹೇಗಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರ? ಇಲ್ಲಿದೆ ಮೊದಲಾರ್ಧದ ಹೈಲೈಟ್
‘ಪುಷ್ಪ’ ಸಿನಿಮಾ ಹಿಟ್ ಆದ ಬಳಿಕ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿದೆ. ಬಿಗ್ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾದ ಮೊದಲಾರ್ಧದ ಬಗ್ಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
‘ಪುಷ್ಪ 2’ ಚಿತ್ರಕ್ಕೆ ಭರ್ಜರಿ ಹೈಪ್ ನೀಡಲಾಗಿದೆ. ಅಲ್ಲು ಅರ್ಜುನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ಮಿಂಚಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ದೊಡ್ಡ ಮೊತ್ತದಲ್ಲಿ ನಿರ್ಮಾಣ ಮಾಡಿದೆ. ಮೊದಲ ಭಾಗ ಹಿಟ್ ಆಗಿರುವುದರಿಂದ ಸಹಜವಾಗಿಯೇ ಎರಡನೇ ಭಾಗದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅಲ್ಲು ಅರ್ಜುನ್ ಅವರು ‘ಪುಷ್ಪ’ ಚಿತ್ರದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಅದು ಎರಡನೇ ಪಾರ್ಟ್‌ನಲ್ಲೂ ಮುಂದುವರಿದಿದೆ. ಅವರು ಮತ್ತಷ್ಟು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಮಾಸ್ ಆಗಿ ಎಂಟ್ರಿ ಕೊಟ್ಟರೆ ಫ್ಯಾನ್ಸ್ ಖುಷಿಪಡುತ್ತಾರೆ. ಅದೇ ರೀತಿ ಅಲ್ಲು ಅರ್ಜುನ್ ಅವರ ಎಂಟ್ರಿ ಸಖತ್ ಮಾಸ್ ಆಗಿ ಇದೆ. ಮೊದಲಿಗೆ ಬಿಗ್ ಫೈಟ್ ಇದೆ.
ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಪುಷ್ಪರಾಜ್‌ನ ವಿವಾಹ ಆಗಿದ್ದಾಳೆ. ಎರಡನೇ ಪಾರ್ಟ್‌ನ ಮೊದಲಾರ್ಧದಲ್ಲಿ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.
ಶ್ರೀಲೀಲಾ ಡ್ಯಾನ್ಸ್ ಮಾಡಿರೋ ‘ಕಿಸ್ ಕಿಸ್ ಕಿಸಕ್’ ಹಾಡು ಮೊದಲಾರ್ಧದಲ್ಲಿ ಬರೋದಿಲ್ಲ. ಇದಕ್ಕಾಗಿ ದ್ವಿತೀಯಾರ್ಧದ ವರೆಗೆ ಕಾಯಬೇಕು.
ಡಾಲಿ ಧನಂಜಯ್ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ‘ಪುಷ್ಪ 2’ ಚಿತ್ರದ ಮೊದಲಾರ್ಧದಲ್ಲಿ ಬರಲ್ಲ.
ಮೊದಲಾರ್ಧದಲ್ಲಿ ಭರ್ಜರಿ ಫೈಟ್‌ಗಳನ್ನು ಇಟ್ಟಿದ್ದಾರೆ ಸುಕುಮಾರ್. ಹೊಡಿಬಡಿ ಇಷ್ಟ ಆಗುವವರಿಗೆ ‘ಪುಷ್ಪ 2’ ಚಿತ್ರದ ಮೊದಲಾರ್ಧ ಇಷ್ಟ ಆಗುತ್ತದೆ.
‘ಪುಷ್ಪ’ ಚಿತ್ರದಲ್ಲಿ ಪುಷ್ಪರಾಜ್ ಸಾಮಾನ್ಯ ವ್ಯಕ್ತಿಯಾಗಿರುತ್ತಾನೆ. ನಂತರ ಆತ ದೊಡ್ಡ ಡಾನ್ ಆಗುತ್ತಾನೆ. ಡಾನ್ ಆದ ನಂತರದ ಕಥೆಯೇ ‘ಪುಷ್ಪ 2’ ಚಿತ್ರದ ಮೊದಲಾರ್ಧದಲ್ಲಿ ಇದೆ.
‘ಪುಷ್ಪ’ ಚಿತ್ರದ ಮುಖ್ಯ ವಿಚಾರವೇ ರಕ್ತ ಚಂದನದ ವಿಚಾರ. ಎರಡನೇ ಪಾರ್ಟ್‌ನಲ್ಲು ರಕ್ತ ಚಂದನದ ವಿಚಾರ ಹೈಲೈಟ್ ಆಗಿದೆ.
ಶೇಖಾವತ್ ಹಾಗೂ ಪುಷ್ಪರಾಜ್ ಮಧ್ಯೆ ಇಗೋ ಕಿತ್ತಾಟ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.